ಹಾಸನ / ಚನ್ನರಾಯಟ್ಟಣ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಹೋಬಳಿಯ ಕಬ್ಬಳಿ ಗ್ರಾಮದ ಶ್ರೀ ಬಸವೇಶ್ವರಸ್ವಾಮಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಎಂದಿನಂತೆ ಕಾರ್ತಿಕ ಮಾಸದಲ್ಲಿ ಪೂಜೆ ಸಲ್ಲಿಸುವ ಮೂಲಕ 90ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಶನಿವಾರ ಚಾಲನೆ
ಸ್ವಾಮಿಯ ಉತ್ಸವ ಮೂರ್ತಿಯನ್ನು ವಸ್ತ್ರ ಒಡವೆಗಳಿಂದ ಅಲಂಕರಿಸಿ ಆರತಿ ಬೆಳಗಿದ ನಂತರ ಅಡ್ಡಪಲ್ಲಕ್ಕಿ ಉತ್ಸವ ಪ್ರಾರಂಭವಾಯಿತು. ಗ್ರಾಮದ ಕಲ್ಲೇಶ್ವರ, ಲಕ್ಷ್ಮೀದೇವಿ, ಈಶ್ವರ ದೇವರು ಸೇರಿದಂತೆ ಎಲ್ಲ ದೇವಾಲಯಗಳಿಗೆ ಪೂಜೆ ಸಲ್ಲಿಸಲಾಯಿತು. ಮಂಗಳವಾದ್ಯದೊಂದಿಗೆ ಮೂಲ ಸ್ಥಾನಕ್ಕೆ ದೇವರನ್ನು ಕರೆತರಲಾಯಿತು. ಸ್ವಾಮೀಜಿಗಳು ಮೂಲಸ್ಥಾನದಲ್ಲಿ ಇರುವ ಶ್ರೀಬಸವೇಶ್ವರಸ್ವಾಮಿ ಮತ್ತು ಗೋವಿಗೆ ಪೂಜೆ ಸಲ್ಲಿಸಿ, ಧರ್ಮ ಧ್ವಜಾರೋಹಣ ನೆರವೆರಿಸಿ , ಅಲ್ಲಿ ಕಲ್ಯಾಣಿಯಲ್ಲಿ ಗಂಗೆ ಪೂಜೆ ನಡೆಯಿತು
ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ, ಶ್ರೀಶೈಲನಾಥ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿಳಿಕೆರೆ ರಂಗಪ್ಪ, ಮಾಜಿ ಅಧ್ಯಕ್ಷ ಶಿವನಂಜೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪುಟ್ಟರಾಜ್, ವಾಸು, ಗುಡಿಗೌಡ ಪ್ರಕಾಶ್, ಗಣೇಶಗೌಡ, ಜವರೇಗೌಡ, ಶಿಕ್ಷಕ ಪ್ರಕಾಶ್ ಮತ್ತು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಾಳೆ ಸಾಮೂಹಿಕ ವಿವಾಹ: ಜಾತ್ರೆ ಪ್ರಯುಕ್ತ ಸೋಮವಾರ ಸಾಮೂಹಿಕ ವಿವಾಹ ಮತ್ತು ದೇವರ ಸರ್ಪವಾಹನೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈಗಾಗಲೇ ನೊಂದಾಯಿತರು ಇಲ್ಲಿ ತಮ್ಮ ಗೃಹಸ್ಥಾಶ್ರಮ ಸೇರಲಿದ್ದಾರೆ .
#srikablibasaveshwara #hirisave #sriadhichumchanagiri #srinirmalanandhaswamy #cnbalakrishna