ಮಕ್ಕಳಿಗೆ ಪೀನಟ್ ಬಟರ್ ಒಳ್ಳೆಯದೇ?

0

ಕಡಲೆಕಾಯಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಈ ಕಡಲೆಕಾಯಿಯ ಬೆಣ್ಣೆಯ ಬಗ್ಗೆ ನಿಮಗೆ ತಿಳಿದಿದ್ದೀಯಾ? ಪೀನಟ್ ಬಟರ್ ಎಂದು ಬಹಳ ಖ್ಯಾತಿ ಹೊಂದಿರುವ ಒಂದು ಪದಾರ್ಥ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದೊ ಅಥವಾ ಈ ಪದಾರ್ಥದಿಂದ ದೂರವಾಗಿರಬೇಕೊ ಎಂದು ಹಲವರ ತಲೆಯಲ್ಲಿರುವ ಒಂದು ಪ್ರಶ್ನೆ.
      ಮಕ್ಕಳಿಗೆ ಬಹಳ ಇಷ್ಟವಾಗಿರುವ ಪೀನಟ್ ಬಟರ್ ನ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಪೀನಟ್ ಬಟರ್ ಉಪಯೋಗಗಳು:

• ಕಣ್ಣಿನ ದೃಷ್ಟಿ ಸಮಸ್ಯೆಗೆ ಪರಿಹಾರ:
              ಈಗಿನ ಕಾಲದಲ್ಲಿ ಪುಟ್ಟಮಕ್ಕಳು ಕನ್ನಡಕ ಧರಿಸುವುದು ಬಹಳ ಸಾಮಾನ್ಯ. ಆದರೆ ಈ ಸಮಸ್ಯೆಯನ್ನು ಪಾರುಮಾಡಲು ಪ್ರೋಟೀನ್ ಹಾಗೂ ವಿಟಮಿನ್ ಅಂಶಗಳು ಉಪಯೋಗಕ್ಕೆ ಬರುತ್ತದೆ. ಪೀನಟ್ ಬಟ್ಟರ್ ನಲ್ಲಿರುವ ಪ್ರೊಟೀನ್ ಅಂಶ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸಲು ಲಾಭಕಾರಿ.

• ಮೆದುಳಿಗೆ ಉಪಯೋಗಕಾರಿ:

           ಪೀನಟ್ ಬಟ್ಟರ್ ಮೆದುಳಿಗೆ ಬಹಳ ಉತ್ತಮವಾದ ಆಹಾರ ಇದನ್ನು ಸೇವಿಸುವುದರಿಂದ ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಇದರಲ್ಲಿರುವ ವಿಟಮಿನ್ ನರಗಳ ಕಾರ್ಯಕ್ಕೆ ಬಹಳ ಉಪಯೋಗಕಾರಿ.

• ದೇಹದ ತೂಕವನ್ನು ಹೆಚ್ಚಿಸುತ್ತದೆ:
              ದೇಹದ ತೂಕ ಕಡಿಮೆ ಇರುವುದರಿಂದ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಇದನ್ನು ಸೇವಿಸಬಹುದು. ಇಲ್ಲಿರುವ ಕಬ್ಬಿಣಾಂಶ ದೇಹದ ತೂಕವನ್ನು ಹೆಚ್ಚಿಸುತ್ತದೆ ಆದರೆ ಇದನ್ನು ಹೆಚ್ಚು ಸೇವಿಸುವುದು ಕೂಡ ಒಳ್ಳೆಯದಲ್ಲ.

• ಮಕ್ಕಳಿಗೆ ಶಕ್ತಿ ನೀಡುತ್ತದೆ.

            ಪೀನಟ್ ಬಟರ್ ನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಕಾರ್ಬೋಹೈಡ್ರೇಟ್ಸ್ ಅಂಶ ಅಡಗಿರುವುದರಿಂದ ಇದು ಮಕ್ಕಳಿಗೆ ಹೆಚ್ಚು ಶಕ್ತಿ ನೀಡಿ, ಮೂಳೆಗಳನ್ನು ಕೂಡ ಬಲಶಾಲಿಯಾಗಿ ಮಾಡುತ್ತದೆ.

ಹಾಗಾಗಿ ಮಕ್ಕಳಿಗೆ ವಾರಕ್ಕೆ ಎರಡು-ಮೂರು ಚಮಚ ಪೀನಟ್ ಬಟರ್ ನೀಡುವುದು ಒಂದು ಆರೋಗ್ಯಕರ ಅಭ್ಯಾಸ, ಆದರೆ ಇದು ಅತಿಯಾದರೂ ಕಷ್ಟ. ನಿಮ್ಮ ಅರೋಗ್ಯ ನಿಮ್ಮ ಜವಾಬ್ದಾರಿ.

– ತನ್ವಿ. ಬಿ

LEAVE A REPLY

Please enter your comment!
Please enter your name here