ಹಾಸನ ಜಿಲ್ಲೆಗೆ ದೊರೆತ ಅನ್ ಲಾಕ್ ಭಾಗ್ಯ

0

ದಿನಾಂಕ 12.07.2021 ನಾಳೆಯಿಂದ ಜಾರಿಗೆ ಬರುವಂತೆ ದಿನಾಂಕ: 19.07.2021ರ ಬೆಳಗ್ಗೆ 6.00 ಗಂಟೆಯ ವರೆಗೆ ಈ ಕೆಳಗೆ ತಿಳಿಸಿದ ಚಟುವಟಕೆಗಳನ್ನು ಮಾತ್ರ ನಿಷೇಧಿಸಿ ಕೋವಿಡ್ ಮಾರ್ಗಸೂಚಿಯ ತಿಳಿಸಿರುವಂತ ಪಾಲಿಸಲು ಷರತ್ತಿಗೆ ಒಳಪಡಿಸಿ ಜಿಲ್ಲಾದ್ಯಂತ ಈ ಕೆಳಕಂಡ ಮಾರ್ಗಸೂಚಿಗಳು/ನಿಬಂಧನೆಗಳನ್ನು ವಿಧಿಸಿ ಹಾಗೂ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಆದೇಶಿಸಿದೆ.

> ಹಾಸನ ಜಿಲ್ಲೆಯಾದ್ಯಂತ ದಿನಾಂಕ:19/07/2021 ರವರೆಗೆ ಪ್ರತಿ ದಿನ ರಾತ್ರಿ 9:00ಗಂಟೆಯಿಂದ ಬೆಳಗ್ಗೆ 5:00 ಗಂಟೆಯವರೆಗೆ ರಾತ್ರಿಕರ್ಫ್ಯೂ ಜಾರಿಯಲ್ಲಿರುತ್ತದೆ.

ಈ ಕರ್ಪ್ಯೂ ಅವಧಿಯಲ್ಲಿ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಎಲ್ಲಾ ಚಿತ್ರಮಂದಿರಗಳು/ಥಿಯೇಟರ್‌ಗಳು ಮತ್ತು ಪಬ್‌ಗಳು ಮುಚ್ಚಲ್ಪಟ್ಟಿರುತ್ತವೆ.

> ಕ್ರೀಡಾ ಉದ್ದೇಶಕ್ಕೆ ತರಬೇತಿಯಲ್ಲಿರುವ ಕ್ರೀಡಾಪಟುಗಳಿಗೆ ಸ್ವಿಮಿಂಗ್ ಪೂಲ್‌ನಲ್ಲಿ ತರಬೇತಿ ಪಡೆಯುವ ಉದ್ದೇಶಕ್ಕೆ ಮಾತ್ರ ಅನುಮತಿ ನೀಡಲಾಗಿದೆ, ಈ ಕ್ರೀಡಾಪಟುಗಳು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸತಕ್ಕದ್ದು.

> ಕ್ರೀಡಾ ಸಂಕೀರ್ಣಗಳಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.ಕ್ರೀಡಾಪಟುಗಳು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸತಕ್ಕದ್ದು.

ಎಲ್ಲಾಸಾಮಾಜಿಕ/ರಾಜಕೀಯಸಮಾವೇಶಗಳನ್ನು/ಕ್ರೀಡಾ/ಮನೋರಂಜನಾಕಾರ್ಯಕ್ರಮಗಳು/ಶೈಕ್ಷಣಿಕ/ಸಾಂಸ್ಕೃತಿಕ/ ಧಾರ್ಮಿಕ ಆಚರಣೆಗಳು ಹಾಗೂ ಇತರೆ ಗುಂಪು ಸೇರುವಿಕೆಯನ್ನು ಸಂಪೂರ್ಣವಾಗಿ ನಿರ್ಬಂದಿಸಿದೆ.

> ಎಲ್ಲಾ ಶಾಲಾಕಾಲೇಜುಗಳು/ ಶೈಕ್ಷಣಿಕ ತರಬೇತಿ ಕೇಂದ್ರಗಳು ತೆರೆಯುವುದನ್ನು ನಿರ್ಬಂಧಿಸಿದೆ .

> ಈಗಾಗಲೇ ನಿಗದಿಯಾಗಿರಯವ ಮದುವೆಯನ್ನು ಸರಳವಾಗಿ ಕುಟುಂಬ ಸದಸ್ಯರು/ಸಂಬಂಧಿಕರ ಸೇರಿದಂತೆ 100 ಜನರನ್ನು ಒಳಗೊಂಡು ಕೋವಿಡ್ ಸಮುಚಿತ ವರ್ತನೆಯನ್ನು(COVID Appropriate behaviour) ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ನಿರ್ವಹಿಸಲು ಅನುಮತಿಸಿದೆ.

> ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಕರ ಸಂಖ್ಯೆಯು ನಿಗಧಿಪಡಿಸಿರುವ ಆಸನದ ವ್ಯವಸ್ಥೆಯನ್ನು ಮೀರುವಂತಿಲ್ಲ.

> ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿರುತ್ತದೆ, ಆದರೆ ಗುಂಪು ಸೇರುವ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ.

> ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಮಾಲ್‌ಗಳನ್ನು (COVID Appropriate behaviour) ಕಟ್ಟುನಿಟ್ಟಾಗಿ ಪಾಲಸುವ ಷರತ್ತಿಗೊಳಪಟ್ಟು ತೆರೆಯಲು ಅನುಮತಿಸಿದೆ.

> ಅಂತ್ಯಸಂಸ್ಥಾರ/ಶವ ಸಂಸ್ಕಾರಗಳಲ್ಲಿ ಕೋವಿಡ್ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಗರಿಷ್ಠ 20ಜನರಿಗೆ ಮಾತ್ರ ಭಾಗವಹಿಸಲು ಅನುಮತಿಸಿದೆ.

LEAVE A REPLY

Please enter your comment!
Please enter your name here