ಲಂಚಕ್ಕಾಗಿ ಒತ್ತಾಯ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ ನೌಕರರ ವಿರುದ್ಧ ನಾಗರಿಕರು ದೂರು ಹೇಗೆ ನೀಡಬೇಕು ಗೊತ್ತಾ : ಜನ ಸಂಪರ್ಕ ಸಭೆ

0

ಹಾಸನ ಮಾ.01(ಹಾಸನ್_ನ್ಯೂಸ್ !, ಹಾಸನ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್  ಠಾಣೆಯ ಅಧಿಕಾರಿಗಳು ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ನಿರ್ವಹಿಸುವಲ್ಲಿ ಅಧಿಕೃತ ವಿಳಂಬ ಲಂಚಕ್ಕಾಗಿ ಒತ್ತಾಯ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ  ನೌಕರರ ವಿರುದ್ಧ  ನಾಗರಿಕರು  ದೂರುಗಳನ್ನು  ಹಾಸನ ಜಿಲ್ಲೆಯ ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ ತಾಲ್ಲೂಕಿನ ಪುರಸಭೆ,  ನಗರಸಭೆ ಪಟ್ಟಣ ಪಂಚಾಯಿತಿಗೆ ಬೆಳಗ್ಗೆ 11.30 ರಿಂದ ಮ.1.30 ವರೆಗೆ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಮಾ.2 ಹೊಳೆನರಸೀಪುರ ಪುರಸಭೆ,  ಮಾ.5 ಆಲೂರು ಪಟ್ಟಣ ಪಂಚಾಯಿತಿ ಮಾ. 8 ಚನ್ನರಾಯಪಟ್ಟಣ ಪುರಸಭೆ ಮಾ. 11 ಸಕಲೇಶಪುರ ಪುರಸಭೆ ಮಾ. 15 ಹಾಸನ ನಗರಸಭೆ ಮಾ. 17  ಅರಸೀಕೆರೆ ನಗರಸಭೆ ಮಾ. 19  ಬೇಲೂರು ಪುರಸಭೆ ಮಾ. 23  ಅರಕಲಗೂಡು ಪುರಸಭೆ ಪ್ರತಿ ಸಭೆಯು ಬೆಳಗ್ಗೆ 11.30 ಗಂಟೆಗೆ  ನಡೆಯಲಿದೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ08172-266789  ಸಂಪರ್ಕಿಸಬಹುದಾಗಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಸದುಪಯೋಗ  ಪಡಿಸಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

Advertisements

LEAVE A REPLY

Please enter your comment!
Please enter your name here