ಇದನ್ನು ಪ್ರತಿದಿನ ಬೆಳಗ್ಗೆ 2 ಟೇಬಲ್ -ಚಮಚ ಸೇವಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

0

ಹಲವಾರು ವೈವಿಧ್ಯಮಯ ರೋಗಗಳಿಗೆ ಚಿಕಿತ್ಸೆಯನ್ನು ನೀಡುವುದಕ್ಕೆ ಆ್ಯಪಲ್ ಸೈಡರ್ ವಿನಿಗರ್ ಬಳಸಲಾಗುತ್ತದೆ.ಸೇಬು ಗಳನ್ನು ಹುಳಿಬರಿಸಿ ತಯಾರಿಸಲಾಗುವ ಕಂದು ಬಣ್ಣದ ದ್ರವ ಈ ಆ್ಯಪಲ್ ಸೈಡರ್ ವಿನಿಗರ್.

ಆ್ಯಪಲ್ ಸೈಡರ್ ವಿನಿಗರ್ ನಲ್ಲಿರುವ ವಿಟಮಿನ್ ಬಿ, ವಿಟಮಿನ್ ಸಿ ಹಾಗೂ ಆ್ಯಸಿಟಿಕ್ ಆ್ಯಸಿಡ್ ಇದನ್ನು ಹೆಚ್ಚು ಉಪಯೋಗಕರವಾಗಿ ಮಾಡುತ್ತದೆ.

ಪ್ರಯೋಜನಗಳು:

ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ:
ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದ್ದರೆ ಅದು ಹಲವಾರು ರೋಗಗಳಿಗೆ ಬುನಾದಿಯಾಗುತ್ತದೆ. ಆ್ಯಪಲ್ ಸೈಡರ್ ವಿನಿಗರ್ ನಲ್ಲಿರುವ ಪೆಕ್ಟಿನ್ ಅಸ್ತಿತ್ವ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ.ಆದರೆ ಪೆಟ್ಟಿನಿಂದ ಅಲರ್ಜಿ ಉಂಟಾಗುವ ವರು ಇದನ್ನು ಸೇವಿಸಬಾರದು.

ಇದರಲ್ಲಿ ಅಡಗಿರುವ ಆ್ಯಂಟಿಆಕ್ಸಿಡೆಂಟ್ಸ್ ನಮಗೆ ಬಹಳ ಉಪಯೋಗಕಾರಿ:
ನಮ್ಮ ದೇಹಕ್ಕೆ ಆ್ಯಂಟಿಆಕ್ಸಿಡೆಂಟ್ಸ್ ಬಹಳ ಮುಖ್ಯ.ಆ್ಯಪಲ್ ಸೈಡರ್ ವಿನಿಗರ್ ನಲ್ಲಿರುವ ಬೀಟಾ ಕ್ಯಾರೋಟೀನ್ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ತೂಕ ಇಳಿಸಲು ಸಹಾಯಕಾರಿ:
ತೂಕ ಇಳಿಸಲು ಹಲವಾರು ದಾರಿಗಳನ್ನು ಹುಡುಕುತ್ತಿದ್ದರೆ ಆ್ಯಪಲ್ ಸೈಡರ್ ವಿನಿಗರ್ ಅನ್ನು ನೀವು ಖಂಡಿತ ಸೇವಿಸಬಹುದು.ಇದು ನಮ್ಮ ದೇಹದ ಬ್ಲಡ್ ಶುಗರ್ ಮಟ್ಟವನ್ನು ಸಮತೋಲನವಾಗಿ ಇಡುವ ಮೂಲಕ ನಮ್ಮ ದೇಹದ ತೂಕವನ್ನು ಕೂಡ ನಿಯಂತ್ರಿಸುತ್ತದೆ.

ನಮ್ಮ ದೇಹದ ಗ್ಲೂಕೋಸ್ ಹೆಚ್ಚಾಗದಂತೆ ತಡೆಯುತ್ತದೆ:
ಆ್ಯಪಲ್ ಸೈಡರ್ ವಿನಿಗರ್ ನಮ್ಮ ಜೀರ್ಣ ಕ್ರಿಯೆ ಸುಲಭವಾಗಿ ಕೆಲಸ ಮಾಡುವಂತೆ ಮಾಡುತ್ತದೆ.ಆ್ಯಪಲ್ ಸೈಡರ್ ವಿನಿಗರ್ ಅಸಿಟಿಕ್ ಆಮ್ಲ ಹೊಂದಿದ್ದು, ಇದು ನಮ್ಮ ರಕ್ತದಲ್ಲಿರುವ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸುತ್ತದೆ ಹಾಗಾಗಿ ನಮಗೆ ಒಳ್ಳೆಯ ಆರೋಗ್ಯ ಲಭ್ಯವಾಗುತ್ತದೆ.

ಪ್ರತಿದಿನ ಬೆಳಿಗ್ಗೆ ಆ್ಯಪಲ್ ಸೈಡರ್ ವಿನಿಗರ್ ನ್ನು 1 ಅಥವಾ 2ಟೇಬಲ್ ಚಮಚ ಗಳನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇದು ನಮ್ಮ ದೇಹವನ್ನು ಶುದ್ಧೀಕರಣ ಮಾಡುತ್ತವೆ ಹಾಗೂ ನಮ್ಮ ಆರೋಗ್ಯಕ್ಕೆ ಸಹಯಕಾರಿಯಾಗುತ್ತದೆ.
ಆಪಲ್ ಸೈಡರ್ ವಿನಿಗರನ್ನು ನಿಂಬೆ ರಸ ಹಾಗೂ ಜೇನು ತುಪ್ಪದೊಂದಿಗೂ ಕೂಡ ಸೇವಿಸುತ್ತಾರೆ.ಇದನ್ನು ಸೇವಿಸಿ ನಿಮ್ಮ ಆರೋಗ್ಯದಲ್ಲಿ ಕಾಣುವ ಒಳ್ಳೆಯ ಬದಲಾವಣೆಗಳನ್ನು ಕಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಬರಹ – ತನ್ವಿ .ಬಿ

LEAVE A REPLY

Please enter your comment!
Please enter your name here