Home COVID-19 Updates Hassan District Updates ಸ್ವಾತಂತ್ರ್ಯ ಹೋರಾಟಗಾರರಾದ ಹಾಸನ ಜಿಲ್ಲೆಯ ರಾಮಣ್ಣ(94) ನಿಧನ

ಸ್ವಾತಂತ್ರ್ಯ ಹೋರಾಟಗಾರರಾದ ಹಾಸನ ಜಿಲ್ಲೆಯ ರಾಮಣ್ಣ(94) ನಿಧನ

0

ಹಾಸನ, ನ.25:ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ನಗರದ ನಿವಾಸಿ ಎನ್.ಆರ್ ರಾಮಣ್ಣ (94) ಅವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ನಗರದ ಸಂಸ್ಕೃತ ಭವನದ ಹತ್ತಿರ ವಾಸವಿದ್ದು, ಇವರು ಪತ್ನಿ ಹಾಗೂ ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನಲೆಯಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಇದೇ ವೇಳೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ರಾಮಣ್ಣ ಅವರ ಮನೆಗೆ ಭೇಟಿ ನೀಡಿ ಗೌರವಿಸಿ ಸ್ವಾತಂತ್ರೋತ್ಸವಕ್ಕೆ ಆಹ್ವಾನಿಸಿದ್ದರು.

Advertisements

ನಗರದ ಹಿರಿಯ ವೇ.ಬ್ರ.ಶ್ರೀ. ಸೊಸೈಟಿ ರಾಮಣ್ಣನವರೆಂದು ಖ್ಯಾತರಾಗಿದ್ದ ಗಟ್ಟಿ ಧ್ವನಿಯಿಂದ ವೇದಘೋಷ ಮಾಡುತ್ತಿದ್ದ ಇವರು ಹಲವಾರು ಜನರಿಗೆ ವೇದಪಾಠವನ್ನು ಧಾರೆ ಎರೆದಿದ್ದರು. ಸರಳ ಸಹೃದಯಿ ಆದ ರಾಮಣ್ಣನವರು ಸಮಾಜ ಹಾಗೂ ಸಮುದಾಯದ ಅನೇಕ ಚಟುವಟಿಕೆಗಳಲ್ಲಿ ತೊಡಗಿದ್ದರು. ಹಾಸನದ ಗಣಪತಿ ಪೆಂಡಾಲ್‍ನ ಗಣಪತಿ ಮಹೋತ್ಸವದಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಭಗವಂತನು ಅವರ ಆತ್ಮಕ್ಕೆ ಶಾಂತಿ ಸದ್ಗತಿಯನ್ನು ಕರುಣಿಸಲಿ.

ರಾಮಣ್ಣ ಅವರ ನಿಧನಕ್ಕೆ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್. ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಂ ಶಿವಣ್ಣ, ತಹಶೀಲ್ದಾರ್ ನಟೇಶ್ ಸಂತಾಪ ವ್ಯಕ್ತಪಡಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
%d bloggers like this: