ಗಾನ ಮೌನ
ಸರಸ್ವತಿ ಪುತ್ರ,ಸ್ವರ ಮಾಂತ್ರಿಕ,ಗಾನ ಗಾರುಡಿಗ,ಸಂಗೀತ ಸಾಮ್ರಾಜ್ಯದ ಸಾಹುಕಾರ, ಜೊತೆಗೆ ಮಾನವೀಯತೆಯ ಮತ್ತು ಸೌಜನ್ಯ ನಡತೆಯ ಮೇರು ಶಿಖರ ಎಸ್ ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ ಎಂಬುದೇ ಒಂದು ಒಪ್ಪಿಕೊಳ್ಳಲಾಗದ ಸತ್ಯ !
ಆಂಧ್ರಪ್ರದೇಶದ ನೆಲ್ಲೂರು ಸಮೀಪದ ಕೋನೆತೆಮ್ಮಪೇಟ ಎಂಬ ಊರಿನಲ್ಲಿ 1946 ಜೂನ್ 4 ರಂದು ಜನಿಸಿದರು.
ತಂದೆ ಎಸ್.ಪಿ ಸಾಂಬಮೂರ್ತಿ ಖ್ಯಾತ ಹರಿಕಥಾ ವಿದ್ವಾಂಸರು ಮತ್ತು ನಾಟಕಕಾರರು. ತಾಯಿ ಶಕುಂತಲಮ್ಮ ತಂದೆಯ ಹರಿಕಥೆ ಕೇಳುತ್ತಾ ನಾಟಕ ನೋಡುತ್ತಾ ಬೆಳೆದ ಬಾಲಸುಬ್ರಹ್ಮಣ್ಯಂ ಬಾಲ್ಯದಲ್ಲೆ ಸಂಗೀತ ಕ್ಷೇತ್ರದ ಕಡೆ ಮುಖ ಮಾಡಿದ್ದರು.
ತನ್ನ 18ನೇ ವಯಸ್ಸಿನಲ್ಲಿಯೆ ಗಾಯನ ಆರಂಭಸಿದ ಬಾಲುರವರು ನಿರಂತರವಾಗಿ ಧಣಿಯದೇ ಸಂಗೀತಕ್ಕೆ ದನಿ ನೀಡಿ ಸಂಗೀತ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿದರು.
ಇಷ್ಟಲ್ಲದೆ ಕನ್ನಡ,ತಮಿಳು,ತೆಲುಗು ಸೇರಿದಂತೆ 79 ಚಿತ್ರಗಳಲ್ಲಿ ನಟಿಸಿದ್ದರು.ಆದೇನೊ ಕಲಾದೇವಿಯ ವರಪುತ್ರನಂತೆ ಜನರ ತನುಮನದಲ್ಲಿ ನೆಲೆಸಿಬಿಟ್ಟರು ಎಸ್ ಪಿ ಬಿ.
16 ಭಾಷೆಗಳಲ್ಲಿ ಸುಮಾರು 40.000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಸುಮ್ಮನೆ ಊಹಿಸಿಕೊಳ್ಳಿ ನಮ್ಮ ಜೀವನದಲ್ಲಿ ನಾವು 40.000 ಹಾಡುಗಳನ್ನು ಕೇಳಲೂ ಕೂಡ ಸಾಧ್ಯವಿಲ್ಲವೆನೂ ಆದರೇ ಎಸ್ ಪಿ ಬಿ ಹಾಡಿಮುಗಿಸಿದ್ದಾರೆ.ಸತತವಾಗಿ ಐದು ದಶಕಗಳ ಕಾಲ ಸಂಗೀತವ ಪೂಜಿಸುತ್ತಾ ಜನರನ್ನು ರಂಜಿಸಿದ್ದಾರೆ.ಅವರು ಹಾಡಿ ನೀಡಿ ಹೋಗಿರುವ ಹಾಡುಗಳ ಮೂಲಕವೇ ನಮ್ಮ ಜೊತೆ ಅವರು ಸದಾ ಜೀವಂತ.
ಭಾರತದ ಪ್ರತಿಯೊಬ್ಬರು ಇವರ ಗಾನಕ್ಕೆ ಒಂದು ಬಾರಿಯಾದರೂ ಕಿವಿಕೊಟ್ಟಿರುತ್ತಾರೆ.ಅಷ್ಟು ಆಳ ಮತ್ತು ಅಗಲವಾದ ಸಾಮ್ರಾಜ್ಯ ಇವರದ್ದು.
ಹಲವಾರು ಟಿವಿ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ಕೊಟ್ಟಿರುವ ಇವರು ಚಾರಿಟಿ ಕಾರ್ಯಕ್ರಮಗಳಿಗೆ ಸದಾ ಮುಂದು.
ಜೊತೆಗೆ ಹಲವಾರು ರಿಯಾಲಿಟಿ ಶೋಗಳಿಗೆ ನಿರೂಪಕ ಮತ್ತು ಜಡ್ಜ್ ಆಗಿದ್ದರು.
ನೇರವಾಗಿಯೇ ಹಲವು ಬಾರಿ ನನ್ನ ಮುಂದಿನ ಜನ್ಮ ಕರ್ನಾಟಕದಲ್ಲೆ ಆಗಲಿ ಎಂದು ಹೇಳಿರುವ ಎಸ್ ಪಿ ಬಿ ಕನ್ನಡಿಗರ ಪ್ರೀತಿ, ಅಭಿಮಾನಕ್ಕೆ ಮನಸೋತಿದ್ದರು.ಇದನ್ನು ತಮಿಳುನಾಡು ಮತ್ತು ಸ್ವತಃ ತಾವು ಹುಟ್ಟಿದ ಊರು ಆಂಧ್ರದಲ್ಲೂ ಹೇಳಿದ್ದರು.
ಪ್ರಶಸ್ತಿ ಮತ್ತು ಪುರಸ್ಕಾರಗಳ ಮಳೆಯೇ ಎಸ್ ಪಿ ಬಿ ಮೇಲೆ ಸುರಿದಿತ್ತು.
ಎಸ್ ಪಿ ಬಿ ಗೆ 6 ರಾಷ್ಟ್ರ ಪ್ರಶಸ್ತಿ ಮತ್ತು 2 ಪದ್ಮಶ್ರೀ ಪ್ರಶಸ್ತಿ ಬಂದಿದೆ.
ಭಾರತದ ಸಂಗೀತ ಕ್ಷೇತ್ರ ಎಂದೂ ಮರೆಯದ ಮರೆಯಲಾಗದ ಅಸಾಮಾನ್ಯ ಸಾಧಕ
ಎಸ್ ಪಿ ಬಾಲಸುಬ್ರಹ್ಮಣ್ಯಂ.
ಕಳೆದ ಐವತ್ತು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್ ಪಿ ಬಿ ಇನ್ನೂ ಶಾರೀರಿಕವಾಗಿ ನಮ್ಮ ಜೊತೆ ಇಲ್ಲ.
ನಮ್ಮ ಜೊತೆ ಅವರ ದೇಹವಿಲ್ಲದಿದ್ದರು ದನಿಯಿದೆ. ಅದು ಶಾಶ್ವತ.
ಕನ್ನಡ ನಾಡಲ್ಲಿ ಹುಟ್ಟಬೇಕೆಂಬ ಅವರ ಬಯಕೆ ಈಡೇರಲಿ.
ಆತ್ಮಕ್ಕೆ ಶಾಂತಿ ಸಿಗಲಿ.
ಐದು ದಶಕಗಳ ಕಾಲ ರಂಜಿಸಿದ ಗಾನ ಮೌನವಾಗಿದೆ.