ಹಾಸನ ಫೆ.(ಹಾಸನ್_ನ್ಯೂಸ್ !, ಹಾಸನ ಜಿಲ್ಲೆಯ ಕ್ರೀಡಾ ವಸತಿ ಶಾಲೆಗೆ ಜಿಲ್ಲಾ ಮಟ್ಟದಲ್ಲಿ ಆಯ್ಕೆಗಾಗಿ ಬಾಲಕ ಬಾಲಕಿಯರಿಗೆ ದೈಹಿಕ ಪರೀಕ್ಷೆಯನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ನಿಗದಿತ ದಿನದಂದು ನಡೆಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಮಾ.2 ರಂದು ಬೆಳಗ್ಗೆ 10 ಗಂಟೆಗೆ ಆಲೂರು ತಾಲ್ಲೂಕು ಕ್ರೀಡಾಂಗಣ ಮತ್ತು ಸಕಲೇಶಪುರ ತಾಲ್ಲೂಕು ಕ್ರೀಡಾಂಗಣದಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುವುದು.
ಮಾ.3 ರಂದು ಬೆಳಗ್ಗೆ 10 ಗಂಟೆಗೆ ಬೇಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾ ಮೈದಾನದಲ್ಲಿ ಮತ್ತು ಅರಕಲಗೂಡು ತಾಲ್ಲೂಕು ಕ್ರೀಡಾಂಗಣದಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುವುದು.
ಮಾ.4 ರಂದು ಬೆಳಗ್ಗೆ 10 ಗಂಟೆಗೆ ಹೊಳೆನರಸೀಪುರ ತಾಲ್ಲೂಕು ಕ್ರೀಡಾಂಗಣ ಮತ್ತು ಚನ್ನರಾಯಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುವುದು.
ಮಾ.5 ರಂದು ಬೆಳಗ್ಗೆ 10 ಗಂಟೆಗೆ ಅರಸೀಕೆರೆ ತಾಲ್ಲೂಕು ಕ್ರೀಡಾಂಗಣ ಮತ್ತು ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುವುದು.
ಭಾಗವಹಿಸುವ ವಿದ್ಯಾರ್ಥಿಗಳು 4ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕ/ಬಾಲಕಿಯರು ದಿನಾಂಕ 1-6-2021ಕ್ಕೆ 11 ವರ್ಷ ಮೀರಿರಬಾರದು ಹಾಗೂ ಶೈಕ್ಷಣಿಕ ವರ್ಷಕ್ಕೆ 5 ನೇ ತರಗತಿ ಸೇರಲು ಅರ್ಹತೆ ಹೊಂದಿರಬೇಕು.
ಕ್ರೀಡಾ ಪಟುವಿನ ಹಾಕಿಗೆ ಕನಿಷ್ಠ ಎತ್ತರ ಬಾಲಕ 142 ಸೆ.ಮೀ ಬಾಲಕಿಯರಿಗೆ 140 ಸೆ.ಮೀ ,ವಾಲಿಬಾಲ್‍ಗೆ ಬಾಲಕ 145 ಸೆ.ಮೀ ಬಾಲಕಿಯರಿಗೆ 140 ಸೆ.ಮೀ , ಬ್ಯಾಸ್ಕೆಟ್ ಬಾಲ್‍ಗೆ ಬಾಲಕ 145 ಸೆ.ಮೀ ಬಾಲಕಿಯರಿಗೆ 142 ಸೆ.ಮೀ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ರವೀಶ್ ಹಾಕಿ ತರಬೇತುದಾರರು ದೂ.ಸಂ 9448346424, ಸುಬ್ರಮಣ್ಯ ಬ್ಯಾಸ್ಕೆಟ್ ಬಾಲ್ ತರಬೇತುದಾರರು ದೂ.ಸಂ 9449755949, ರಮೇಶ್ ವಾಲಿಬಾಲ್ ತರಬೇತುದಾರರು ದೂ.ಸಂ7892125483, ಜಯರಾಮ್ ವಾಲಿಬಾಲ್ ತರಬೇತುದಾರರು ದೂ.ಸಂ 9480019815, ಜಗನ್ನಾಥ್ ಜಿಮ್ನಾಸ್ಟಿಕ್ ತರಬೇತುದಾರರು ದೂ.ಸಂ 9845861943, ಕಚೇರಿ ದೂರವಾಣಿ ಸಂಖ್ಯೆ 08172-296256 ಸಂರ್ಪಕಿಸಬಹುದಾಗಿದೆ.