ಕರಾವಳಿ / ಹಾಸನ : ಹವಾಮಾನ ಇಲಾಖೆಯ ಸೂಚನೆ ಪ್ರಕಾರ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮೇ ಕೊನೆಯ ವಾರದಲ್ಲಿ ಮಳೆ ಮುಂದುವರಿಯಲಿದ್ದು , ಹಾಸನ ಸೇರಿ ಈ ಕೆಳಕಂಡ ಜಿಲ್ಲೆಗಳಲ್ಲಿ , ಕರಾವಳಿ ಜಿಲ್ಲೆಗಳಲ್ಲಿ 25ರವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಮುನ್ನೂಚನೆ ನೀಡಿದೆ .
ಹಾಸನ , ಚಿಕ್ಕಮಗಳೂರು , ಬೆಂಗಳೂರು , ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ , ಚಾಮರಾಜನಗರ, ಚಿಕ್ಕಬಳ್ಳಾಪುರ,, ಕೊಡಗು, ಕೋಲಾರ, ಮೈಸೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದ್ದು ಮೇ 22ರಿಂದ 25ರ ವರೆಗೆ ‘ಯೆಲ್ಲೊ ಅಲರ್ಟ್’ ಎಂದು ಮಾಹಿತಿ ಸಿಕ್ಕಿದೆ.
ದಕ್ಷಿಣಕನ್ನಡದಲ್ಲು ಒಂದು ದಿನ ಹೆಚ್ಚುವರಿ ಅಂದರೆ 26ರವರೆಗೆ ಗುಡುಗು, ಸಿಡಿಲು ಸಹಿತ ಮಳೆಯಾಗವ ಸಾಧ್ಯತೆ ಹೊರಹಾಕಿದೆ .,