ಬ್ಯಾಂಕ್ ಉದ್ಯೋಗಿಗಳು ಹೆಚ್ಚಾಗಿ ಹೊರ ರಾಜ್ಯಗಳಿಂದ ಬಂದಿದ್ದು, ಅವರು ಕನ್ನಡವನ್ನು ಪ್ರೀತಿ ಪೂರ್ವಕವಾಗಿ

0

ಬ್ಯಾಂಕ್ ಉದ್ಯಮಿಗಳು ಕನ್ನಡ ಭಾಷೆ ಮಾತನಾಡಲು ಪೋತ್ಸಾಹಿಸಿ: ಜಿಲ್ಲಾಧಿಕಾರಿ

ಹಾಸನ, ನ.25 : ಬ್ಯಾಂಕ್ ಉದ್ಯೋಗಿಗಳು ಹೆಚ್ಚಾಗಿ ಹೊರ ರಾಜ್ಯಗಳಿಂದ ಬಂದಿದ್ದು, ಅವರು ಕನ್ನಡವನ್ನು ಪ್ರೀತಿ ಪೂರ್ವಕವಾಗಿ ಮಾತನಾಡಲು ಪ್ರೊತ್ಸಾಹಿಸಿ  ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಸದರನ್ ಸ್ಟಾರ್ ಹೊಟೇಲ್‍ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಹಾಸನ ವತಿಯಿಂದ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ಏಕೀಕರಣವಾದ ದಿನವನ್ನು ಕನ್ನಡ ರಾಜ್ಯೋತ್ಸವ ಎಂದು ಆಚರಿಸುತ್ತಾ ಬಂದಿದ್ದು,  ಕೇವಲ ನ.1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸದೆ ವರ್ಷವಿಡಿ ಆಚರಿಸಿ ಎಂದರು.

ಕನ್ನಡ ಅದ್ಭುತವಾದಂತಹ ಅತ್ಯಂತ ಸಿರಿವಂತ ಭಾಷೆ 2000 ಕ್ಕಿಂತ ಹೆಚ್ಚು ಇತಿಹಾಸ ಹೊಂದಿರುವ ಭಾಷೆ ಕನ್ನಡ ಹಾಗೂ 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ನಮ್ಮ ಭಾಷೆ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ನಗರ ಪ್ರದೇಶಗಳಲ್ಲಿ ಕನ್ನಡ ಬಳಕೆ ಕಡಿಮೆಯಾಗುತ್ತಿರುವುದು  ವಿಷಾದದ ಸಂಗತಿ ಎಂದರಲ್ಲದೆ ಎಲ್ಲಾ ಭಾಷೆಗಳನ್ನು ಗೌರವಿಸಿ ಸ್ಥಳೀಯ ಭಾಷೆ ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ ಎಂದು ಜಿಲ್ಲಾಧಿಕಾರಿ ಹೇಳಿದರು.

ನಾವು ಮಾತನಾಡುವ ಕನ್ನಡ ಭಾಷೆ ಹಿಂದಿ, ಸಂಸ್ಕೃತದಿಂದ ಪ್ರೆರೇಪಿತವಾಗಿದ್ದು, ಅತ್ಯಂತ ಸುಂದರ ಭಾಷೆ ಎಲ್ಲರು ಇದನ್ನೂ ಕಲಿಯಬೇಕು, ಭಾಷೆ ಪ್ರೌಢಿಮೆ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಹೆಚ್ಚಾಗಿ ಕನ್ನಡ ಭಾಷೆ ಪರಿಚಯ ಮಾಡಿಸುವುದು ಉತ್ತಮ ಎಂದು ಕರೆ ನೀಡಿದರು.

ಹಿಮ್ಸ್ ನಿರ್ದೇಶಕರಾದ ಡಾ|| ಬಿ.ಸಿ ರವಿಕುಮಾರ್ ಹಾಗೂ ಎಂ.ಸಿ.ಫ್‍ನ ನಿರ್ದೇಶಕರಾದ ಪ್ರೇಮಾನಂದ ಶಣೈ ಅವರಿಗೆ ಸನ್ಮಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಸಿ ರವಿಕುಮಾರ್ ಅವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಹಿಮ್ಸ್ ಸಂಸ್ಥೆಯು ಬೆಳೆಯಲು ಹಲವಾರು ತಂಡದ ಪರಿಶ್ರಮದಿಂದ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಇಂಪು ಗಾಯನ ತಂಡದವರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಎಂ.ಸಿ.ಎಫ್‍ನ ನಿರ್ದೇಶಕರಾದ ಪ್ರೇಮಾನಂದ ಶಣೈ,  ಭಾರತೀಯ ಸ್ಟೇಟ್ ಬ್ಯಾಂಕ್‍ನ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀಪತಿ, ಎಸ್.ಬಿ.ಐ ಬ್ಯಾಂಕ್ ನ ಸಿಬ್ಬಂದಿಗಳು ಮತ್ತಿತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here