ಹಾಸನ ಜಿಲ್ಲಾಧಿಕಾರಿ ಆಪ್ತ ಸಹಾಯಕ, ಗ್ರಾಮ ಲೆಕ್ಕಿಗ ಲಂಚ ಪಡೆಯುತ್ತಿದ್ದ ವೇಳೆ ACB ಬಲೆಗೆ

0

ಹಾಸನ: ರಾಮನಗರ ಮೂಲದ ಉದ್ಯಮಿ ಮಹಿಳೆಯೊಬ್ಬರು ಅರಕಲಗೂಡು ತಾಲ್ಲೂಕಿನಲ್ಲಿ ನೂತನ ಪೆಟ್ರೋಲ್ ಬಂಕ್ ತೆರೆಯಲು ಯೋಜಿಸಿದ್ದರು . ಭೂ ಪರಿವರ್ತನೆ ಹಾಗೂ ಪೆಟ್ರೋಲ್ ಬಂಕ್‌ಗೆ NOC , ಬೇಕಿತ್ತು., ಅದನ್ನ ಪಡೆಯಲು ಸುಭಾಶ್(ಸರ್ಕಾರಿ ಅಧಿಕಾರಿ) ಆ ಮಹಿಳೆಯಿಂದ 1.5 ಲಕ್ಷ ₹ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಈ ಸಂಬಂಧ ಹಲವು ಸುತ್ತಿನ ಮಾತುಕತೆ ಸಹ ನಡೆದು., ಕೃಷಿ ಜಮೀನು ಭೂ ಪರಿವರ್ತನೆ ಮಾಡಿಕೊಡಲು ಮಹಿಳೆಯಿಂದ ಲಂಚ ಪಡೆಯುತ್ತಿದ್ದ ಜಿಲ್ಲಾಧಿಕಾರಿ ಆಪ್ತ ಸಹಾಯಕ, ಗ್ರಾಮ ಲೆಕ್ಕಿಗ ಸುಭಾಶ್‌ ಚೌವ್ಹಾಣ್‌ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ರೆಡ್ ಹ್ಯಾಂಡ್ ಆಗಿ ಬಿದ್ದಿದ್ದಾರೆ.

ಈ ಅಧಿಕಾರಿ ಸಿಕ್ಕಿಬೀಳಲು ಈ ಸಂಬಂಧ ಉದ್ಯಮಿ ಮಹಿಳೆ ACB ಕಛೇರಿಗೆ ಮೊದಲೇ ನೊಂದು ದೂರು ನೀಡಿದ್ದರು. ಕಳೆದ ಮಂಗಳವಾರ ನಗರದ ಪ್ರತಿಷ್ಠಿತ ಶ್ರೀ ಕೃಷ್ಣ ಹೋಟೆಲ್‍ನಲ್ಲಿ ಮೊದಲ ಕಂತಿನ 50,000₹ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ DYSP ಸತೀಶ್ ನೇತೃತ್ವದ ತಂಡ, ಹಣದ ಸಮೇತ ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿ ., ಭ್ರಷ್ಟಾಚಾರ ನಿಗ್ರಹಿಸಲು‌ ಪಣ ತೊಟ್ಟಿದೆ .

#stopcurroption #crimedairyhassan #acbhassan #hassanpolice #karnatakapolice

LEAVE A REPLY

Please enter your comment!
Please enter your name here