55 ರಿಂದ 60 ವರ್ಷದ ವಯೋಮಾನದವರ ಕ್ರೀಡೆ ಶ್ರವಣಬೆಳಗೊಳದ ಬರಾಳು ಪ್ರಕಾಶ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಹಾಸನ / ಉಡುಪಿ : ಉಡುಪಿಯಲ್ಲಿ ಮಾರ್ಚ್‌ 12 ಮತ್ತು 13 ರಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟು ಬರಾಳು ಪ್ರಕಾಶ್‌ (ಶ್ರವಣಬೆಳಗೊಳ) ವೈಯಕ್ತಿಕವಾಗಿ 4 ಚಿನ್ನ 1 ಕಂಚನ್ನು ಮುಡಿಗೇರಿಸಿಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆ

ಪ್ರಕಾಶ್‌ ಅವರ ಇಲ್ಲಿನ ಸಾಧನೆ :
• 400 ಮೀಟರ್‌ ಹರ್ಡಲ್ಸ್‌ ಸ್ಪರ್ಧೆಯಲ್ಲಿ ಚಿನ್ನ
• 800 ಮೀಟರ್‌ ಓಟದಲ್ಲಿ ಚಿನ್ನ
• 4×100 ರಿಲೆಯಲ್ಲಿ ಚಿನ್ನ
• 4×100 ಮಿಕ್ಸ್‌ ರಿಲೆಯಲ್ಲಿ ಚಿನ್ನ
• 1500 ಮೀಟರ್‌ ಓಟದಲ್ಲಿ ಕಂಚು

ಈ ಮೂಲಕ ಪದಕಗಳ ಗುಚ್ಛ ಹೊತ್ತ ನಮ್ಮ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಪ್ರಕಾಶ್ 55 ರಿಂದ 60 ವರ್ಷದ ವಯೋಮಾನದವರ ಕ್ರೀಡೆಯಿಂದ ಕೇರಳದ ತಿರುವನಂತಪುರದಲ್ಲಿ ಮೇ ತಿಂಗಳಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಹಾಸನ ಜನತೆಯ ಪರವಾಗಿ ಅಭಿನಂದನೆಗಳು ಹಾಗೂ ಶುಭ ಆಶಯಗಳು

4×100 ಮಿಕ್ಸ್‌ ರಿಲೆಯಲ್ಲಿ ಇವರ ಜೊತೆ ಪದ್ಮಾವತಿ, ಸರೋಜಮ್ಮ, ಜಗದೀಶ್‌ ಭಾಗವಹಿಸಿದ್ದರು , ವಿವಿಧ ಜಿಲ್ಲೆಗಳ 1200 ಕ್ರೀಡಾಪಟುಗಳು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here