ಎಂದೂ ನಿನ್ನ ನೆರಳಾಗಿ ಕಾಯುವೆ ನಾನು ‘ – ವಸಿಷ್ಠ , ‘ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ‘ – ಹರಿಪ್ರಿಯ

0

ಹಾಸನ / ಬೆಂಗಳೂರು : ಹಾಸನದ ಮಣ್ಣಿನ ಮಗ , ಪ್ರತಿಭಾವಂತ ಸ್ಯಾಂಡಲ್‌ವುಡ್ (Sandalwood) ನಟ ಅರಕಲಗೂಡು ವಸಿಷ್ಠ ಸಿಂಹ (Vasista Simha) ಮತ್ತು ಸ್ಯಾಂಡಲ್ ವುಡ್ ಸೇರಿ ದಕ್ಷಿಣದ ಹಲವು ಭಾಷೆಯಲ್ಲಿ ಪ್ರಖ್ಯಾತಿ ಪಡೆದ ಕಲಾವಿದೆ , ನಟಿ ಹರಿಪ್ರಿಯಾ (ಚಿಕ್ಕಬಳ್ಳಾಪುರ) ನಿನ್ನೆಯಷ್ಟೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ . ಈ ಬೆನ್ನಲ್ಲೇ ವಿಶಿಷ್ಠವಾಗಿ ಆಗಿ ನಮ್ಮೂರ ಮಗ ವಸಿಷ್ಠ ಜೊತೆಗಿನ ಮದುವೆ ಬಗ್ಗೆ ನಮ್ಮೂರ ಸೊಸೆಯಾಗಬೇಕಾದ ನಟಿ ಖಚಿತಪಡಿಸಿದ್ದ ಹೀಗೆ ,

ಈಗ, “ಎಂದೂ ನಿನ್ನ ನೆರಳಾಗಿ ಕಾಯುವೆ” ಎಂದು ವಸಿಷ್ಠ ಕೂಡ ಪೋಸ್ಟ್ ಶೇರ್ ಮಾಡಿದ್ದು ,

ಅಭಿಮಾನಿ ಗಳು ಮನದಲ್ಲಿ ನಿಜ ಪ್ರೀತಿಯ ಕಹಾನಿ ಒಂದು ಜಲಕ್ ನೊಡೋಕೆ ಎಷ್ಟು ಚೆಂದ ಅಲ್ಲವೇ ಅಂತಿದ್ದಾರೆ ., ಹರಿಪ್ರಿಯಾ ಮತ್ತು ವಸಿಷ್ಠ ಲವ್ ಸ್ಟೋರಿ ವಿಚಾರ ಇದೀಗ ಗುಟ್ಟಾಗಿ ಉಳಿದಿಲ್ಲ. ಶಾಂತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಕೂಡ ತಮ್ಮ ಸಂಬಂಧದ ಬಗ್ಗೆ ಈ ಜೋಡಿ ಅಧಿಕೃತವಾಗಿ ತಿಳಿಸುತ್ತಿಲ್ಲ ಎಸ್ ಟೌನ್ ನಲ್ಲಿ .,  ಸದ್ಯ ಪರೋಕ್ಷವಾಗಿ ತಾವು ಎಂಗೇಜ್ ಆಗಿರುವ ಬಗ್ಗೆ ಅದೇನೋ ಸನ್ನೆ ಎಂಬಂತೆ ಜೋಡಿ ಪೋಸ್ಟ್ ಮಾಡಿದ್ದಾರೆ. “ಎಂದೂ ನಿನ್ನ ನೆರಳಾಗಿ ಕಾಯುವೆ” ಅಂತಾ ಹರಿಪ್ರಿಯಾ ಬಗೆಗಿನ ಭಾವನೆಯನ್ನ ತಮ್ಮ ಸೋಷಿಯಲ್ ಮೀಡಿಯಾದ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ. , ಸಿಂಹದ ಮಡಿಲಲ್ಲಿ ಮಲಗಿರುವ ಮಗುವಿನ ಫೋಟೋ ಜೊತೆ `ಚಿನ್ನ ತೋಳಿನಲ್ಲಿ ಕಂದ ನಾನು’ ಎಂದು ಅನ್ಯೋನ್ಯ ಭಾವನೆಯುಳ್ಳ ಚಿತ್ರ ನೆಟ್ಟಿಗರು ಖುಷಿ ಹಂಚಿಕೊಳ್ಳುತ್ತಿದ್ದಾರೆ ,  ಮದುವೆ ಬಗೆಗಿನ ಸುದ್ದಿ ಬಗ್ಗೆ ಹರಿಪ್ರಿಯಾ, ಪೋಸ್ಟ್ ಮೂಲಕ ಖಚಿತಪಡಿಸಿದ್ದರು. ಅದೇ ರೀತಿಯ ಪೋಸ್ಟ್ ವಸಿಷ್ಠ ಕೂಡ ಶೇರ್ ಮಾಡಿ, ಎಂದೂ ನಿನ್ನ ನೆರಳಾಗಿ ಕಾಯುವೆ ಅಂತಾ ನಟ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಎಂಗೇಜ್‌ಮೆಂಟ್ ವಿಷ್ಯಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ ಎನ್ನಲಾಗಿದೆ .ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಈ ಜೋಡಿ, ಮುಂದಿನ ಫೆಬ್ರವರಿಯಲ್ಲಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಇದೆ ..

ಶುಭವಾಗಲಿ ಅರಕಲಗೂಡು ವಸಿಷ್ಠ ಸಿಂಹ ಹರಿಪ್ರಿಯಾ ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here