ಟೈಲರ್, ನಿರ್ವಾಹಕ ಮತ್ತು ಸಹಾಯಕರ ಹುದ್ದೆಗಳ ಭರ್ತಿಗೆ ಸಂದರ್ಶನ

0
Rural, Real People, Girl, Looking, working, at Home
Rural, Real People, Girl, Looking, working, at Home

ಹಾಸನ : ಹಿಮತ್ ಸಿಂಕಾ ಲಿನೆ ನ್ಸ್ ಮಂದ್ರ್ಯ ಟ್ರೆಂಡ್ ಪ್ರೈವೆಟ್ ಲಿಮಿಟೆಡ್ ನಲ್ಲಿ ಲಭ್ಯವಿರುವ ಟೈಲರ್‍ಗಳು, ನಿರ್ವಾಹಕ ಮತ್ತು ಸಹಾಯಕರ ಹುದ್ದೆಗಳಿಗೆ 18 ರಿಂದ 30 ವರ್ಷ ವಯೋಮಾನದ 150 ಸೆ.ಮೀ. ಎತ್ತರವಿರುವ, ಕನಿಷ್ಟ 8ನೇ ತರಗತಿ ಉತ್ತೀರ್ಣರಾಗಿರುವ ಮಹಿಳಾ ಅಭ್ಯರ್ಥಿಗಳನ್ನು ಆ. 29 ರಂದು ಬೆಳಿಗ್ಗೆ 10 ಗಂಟೆಗೆ ಹಿಮತ್ ಸಿಂಕಾ ಲಿನೆನ್ಸ್ ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾ, ಗೊರೂರು ರಸ್ತೆ, ಹನುಮಂತಪುರ ಆವರಣದಲ್ಲಿ ಸಂದರ್ಶನ ನಡೆಸಿ, ಭರ್ತಿ ಮಾಡಿಕೊಳ್ಳಲು ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಮೂಲಕ ನೇಮಕಾತಿ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಾನ್ಯತೆ ಪಡೆದ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಹೊಂದಿದ ಅಭ್ಯರ್ಥಿಗಳಲ್ಲದೇ ವಿವಿಧ ಇಲಾಖೆಗಳ, ವಿವಿಧ ಯೋಜನೆ/ಕಾರ್ಯಕ್ರಮಗಳಲ್ಲಿ ತರಬೇತಿ ಪಡೆದ ಜಿಲ್ಲೆಯ ಅರ್ಹ ಅಭ್ಯರ್ಥಿಗಳು ಸದರಿ ನೇಮಕಾತಿ ಮೇಳದಲ್ಲಿ ಪಾಲ್ಗೊಂಡು ಉದ್ಯೋಗ ಪಡೆಯಲು ಅವಕಾಶವಿರುತ್ತದೆ. ಉದ್ಯೋಗಾಂಕ್ಷಿಗಳು ಭಾಗವಹಿಸುವಂತೆ (ಆಧಾರ್ ಕಾರ್ಡ್ 4 ಪ್ರತಿಗಳು, ವಿದ್ಯಾರ್ಹತೆ ದಾಖಲೆ ಪ್ರತಿಗಳು ಹಾಗೂ 6 ಭಾವ ಚಿತ್ರಗಳೊಂದಿಗೆ) ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಪೂರ್ಣೇಶ, ಮೊಬೈಲ್ ಸಂಖ್ಯೆ: 9742871492, ಗುರುರಾಜ್ ರಾವ್ ಮೊಬೈಲ್ ಸಂಖ್ಯೆ: 9742215015 ಸಂಪರ್ಕಿಸಬಹುದಾಗಿದೆ

LEAVE A REPLY

Please enter your comment!
Please enter your name here