ಹಿಮ್ಸ್ ನಲ್ಲಿ ಶೀಘ್ರದಲ್ಲೇ ಜಾರಿಯಾಗಲಿರುವ ಮದರ್ ಮಿಲಕ್ ಬ್ಯಾಂಕ್ ಯೋಜನೆ.

0

ಹಾಸನ : ಹಿಮ್ಸ್‌ನಲ್ಲಿ ಮದರ್ ಮಿಲ್ಕ್ ಬ್ಯಾಂಕ್

ಸರಕಾರದಿಂದ ಅನುಮೋದನೆ 80 ಲಕ್ಷರೂ. ವೆಚ್ಚದಲ್ಲಿ ಸ್ಥಾಪನೆಗೆ ಸಿದ್ಧತೆ ದಾನಿಗಳ ನೆರವಿನ ನಿರೀಕ್ಷೆ

ವಿಜ್ಞಾನ ಯುಗದಲ್ಲಿ ಎಲ್ಲವೂ ಕೃತಕಮಯ, ತಾಯಿ ಎದೆಹಾಲು ಕೂಡ ಇದಕ್ಕೆ ಹೊರತಾಗಿಲ್ಲ ಎದೆಹಾಲು ಸಿಗದೆ ನವಜಾತ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇತ್ತೀಚಿನ ದಿನದಲ್ಲಿ ಹೆಚ್ಚುತ್ತಿದೆ. ಇದನ್ನು ಮನಗಂಡ ಹಿಮ್ಸ್ ಹಾಗೂ ಜಿಲ್ಲಾಸ್ಪತ್ರೆ ವೈದ್ಯರು ತಾಯಿ ಎದೆಹಾಲು ಸಂರಕ್ಷಣಾ ಕೇಂದ್ರ (ಮದರ್ ಮಿಲ್ಡ್ ಬ್ಯಾಂಕ್) ಸ್ಥಾಪನೆಗೆ ಮುಂದಾಗಿದ್ದು, ಇದಕ್ಕೆ ಸರಕಾರ ಅನುಮೋದನೆ ನೀಡಿದೆ.

ಅತ್ಯಂತ ಪೌಷ್ಟಿಕತೆಯಿಂದ ಕೂಡಿದ ತಾಯಿಯ ಹಾಲು ಹಲವು ಕಾರಣದಿಂದ ತಾಯಂದಿರ ದೇಹದಲ್ಲಿ ಉತ್ಪಾದನೆ ಆಗುವುದಿಲ್ಲ. ಇನ್ನೊಂದಿಷ್ಟು ತಾಯ೦ದಿರು ಶಸ್ತ್ರಚಿಕಿತ್ಸೆ ಸೇರಿದಂತೆ ಕೆಲ ಸಮಸ್ಯೆಗಳಿಂದ ಹಾಲುಣಿಸಲು ಸಾಧ್ಯವಾ ಗುವುದಿಲ್ಲ.

ಇದನ್ನು ಗಮನದಲ್ಲಿಟ್ಟು ಕೊ೦ಡು ಯಾವ ತಾಯಂದಿರ ದೇಹದಲ್ಲಿ ಹೆಚ್ಚು ಉತ್ಪಾದನೆ ವ್ಯರ್ಥವಾಗುತ್ತದೋ ಅದನ್ನು ತಪ್ಪಿಸಿ, ಸಂರಕ್ಷಿಸುವ ಮೂಲಕ ತಾಯಿಯ ಎದೆಹಾಲಿನಿಂದ ವಂಚಿತವಾಗುವಂತಹ ದೊರಕಿಸಲು ಸರಕಾರಕ್ಕೆ ಕಳುಹಿಸಿದ್ದ ಪ್ರಸ್ತಾವಕ್ಕೆ ಅನುಮೋದನೆ ದೊರೆತಿದ್ದು, ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಮದರ್‌ ಮಿಲ್ಫ್ ಬ್ಯಾಂಕ್ ಸ್ಥಾಪನೆಗೆ ಸಿದ್ಧತೆ ಪ್ರಾರಂಭ ಗೊಂಡಿದೆ.

ಸಹಭಾಗಿತ್ವ ಅಗತ್ಯ :

” ಮದರ್‌ ಮಿಲ್ಸ್‌ಬ್ಯಾಂಕ್ ಸ್ಥಾಪನೆಗೆ ಸರಕಾರ ಅನುಮೋದನೆ ನೀಡಿದೆ. ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ದಾನಿಗಳ ನೆರವಿನಿಂದ ಸಮಾಜದ ಸಹಭಾಗಿತ್ವದಲ್ಲಿ ಅತ್ಯುತ್ತಮವಾಗಿ ಬ್ಯಾಂಕ್ ಸ್ಥಾಪಿಸಿ ಅನುಕೂಲ ಕಲ್ಪಿಸಲು ಉದ್ದೇಶಿಸಲಾಗಿದೆ “.

-ರವಿಕುಮಾರ್ ಹಿಮ್ಸ್‌ ನಿರ್ದೇಶಕರು ಹಾಸನ

” ತಾಯಿಯನ್ನು ಕಳೆದುಕೊಂಡ ಹಾಗೂ ತಾಯಿ ಇದ್ದರೂ, ಹಾಲು ಇಲ್ಲದೆ ಎಷ್ಟೋ ಶಿಶುಗಳು ಎದೆಹಾಲು ವಂಚಿತವಾಗಿ ರುತ್ತವೆ, ಮದರ್ ಮಿಲ್ಕ್ ಬ್ಯಾಂಕ್ ಒಂದು ರೀತಿ ಬ್ಲಡ್ ಬ್ಯಾಂಕ್ ಇದ್ದಂತೆ. ಅತ್ಯಗತ್ಯವಾಗಿ ಬ್ಯಾಂಕ್ ಅವಶ್ಯವಿದೆ. “

-ಡಾ.ಸಾವಿತ್ರಿ (ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞ ಹಾಸನ)

” ಶೇ.20ರಿಂದ ಶೇ.25 ರಷ್ಟು ಶಿಶುಗಳು ತಾಯಂದಿರ ಎದೆ ಹಾಲಿನ ಕೊರತೆ ಎದುರಿಸುತ್ತಿವೆ. ಅದನ್ನು ತಪ್ಪಿಸಿ ಪೌಷ್ಟಿಕಯುತ ಹಾಲು ಸಂಸ್ಕರಿಸಿ ಕೊಡಲು ಸಿದ್ಧತೆ ನಡೆಯುತ್ತಿದೆ. “

-ಡಾ.ಪ್ರಸನ್ನಕುಮಾರ್ ಜಿಲ್ಲಾಸ್ಪತ್ರೆ ಹಾಸನ

ನವಜಾತ ಶಿಶುಗಳಿಗೆ ಸಂಸ್ಕರಿಸಿದ ಹಾಲು , ಆಧುನಿಕ ಜಗತ್ತಿನಲ್ಲಿ ಎದೆಹಾಲು ಬದಲು ಪೌಡರ್‌ನ ಬಾಟಲಿ ಹಾಲುಣಿಸುವುದು ಒಂದು ರೀತಿ ಫ್ಯಾಷನ್ ಕೂಡ ಆಗಿದೆ. ಇದು ಮಾತಶಿಶುಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಇದನ್ನು ತಪ್ಪಿಸಲು ಮದರ್‌ ಮಿಲ್‌ಬ್ಯಾಂಕ್ ಸ್ಥಾಪನೆ ಮೂಲಕ ಶುದ್ದೀಕರಿಸಿದ ಹಾಗೂ ಸಂಸ್ಕರಿಸಿದ ಹಾಲನ್ನು ನಮಜಾತ ಶಿಶುಗಳಿಗೆ ಪೂರೈಕೆ ಮಾಡುವುದು ಮುಖ್ಯ ಉದ್ದೇಶವಾಗಿದೆ ಎನ್ನುತ್ತಾರೆ ಡಾ.ಪ್ರಸನ್ನಕುಮಾರ್,

ಕೆಲತಾಯಂದಿರ ಎದೆಯಲ್ಲಿ ಹೆಚ್ಚಿನಹಾಲು ಉತ್ಪಾದನೆಯಾಗುತ್ತದೆ. ಅದು ವ್ಯರ್ಥ ಆಗದಂತೆ ಸಂರಕ್ಷಿಸುವ ಮೂಲಕ ಕೊರತೆ ಎದುರಿಸುತ್ತಿರುವ ಶಿಶುಗಳಿಗೆ ಒದಸುವ ಮಹತ್ವದ ಯೋಜನೆ ಅಷ್ಟೇ ಅಲ್ಲ ತಾಯಿಯ ಎದೆಯ ಹಾಲು ಅಮೃತಕ್ಕೆ ಸಮಾನ ಎಂಬ ಹಿನ್ನೆಲೆಯಲ್ಲಿ ಎದೆಹಾಲಿನ ಮಹತ್ವವನ್ನು ತಿಳಿಸಿಕೊಡುವುದು ಇದರ ಮುಖ್ಯ ಉದ್ದೇಶ ಎನ್ನುತ್ತಾರೆ ಹಿಮ್ಸ್‌ ನಿರ್ದೇಶಕ

ನವಜಾತ ಶಿಶುಘಟಕ ಜಿಲ್ಲಾಸ್ಪತ್ರೆಯಲ್ಲಿ ರಾಜ್ಯದಲ್ಲೇ ಮಾದರಿಯಾದ 52 ಬೆಡ್‌ಗಳ ನವಜಾತ ಶಿಶುಗಳ ಹೈಟೆಕ್ ಘಟಕ ಕೂಡ ಕಾರ್ಯನಿರ್ವಹಿಸುತ್ತಿದೆ. ಖಾಸ ಆಸ್ಪತ್ರೆಗಳಿಗೆ ಸೆಡ್ಡುಹೊಡೆಯುವಂತೆ ನಮಜಾತ ಶಿಶುಗಳ ಚಿಕಿತ್ಸೆ, ಹಾರೈಕೆ ಮತ್ತು ಚಿಕಿತ್ಸೆ ಮೂಲಕ ಬಡವರ್ಗದ ಪೋಷಕರ ಪಾಲಿಗೆ ಸಂಜೀವಿನಿಯಾಗಿದೆ. ತಾಯಿ ಎದೆಯ ಹಾಲಿಗೆ ಸಮನಾದ ಹಾಲು ಪ್ರಪಂಚದಲ್ಲಿ ಇಲ್ಲ, ಅಷ್ಟರ ಮಟ್ಟಿಗೆ ರೋಗ ನಿರೋಧಕ ಶಕ್ತಿ ಹಾಗೂ ಮೆದುಳು ಬೆಳವಣಿಗೆಗೆ ಪೂರಕ ಪ್ರೋಟಿನ್ ಅಂಶಗಳು ಇರುತ್ತದೆ. ಆರು ತಿಂಗಳ ಕಾಲ ಶಿಶುಗಳಿಗೆ ತಾಯಿಯ ಎದೆಹಾಲು ಹೊರತಾಗಿ ಬೇರೆನೂ ಅಗತ್ಯವಿರುವುದಿಲ್ಲ, ಶಿಶುಗಳ ಜನ್ಯವಾಗಿ ಅಂಬೆಗಾಲಿಡಲು ವರ್ಷ ಬೇಕು ಶಿಶುಗಳ ಬೆಳವಣಿಗೆ ಮತ್ತು ಆರೋಗ್ಯಕ್ಕೆ ತಾಯಿ ಹಾಲು ಅಮೂಲ್ಯವಾದದ್ದು ಎನ್ನುತ್ತಾರೆ ತಿಂಗಳಿಗೆ 2 ಸಾವಿರ ಮಕ್ಕಳು ಜನಿಸುತ್ತವೆ.  ತಾಯಿಯ ಎದೆಹಾಲಿನಿಂದ ಜಿಲ್ಲಾಸ್ಪತ್ರೆ ಯೊಂದರಲ್ಲಿ ಪ್ರತಿ ತಿಂಗಳು ಜನಿಸುತ್ತವೆ. ಜಿಲ್ಲಾದ್ಯಂತ ಕನಿಷ್ಠ 1800 ಇದರಲ್ಲಿ ಶೇ.15ರಿಂದ ಶೇ.20ರಷ್ಟು ಎದೆಹಾಲು ವಂಚಿತವಾಗುತ್ತವೆ. ಇದನ್ನು ತಪ್ಪಿಸಲು ಈ ಘಟಕ ಮಹತ್ವದ ಪಾತ್ರ ವಹಿಸಲಿದೆ.

#himshassan

LEAVE A REPLY

Please enter your comment!
Please enter your name here