ಎಣ್ಣೆ ಕುಡಿದ ಬಗ್ಗೆ ಅಪ್ಪನಿಗೆ ಹೇಳಿದ ಒಂದೆ ಕಾರಣಕ್ಕೆ ಪ್ರಕಾಶ್ ಕೊಲೆ,

0

ಇಬ್ರು ಆರೋಪಿಗಳ ಸೆರೆ, ಎಸ್ಪಿ ಹರಿರಾಂ ಶಂಕರ್ ಮಾಹಿತಿ

ಹಾಸನ: ಕೆಲ ದಿನಗಳ ಹಿಂದೆ ತಾಲೂಕಿನ ಚಿಕ್ಕಗೆಣಿಗೆರೆ ಗ್ರಾಮದಲ್ಲಿ ಮೂವರು ಎಣ್ಣೆ ಕುಡಿದ ಬಗ್ಗೆ ಅಪ್ಪನಿಗೆ ಹೇಳಿದ ಒಂದೆ ಕಾರಣಕ್ಕೆ ಇವರಲ್ಲಿ ಪ್ರಕಾಶ್ ಎಂಬುವರನ್ನು ಕೊಲೆ ಮಾಡಿ ಕಣ್ಮರೆಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯವರು ಯಶಸ್ವಿ ಕಾರ್ಯಚರಣೆ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಶ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಕೆಲ ದಿವಸಗಳ ಹಿಂದೆ ಸಂಜೆ ೬ ಗಂಟೆ ಸಮಯದಲ್ಲಿ ಚಿಕ್ಕಗೇಣಿಗೆರೆ ಗ್ರಾಮದಲ್ಲಿ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಪ್ರಕರಣ ನಡೆದಿದ್ದು, ಮೂರು ಜನ ಸ್ನೇಹಿತರಾದ ಪ್ರಕಾಶ್, ಪುನೀತ್, ಯಶವಂತ್ ಒಂದು ಮನೆಯಲ್ಲಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿರುವಾಗ ಇವರಲ್ಲಿ ಪುನಿತ್ ಎನ್ನುವರ ತಂದೆ ಪ್ರಕಾಶ್ ಅವರಿಗೆ ಕರೆ ಮಾಡಿ ಮಗನ ಬಗ್ಗೆ ವಿಚಾರಿಸಿದಾಗ ನನ್ನ ಜೊತೆ ಎಣ್ಣೆ ಹಾಕುತ್ತಿರುವುದಾಗಿ ಹೇಳಿದ್ದು, ನಂತರ ಮನೆಗೆ ಹೋದ ಪುನಿತ್ ಗೆ ತಂದೆ ಕ್ಲಾಸ್ ತೆಗೆದುಕೊಂಡಿದ್ದು, ಸಿಟ್ಟಿನಿಂದ ವಾಪಸ್ ಪ್ರಕಾಶ್ ಮನೆಗೆ ಬಂದು ಮುಖಕ್ಕೆ ಕೈಯಿಂದ ಹೊಡೆದು ಆತನ ತಲೆಯನ್ನು ಗೋಡೆಗೆ ಹೊಡೆಸಿದ್ದು, ರಾತ್ರಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದರೇ ಆತ ಉಳಿಯಲಿಲ್ಲ. ಈ ವಿಚಾರದಲ್ಲಿ ಇಬ್ಬರೂ ಆರೋಪಿಗಳಾದ ಪುನಿತ್ ಮತ್ತು ಯಶವಂತ್ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದರು. ಕೊಲೆ ಮಾಡಿದ ಬಳಿಕ ತಪ್ಪಿಸಿಕೊಳ್ಳಲು ಬೆಂಗಳೂರು ಇತರೆ ಸ್ಥಳಕ್ಕೆ ಹೋಗಿದ್ದು, ಇಂತಹ ಪ್ರಕರಣಗಳಲ್ಲಿ ಬೇಲ್ ಸಿಗುವುದಿಲ್ಲ ಎಂದು ಬೇರೆ ಬೇರೆ ಕಡೆ ಇದ್ದರು.

ಮಾಹಿತಿ ತಿಳಿದುಕೊಂಡು ನಮ್ ಪೊಲೀಸ್ ಸಿಬ್ಬಂದಿಗಳು ಪ್ರಯಾಣ ಬೆಳೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಕಾರ್ಯಚರಣೆ ನಡೆಸಿರುವುದಾಗಿ ಹೇಳಿದರು.

LEAVE A REPLY

Please enter your comment!
Please enter your name here