ನಿಮ್ಮ ಮಗ/ಮಗಳು ಉತ್ತಮ ಕ್ರೀಡಾಪಟು ಆದಲ್ಲಿ ಅವರನ್ನು ಕ್ರೀಡಾ ಶಾಲೆ/ಕ್ರೀಡಾ ನಿಲಯಗಳಿಗೆ ಸೇರಿಸಬೇಕೆಂದು ಯೋಜಿಸಿದ್ದೀರಾ ! ಅವರಿಗೆ ಈ ವರದಿಯಲ್ಲಿದೆ ಅವಕಾಶದ ಸಂಪೂರ್ಣ ಮಾಹಿತಿ 👇

0

ಹಾಸನ ಡಿ19 : (ಹಾಸನ್_ನ್ಯೂಸ್):- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಸುತ್ತಿರುವ ಕ್ರೀಡಾ ಶಾಲೆ, ಕ್ರೀಡಾ ನಿಲಯಗಳಿಗೆ, ಡಿ.29 ಮತ್ತು 31 ರಂದು ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ  ಆಯ್ಕೆಯನ್ನು ನಡೆಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಬಾಲಕ/ಬಾಲಕಿಯರು ದಿ. 01-06-2021 ಕ್ಕೆ   18 ವರ್ಷ ಮೀರಿರಬಾರದು ಹಾಗೂ ಪ್ರಥಮ ಪಿ.ಯು.ಸಿ.ಗೆ ಸೇರಲು ಅರ್ಹತೆ ಪಡೆದಿರಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಅಥ್ಲೆಟಿಕ್, ಹಾಕಿ, ಬ್ಯಾಸ್ಕೆಟ್‍ಬಾಲ್  ಈ ಕ್ರಿಡೆಗಳು ಇದ್ದು ಇವುಗಳು  ಬಾಲಕ ಬಾಲಕಿಯರಿಗೆ ಮಾತ್ರ.


ವಾಲಿಬಾಲ್, ಹಾಕಿ, ಜುಡೋ, ಸೈಕ್ಲಿಂಗ್, ಈ ಕ್ರಿಡೇಗಳು ಯುವಕ ಯುತಿಯರಿಗೆ  ಮಾತ್ರ (ಯುವಕರು 17 ವರ್ಷದವರು 183 ಹಾಗೂ 17 ವರ್ಷ ಮೇಲ್ಪಟ್ಟವರು 185 ಸೆಂ.ಮೀ ಹೊಂದಿರಬೇಕು)
ಫುಟ್ಬಾಲ್ (165 ಎತ್ತರ 35 ಕೆ.ಜಿ ತೂಕ ಹೊಂದಿರಬೇಕು), ಮತ್ತು  ಕುಸ್ತಿ ಕ್ರೀಡೆಗಳು ಯುವಕರಿಗೆ ,ಮಾತ್ರ

8 ನೇ ತರಗತಿ ಕ್ರೀಡಾಶಾಲೆ ಅಥಾವ  ವಸತಿ ನಿಲಯಗಳ ಪ್ರವೇಶಕ್ಕೆ ಜಿಲ್ಲಾ ಮಟ್ಟ, ವಿಭಾಗ ಮಟ್ಟ ಹಾಗೂ ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಕಡ್ಡಾಯ, ಪ್ರಥಮ ಪಿ.ಯು.ಸಿ. ಪ್ರವೇಶಕ್ಕೆ ವಿಭಾಗಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಕ್ರೀಡಾಪಟುಗಳು ನೇರವಾಗಿ ಭಾಗವಹಿಸತಕ್ಕದ್ದು, ಅರ್ಹರಿಗೆ ರಾಜ್ಯಮಟ್ಟದ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆಯಲ್ಲಿ ನಡೆಸಲಾಗುವ ದೈಹಿಕ ಸಾಮಥ್ರ್ಯ ಪರೀಕ್ಷೆಯಲ್ಲಿ ಮತ್ತು ಕ್ರೀಡೆಗೆ ಸಂಬಂಧಿಸಿದಂತಹ ಪ್ರಾಥಮಿಕ ಹಾಗೂ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಗರಿಷ್ಟ ಪಟ್ಟಿಯ ಕ್ರಮಾನುಕ್ರಮದಲ್ಲಿ ಪ್ರವೇಶವನ್ನು ನಿರ್ಧರಿಸಲಾಗುವುದು.

ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹಾಗೂ ಆಯ್ಕೆಗೆ ಬರುವ ಕ್ರೀಡಾಪಟುಗಳು  ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿದ ವರದಿಯನ್ನು ತಪ್ಪದೆ ತರಬೇಕು. ವರದಿ ನೆಗೆಟಿವ್ ಬಂದಿದ್ದಲ್ಲಿ ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡತಕ್ಕದ್ದು. ಹಾಗೂ ಸರ್ಕಾರ ಕೋವಿಡ್-19 ಗೆ ಸಂಬಂಧಿಸಿದಂತೆ ಜಾರಿ ಮಾಡಿರುವ ನಿಯಮಗಳನ್ನು ತಪ್ಪದೇ ಪಾಲಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಪೋಷಕರು ಕ್ರೀಡಾಪಟುಗಳೊಂದಿಗೆ ಯಾವುದೇ ಕಾರಣಕ್ಕೂ ಆಯ್ಕೆ ನಡೆಯುವ ಸ್ಥಳಕ್ಕೆ ತೆರಳದಂತೆ ನೋಡಿಕೊಳ್ಳುವುದು.
ಕ್ರೀಡಪಟುಗಳು ಸಂಬದಿಸಿದ ಕ್ರೀಡೆಗೆ ನಿಗಧಿತ ಎತ್ತರ ಮತ್ತು ವಿದ್ಯಾರ್ಹತೆಯನ್ನು ಹೊಂದಿರುವುದು ಕಡ್ಡಾಯ.

ಕ್ರೀಡಾಪಟುಗಳು ಡಿ. 29ರಂದು ಬೆಳಿಗ್ಗೆ 9.30 ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಿದೆ. ಹೆಚ್ಚಿನ ವಿವರಗಳಿಗೆ ದೂ. ಸಂಖ್ಯೆ 08172-296256. 8951794434, 8073148898. ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here