ಹಾಸನ ಜ 5: (ಹಾಸನ್_ನ್ಯೂಸ್) ಹಾಸನ ಜಿಲ್ಲೆಯ ಹಿರಿಯ ಜಾನಪದ ಕಲಾವಿದರಾದ ಗ್ಯಾರಂಟಿ ರಾಮಣ್ಣ ಅವರು ಈ ಬಾರಿಯ ಜಾನಪದ ಅಕಾಡಮಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ

ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಾತಾ ಬಿ.ಮಂಜಮ್ಮ ಜೋಗತಿ ಅವರು ಪತ್ರಿಕಾಗೋಷ್ಠಿ ನಡೆಸಿ 2020 ನೇ ಸಾಲಿನಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವ 30 ಜಿಲ್ಲೆಗಳ ಹಿರಿಯ ಜಾನಪದ ಕಲಾವಿದರು ಹಾಗೂ

ಇಬ್ಬರು ಜಾನಪದತಜ್ಞರ ಪಟ್ಟಿಯನ್ನು ಪ್ರಕಟಿಸಿದರು.

ಸಮಸ್ತ ಹಾಸನ ಜನತೆಯ ಪರವಾಗಿ ” ಗ್ಯಾರಂಟಿ ರಾಮಣ್ಣ ” ಅವರಿಗೆ ಅಭಿನಂದನೆಗಳು
Congratulations

ಹಾಸನದ ಆತ್ಮೀಯರಾದ ಶ್ರೀ ಗ್ಯಾರಂಟಿ ರಾಮಣ್ಣ ಅವರು ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ,

1990ರ ಭಾರತ ಜ್ವರ ವಿಜ್ಞಾನ ಜಾಥಾದ ಸಂದರ್ಭದಲ್ಲಿ ಅವರ ಸರಳ ಕ್ರಿಯಾಶೀಲ, ಸೃಜನಾತ್ಮಕ ವ್ಯಕ್ತಿತ್ವ.ಮೂಡಿಬಂತು ,

ಒಂದು ವಿಷಯ ಕೊಟ್ಟರೆ ತಕ್ಷಣ ಹಾಡು ಬರೆದು ರಾಗ ಹಾಕುವುದು ಅವರ ವೈಶಿಷ್ಟ್ಯ.

ತುಮಕೂರು ಸಾಕ್ಷರತಾ ಆಂದೋಲನದಲ್ಲೂ ದುಡಿದಿದ್ದಾರೆ. ಹಾಸನ ಜಿಲ್ಲಾ ಕೆಜೆವಿಎಸ್ ಅಧ್ಯಕ್ಷರಾಗಿದ್ದವರು.

ಜೀವನಪೂರ್ತಿ ಕಲೆಯನ್ನೇ ನಂಬಿದವರು.

ಅವರಿಗೆ ಈ ಪ್ರಶಸ್ತಿ ಕಡಿಮೆ ಎಂದೇ ಹೇಳಬಹುದು.

ಅವರ ಈ ಹಿಂದಿನ ವರದಿ
https://m.facebook.com/story.php?story_fbid=2626730014103583&id=195025720607370

