ಹಾಸನದಲ್ಲಿ ಗುಂಡು ಹಾರಿಸಿ ನವೀನ್‌ ಕೊಲೆ ಪ್ರಕರಣ : ಇಬ್ಬರ ಬಂಧನ , ಕೊಲೆಗೆ ಕಾರಣ ಇಲ್ಲಿದೆ ಮಾಹಿತಿ

0

ಸಕಲೇಶಪುರ : ಮೊನ್ನೆ ಸೋಮವಾರ ರಾತ್ರಿ ಮೀನು ಹಿಡಿಯಲು ತೆರಳಿದ್ದ ನವೀನ್‌ ಅವರಿಗೆ ಗುಂಡು ತಗುಲಿ ಮೃತಪಟ್ಟಿದ್ದರು. ಸ್ಥಳಕ್ಕೆ ಐಜಿಪಿ ಪ್ರವೀಣ್‌ ಮಧುಕರ್‌, ಎಫ್‌ಎಸ್‌ಎಲ್‌ ತಂಡ ಭೇಟಿ ಪರಿಶೀಲಿಸಲಾಗಿತ್ತು. ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ತಿಳಿದುಬಂದಿದೆ . , ಕೊಲೆಯಾದ ನವೀನ್‌

ಅವರ ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿರುವ ಬಗ್ಗೆ ಕೊಲೆ ಪ್ರಕರಣದ ಆರೋಪಿ ನಾಗರಾಜು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದನಂತೆ . , ಇದು ನವೀನ್‌ ಕೋಪಕ್ಕೆ ಕಾರಣವಾಗಿತ್ತು. ಇದರಿಂದ ಕೊಲೆಯಾದ ನವೀನ್‌, ನಾಗರಾಜುಗೆ ಬೆದರಿಕೆ ಹಾಕುತ್ತಿದ್ದನಂತೆ . ಇದರಿಂದ ಹೈರಾಣಾದ ನಾಗರಾಜು,

ಅನಿಲ್‌ ಎಂಬಾತನ ಜೊತೆಗೂಡಿ ಗುಂಡು ಹೊಡೆದು ಕೊಲೆ ಮಾಡಿದ್ದಾನೆ . , ಸೋಮವಾರ ಸಂಜೆ ನಾಗರಾಜು, ನವೀನ್‌ಗೆ ಕರೆ ಮಾಡಿದ್ದು, ‘ಎಲ್ಲಿ ಇದ್ದಿಯಾ’ ಎಂದು ಕೇಳಿದ್ದ. ಆಗ ನವೀನ್‌, ‘ನಾನು ನದಿಯಲ್ಲಿ ಮೀನು ಹಿಡಿಯುತ್ತಿರುವುದಾಗಿ’ ತಿಳಿಸಿದ್ದ.

‘ನಾನೂ ಅಲ್ಲಿಗೆ ಬರುವುದಾಗಿ’ ನಾಗರಾಜು ತಿಳಿಸಿದ್ದ. ಇದರಿಂದ ನವೀನ್‌ ಇರುವ ಜಾಗದ ಬಗ್ಗೆ ಮಾಹಿತಿ ಪಡೆದ ಆರೋಪಿ ನಾಗರಾಜು, ನದಿಯ ಬಳಿ ಬಂದು ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಅದು ನೇರವಾಗಿ ನವೀನ್‌ ಎದೆಗೆ ಹೊಕ್ಕಿದ್ದು, ನವೀನ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದ ಸುದ್ದಿ ರಾಜ್ಯಾದ್ಯಂತ ಬೇರೆ ಬೇರೆ ರೂಪ ಪಡೆದಿತ್ತು , , ಬಂದೂಕಿಗೆ ಪೆಲೆಟ್‌ ಬಳಸಿದ್ದರಿಂದ ಅದರ ತುಂಡುಗಳು ತಗುಲಿ ದಯಾನಂದ ಹಾಗೂ ಪದ್ಮನಾಭ ಎಂಬುವರು ಗಾಯಗೊಂಡಿದ್ದರು .

ಮತ್ತೊರ್ವ ಪಾರಾಗಿದ್ದ ಕೂಡಲೇ ತನ್ನ ಪರಿಚಯದ ಚಾಲಕನೊಬ್ಬನಿಗೆ ಕರೆ ಮಾಡಿದ ಆರೋಪಿ ನಾಗರಾಜು, ‘ಗುಂಡು ತಗುಲಿ ಮೂವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲು ವಾಹನ ತೆಗೆದುಕೊಂಡು ಬರುವಂತೆ’ ಹೇಳಿದ್ದ. ಆ ವಾಹನದಲ್ಲಿ ಮೂವರನ್ನು ಆರೋಪಿ ನಾಗರಾಜನೇ ಹಾಸನದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾನೆ. ಈ ಮೂಲಕ ತನಿಖೆಯ ದಿಕ್ಕು ಸಿನಿಮಾ ಸ್ಟೈಲ್ ನಲ್ಲಿ ತಪ್ಪಿಸುವ ಪ್ರಯತ್ನ ಮಾಡಿದ್ದ ಎಂದು ಹಾಸನ ಜಿಲ್ಲಾ ಪೊಲೀಸ್ ವರೀಷ್ಠಾದಿಕಾರಿ ಹರಿರಾಂ ಶಂಕರ್ ಹೇಳಿದರು , ಯಸಳೂರು ಹೋಬಳಿಯ ತಂಬಲಗೇರಿ ಗ್ರಾಮದ ನವೀನ್‌ನನ್ನು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಗುಂಡು ಹೊಡೆದು ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ . , ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆರೋಪಿಗಳಾದ ನಾಗರಾಜು ಹಾಗೂ ಅನಿಲ್‌ ಎಂಬುವವರನ್ನು ಬಂಧಿಸಲಾಗಿದೆ. ,

ಘಟನೆ ನಡೆದ ಸಮಯದಲ್ಲಿ ಇಬ್ಬರು ಬಂದೂಕಿನೊಡನೆ ಹೋಗುತ್ತಿರುವುದನ್ನು ನೋಡಿದ್ದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವುದು ಬಯಲಾಗಿದೆ ಎಂದು ತಿಳಿಸಿದರು,  ಆರೋಪಿಗಳಿಂದ ಬಂದೂಕು, ಪೆಲೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

LEAVE A REPLY

Please enter your comment!
Please enter your name here