ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ. ಸಂಸದರು ಹಾಗೂ ಜೆಡಿಎಸ್ ಯುವ ಮುಖಂಡರಾದ ಪ್ರಜ್ವಲ್ ರೇವಣ್ಣನವರು ಎಲ್ಲಾ ಮಸೀದಿಗಳಿಗೆ ಬಂದು ಕೃತಜ್ಞತೆ ಹೇಳಿದ್ದು, ನಾನು ಚುನಾವಣೆಯಲ್ಲಿ ಗೆಲ್ಲುವದಕ್ಕೆ ಕಾರಣರಾದ ಎಲ್ಲಾ ಮುಸಲ್ಮಾನರು ಮತ್ತು ಹಾಸನದ ಜನತೆಯ ಆಶೀರ್ವಾದ ಪಡೆದು ಅವರ ಏನು ಕೆಲಸ ಕಾರ್ಯ ಇದೆ ಸಮಸ್ಯೆಗಳ ಬಗ್ಗೆ ಮನವಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಯಾವುದೇ ಒಂದು ಕೆಲಸ ಆಗುವ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತೇವೆ.
ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ನೇತೃತ್ವದಲ್ಲಿ ಎಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು. ಅದೆ ರೀತಿ ಮುಸಲ್ಮಾನರು ಅವರವರ ವಾರ್ಡಿನಲ್ಲಿ ಸಮಸ್ಯೆಗಳನ್ನು ಹೇಳಲಾಗಿದ್ದು, ಕೆಲಸ ಕಾಮಗಾರಿ ಆಗಿಲ್ಲ ಎಂದರೇ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುವುದು.
ಹಿಂದಿನ ದಿನಗಳಲ್ಲಿ ರೇವಣ್ಣನವರು ಸಚಿವರಾಗಿದ್ದ ವೇಳೆ ಮುಸಲ್ಮಾನ ಅಲ್ಪಸಂಖ್ಯಾತರಿಗೆ ಹಲವಾರು ಕೆಲಸ ಕಾರ್ಯಗಳನ್ನು ಮತ್ತು ಅನುಧಾನ ತಮದುಕೊಡುವಲ್ಲಿ ಮಾಡಿದನ್ನು ಹಿಂದಿನ ಸರಕಾರದಲ್ಲಿ ಹಿಂಪಡೆಯಲಾಗಿತ್ತು. ೧೫ನೇ ಹಣಕಾಸಿನಲ್ಲಿ ನಗರಸಭೆ ಹಣ ಬರುತ್ತದೆ ಅದರಲ್ಲಿ ಹೆಚ್ಚು ಹೊತ್ತನ್ನು ಮುಸಲ್ಮಾನ ಬಾಂಧವರಿಗೆ ಮತ್ತು ಎಲ್ಲಾ ವಾರ್ಡ್‌ಗಳಿಗೆ ಕೊಡುತ್ತೇವೆ ಎಂದು ಭರವಸೆ ನುಡಿದರು.