ಆತ್ಮ ಹತ್ಯೆಗೆ ಶರಣಾದ ರೈತರ ಪತ್ನಿ 40 ವರ್ಷ ಒಳಗಿನ ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ನೆರವಾಗುವಂತಹ ಸಹಾಯಕ್ಕೆ ಸೂಚನೆ – -ಕವಿತರಾಜಾರಾಂ(ಅಪರ ಜಿಲ್ಲಾಧಿಕಾರಿ , ಹಾಸನ)

0

ಹಾಸನ ಜ.13(ಹಾಸನ್_ನ್ಯೂಸ್ !, ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿ ಅನ್ವಯ ಅರ್ಹ ರೈತರ ಕುಟುಂಬಗಳಿಗೆ ಆದಷ್ಟು ಬೇಗ ಸೂಕ್ತ ಪರಿಹಾರ ಹಾಗೂ  ಸೌಲಭ್ಯ ದೊರಕಿಸಿ ಎಂದು ಅಪರ  ಜಿಲ್ಲಾಧಿಕಾರಿ ಕವಿತರಾಜಾರಾಂ ತಿಳಿಸಿದ್ದಾರೆ.

     ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಆತ್ಮ ಹತ್ಯೆಗೆ ಶರಣಾದ ರೈತರ ಕುಟುಂಬದವರಿಗೆ ವಿಶೇಷ ಸೌಲಭ್ಯ ದೊರಕಿಸುವ ಕುರಿತು ನಡೆದ  ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆತ್ಮಹತ್ಯೆಗೀಡಾದ ರೈತರ ಕುಟುಂಬಗಳಿಗೆ ಈವರೆಗೆ ನೀಡಲಾಗಿರುವ ಸೌಲಭ್ಯದ ಬಗ್ಗೆ ಪರಿಶೀಲಿಸಿದರು.
    
     2020-21 ನೇ ಸಾಲಿನಲ್ಲಿ ಹಾಸನ ಉಪ ವಿಭಾಗದಲ್ಲಿ ಒಟ್ಟು 16 ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದು, ಅರಸೀಕೆರೆ 4 ಮಂದಿ, ಚನ್ನರಾಯಪಟ್ಟಣ ತಾಲ್ಲೂಕಿನಲಿ 3, ಹೊಳೆನರಸೀಪರ  ತಾಲ್ಲೂಕಿನಲ್ಲಿ ಒಬ್ಬ ರೈತ, ಹಾಸನ 8 ಮಂದಿ ರೈತರು ಆತ್ಮ ಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿನ ಒಬ್ಬ ರೈತರ ಕುಟುಂಬಕ್ಕೆ  ಚೆಕ್ ವಿತರಿಸಲಾಗಿದೆ, ಅರಸೀಕೆರೆ ಹಾಗೂ ಹಾಸನದಲ್ಲಿ ತಲಾ ಒಂದೊಂದು ಆತ್ಮಹತ್ಯೆ ಪ್ರಕರಣಗಳನ್ನು ಅಗತ್ಯ ದಾಖಲಾತಿಗಳನ್ನು ನೀಡದೆ ಇರುವ ಕಾರಣದಿಂದಾಗಿ ಮುಂದೂಡಲಾಗಿದೆ. ಹಾಸನದ 2 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. 12 ಪ್ರಕರಣಗಳಿಗೆ ಒಪ್ಪಿಗೆ ಸೂಚಿಸಲಾಗಿದೆ ಮತ್ತು 11 ಪ್ರಕರಣಗಳಿಗೆ ಚೆಕ್ ವಿತರಣೆ ಮಾಡಬೇಕಾಗಿದೆ ಎಂದರು.

    ಸಕಲೇಶಪುರ ಉಪ ವಿಭಾಗದ ಆಲೂರು, ಅರಕಲಗೂಡು, ಬೇಲೂರು ಮತ್ತು ಸಕಲೇಶಪುರ ತಾಲ್ಲೂಕಿನಲ್ಲಿ ಒಟ್ಟು 13 ಪ್ರಕರಣಗಳಿದ್ದು ಅದರಲ್ಲಿ 12 ಪ್ರಕರಣಗಳನ್ನು ದಾಖಲಿಸಲಾಗಿದೆ 5 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. 7 ಪ್ರಕರಣಗಳನ್ನು ಒಪ್ಪಲಾಗಿದೆ, 2 ಪ್ರಕರಣಗಳಿಗೆ ಚೆಕ್ ವಿತರಣೆಯಾಗಿದೆ ಇನ್ನು 5 ಪ್ರಕರಣಗಳಿಗೆ ಚೆಕ್ ವಿತರಿಬೇಕಾಗಿದೆ ಹಾಗೂ 15 ದಿನಗಳಿಗೂ ಮೀರಿ 1 ಪ್ರಕರಣ ಉಳಿದಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
        
   ಆತ್ಮ ಹತ್ಯೆಗೆ ಶರಣಾದ ರೈತರ ಪತ್ನಿ 40 ವರ್ಷ ಒಳಗಿನ ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ನೆರವಾಗುವಂತಹ ಸಹಾಯಮಾಡಬೇಕು ಹಾಗು ಅವರ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಮತ್ತು ಉದ್ಯೋಗಕ್ಕೆ ಅನುಕೂಲವಾಗುವಂತಹ ಪೂರಕ ಸೌಲಭ್ಯವನ್ನು ಒದಗಿಸಬೇಕು ಹಾಗೂ ಆತ್ಮ ಹತ್ಯೆ ರೈತ ಕುಟುಂಬಕ್ಕೆ ಹೆಲ್ತ್ ಕಾರ್ಡ ವಿತರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

    ಸಭೆಯಲ್ಲಿ ಹಾಸನ ಉಪ ಕೃಷಿ ನಿರ್ದೇಶಕರಾದ ಮುನಿಗೌಡ ಹಾಗೂ ಸಕಲೇಶಪುರ ಉಪ ವಿಭಾಗದ ಉಪ ಕೃಷಿ ನಿರ್ದೇಶಕರು ಸುಷ್ಮಾ ಮತ್ತು ಇನ್ನಿತರ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here