ಸಕಲೇಶಪುರ ಪಟ್ಟಣದಲ್ಲಿ ವಾಹನ ನಿಲುಗಡೆ ಮತ್ತು ವಾಹನ ನಿಲುಗಡೆ ನಿಷೇಧಕ್ಕೆ ಹೊಸ ಆದೇಶ

0

ವಾಹನ ನಿಲುಗಡೆ ಹಾಗೂ ನಿಷೇಧಕ್ಕೆ ಸೂಚನೆ
ಹಾಸನ ಸೆ.07 : ಸಕಲೇಶಪುರ ಪಟ್ಟಣದಲ್ಲಿ ವಾಹನ ನಿಲುಗಡೆ ಮತ್ತು ವಾಹನ ನಿಲುಗಡೆ ನಿಷೇಧಕ್ಕೆ ಸಂಬಂಧಪಟ್ಟಂತೆ ಸುಗಮ ಸಂಚಾರ ವ್ಯವಸ್ಥೆಗೆ ಅವಕಾಶ ಕಲ್ಪಿಸಿಕೊಡುವ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸಂಚಾರಿ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆರ್.ಗಿರೀಶ್ ಆದೇಶಿಸಿದ್ದಾರೆ.
ಸಕಲೇಶಪುರ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಮುಂಭಾಗದಿಂದ ತೇಜಸ್ವಿನಿ ವೃತ್ತದವರೆಗೆ ಹಾದು ಹೋಗಿರುವ ಎನ್.ಹೆಚ್ 75 ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ರೀತಿಯ ವಾಹನ ನಿಲುಗಡೆ ನಿಷೇಧಿಸಿದೆ. ಸಕಲೇಶಪುರ ಪಟ್ಟಣದ ಹಳೆ ಸಂತವೇರಿ ಕ್ರಾಸ್‍ನಿಂದ ಪಶು ಆಸ್ಪತ್ರೆ ಕ್ರಾಸ್‍ವರೆಗೆ ರಸ್ತೆಯ ಬಲಭಾಗದಲ್ಲಿ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಹಳೆ ಬಸ್ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿರುವ ಪುರಸಭೆಯ ಕಟ್ಟಡದ ನೆಲಮಾಳಿಗೆಯ ಖಾಲಿ ಜಾಗದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವುದು ಹಾಗೂ ಈ ಕಟ್ಟಡದ ಪಕ್ಕದಲ್ಲಿರುವ ಪುರಸಭೆಗೆ ಸೇರಿದ ಖಾಲಿ ಜಾಗದಲ್ಲಿ ತಾತ್ಕಾಲಿಕವಾಗಿ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿದೆ.

ಅಶೋಕ ರಸ್ತೆಯ ಮೆಗಾ ಟವರ್‍ನಿಂದ ಬಿ.ಎನ್.ಆರ್ ಕಾಂಪ್ಲೆಕ್ಸ್‍ವರೆಗೆ ಭಾನುವಾರ, ಮಂಗಳವಾರ, ಗುರುವಾರ ರಸ್ತೆಯ ಎಡಬದಿಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸುವುದು ಹಾಗೂ ಸೋಮವಾರ, ಬುಧವಾರ ಹಾಗೂ ಶನಿವಾರದಂದು ರಸ್ತೆಯ ಬಲಭಾಗದಲ್ಲಿ ದ್ವಿಚಕ್ರವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸುವುದು ಹಾಗೂ ಬಿ.ಎನ್.ಆರ್ ಕಾಂಪ್ಲೆಕ್ಸ್‍ನಿಂದ ಎಸ್,ಎಂ ಟವರ್‍ನವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸಂಪೂರ್ಣವಾಗಿ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಿದೆ.

ಜೇನು ಸೊಸೈಟಿ ಕಟ್ಟಡದಿಂದ ಕುಶಾಲನಗರಕ್ಕೆ ಹೋಗುವ ರಸ್ತೆಯಲ್ಲಿ ಮಂಜ್ರಾಬಾದ್ ಕ್ಲಬ್ ಕ್ರಾಸ್‍ವರೆಗೆ ರಸ್ತೆಯ ಬಲಬದಿಯಲ್ಲಿ ಸಮಾನಾಂತರವಾಗಿ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸುವುದು ಹಾಗೂ ಎಡಭಾಗದಲ್ಲಿ ಸಂಪೂರ್ಣವಾಗಿ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಿದೆ.

ಎಸ್.ಎಂ ಟವರ್ ಸರ್ಕಲ್‍ನಿಂದ ಕಾಸ್ಮೋ ಪಾಲಿಟನ್ ಕ್ಲಬ್‍ನವರೆಗೆ ರಸ್ತೆಯ ಎಡಬದಿಯಲ್ಲಿ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸುವುದು ಹಾಗು ಬಲಭಾಗದಲ್ಲಿ ಸಂಪೂರ್ಣವಾಗಿ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧಿಸಿದೆ.

ಕುಶಾಲನಗರ ರಸ್ತೆಯಲ್ಲಿರುವ ಓಂಶಕ್ತಿ ಬಾಳೆಹಣ್ಣು ಅಂಗಡಿಯಿಂದ ಬಿ.ಎಂ ರಸ್ತೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯ ರಾಜಲಕ್ಷ್ಮಿ ಟ್ರೇಡರ್ಸ್‍ನವರೆಗೆ ರಸ್ತೆಯ ಪೂರ್ವಭಾಗದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿದೆ. ಎಸ್.ಎಂ ಟವರ್‍ನಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಹಳೇ ಬಸ್ ನಿಲ್ದಾಣದ ಪುರಸಭೆ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಪಕ್ಕದ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲ ರೀತಿಯ ವಾಹನಗಳ ಪಾರ್ಕಿಂಗ್ ನಿಷೇಧಿಸಿದೆ.
ಆಜಾದ್ ರಸ್ತೆಯ ಭುವನೇಶ್ವರಿ ವೃತ್ತದಿಂದ ಬಿ.ಎಂ ರಸ್ತೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯ ಪೂರ್ವ ಭಾಗದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿದೆ. ಮೆಗಾ ಟವರ್‍ನಿಂದ ಶಾಪ್ ಸಿದ್ದೇಗೌಡ ಶಾಲೆ ಮುಖಾಂತರ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯ ಪೂರ್ವ ಭಾಗದಲ್ಲಿ ನಾಲ್ಕು ಚಕ್ರದ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here