
ಹಾಸನ ಜಿಲ್ಲೆ, ಬೇಲೂರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೆ.ಜೆ.ನಿಂಗರಾಜು ಹಾಗೂ ಪುಷ್ಪಲತಾ ದಂಪತಿಗಳ ಪುತ್ರಿ ಹಾಸನದ ಕೇಂದ್ರೀಯ ವಿದ್ಯಾಲಯದಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸ್ಫೂರ್ತಿ ಅವರು ದಿನಾಂಕ ಅಕ್ಟೋಬರ್ 13ರಿಂದ ರಿಂದ ಅಕ್ಟೋಬರ್ 17 ರವರೆಗೆ ದೆಹಲಿಯ ಪಿತಮ್ ಪುರ್‌ನಲ್ಲಿ ನಡೆದ 52ನೇ ಕೇಂದ್ರಿಯ ವಿದ್ಯಾಲಯದ ಶಾಲೆಗಳ (17 ವರ್ಷದ ಒಳಗಿನ ಬಾಲಕಿಯರ ವಿಭಾಗ )- 2023 ನೇ ಸಾಲಿನಲ್ಲಿ ನಡೆದ ರಾಷ್ಟ್ರ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಮೊದಲನೇ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದು ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.