ಬಿ. ಕಾಟೀಹಳ್ಳಿಯಲ್ಲಿ ಗೋಬಿ ಮಂಚೂರಿ ಮಾಡುವ ವ್ಯಕ್ತಿ ಕೊಲೆ

0

ಹಾಸನ: ಗೋಬಿಮಂಚೂರಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಓರ್ವನನ್ನು ಮೂರ‍್ನಾಲ್ಕು ಜನರು ಕಲ್ಲು ಇಟ್ಟಿಗೆಯಿಂದ ಮನಸ್ಸೊ ಇಚ್ಚೆ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಅರಸೀಕೆರೆ ಮುಖ್ಯ ರಸ್ತೆಯಲ್ಲಿಯೇ ನಡೆದಿದೆ. ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಕೋಟೆ ಬಡಾವಣೆ ನಿವಾಸಿ ಕಾಂತರಾಜು (೪೫) ಎಂಬುವನೆ ಕೊಲೆಯಾದವನು. ಸಾವನಪ್ಪಿರುವ ಇತ ಬೆತ್ತಲೆ ಸ್ಥಿತಿಯಲ್ಲಿ ಹಾಸನ – ಅರಸೀಕೆರೆಯ ಮುಖ್ಯ ರಸ್ತೆಯ ಬದಿ ಅಂಗಡಿಗಳ ಮುಂದೆ ಅನಾಥ ಶವವಂತೆ ಬಿದ್ದಿರೋ ಮೃತದೇಹವಾಗಿದೆ. ಕಾಂತರಾಜು ಕಾಟೀಹಳ್ಳಿ ಬಡಾವಣೆಯ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದನು.

ಕಳೆದ ರಾತ್ರಿ ಸ್ನೇಹಿತರೊಂದಿಗೆ ಎಣ್ಣೆ ಕುಡಿದು ಗಲಾಟೆ ಮಾಡಿಕೊಂಡಿgರುವ ಬಗ್ಗೆ ಕೇಳಿ ಬಂದಿದೆ. ಮೂವರು ಸೇರಿ ಹೊಡೆದು ಕೊಂದಿರೋ ಸಾಧ್ಯತೆ ಇದ್ದು, ಇಟ್ಟಿಗೆ ಹಾಗೂ ಕಲ್ಲಿನಿಂದ ತಲೆಗೆ ಹೊಡೆದು ಮರ್ಡರ್ ಮಾಡಲಾಗಿದೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೊಲೆ ಮಾಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳೀಯ ನಿವಾಸಿ ವೇಣುಗೋಪಾಲ್ ಮಾಧ್ಯಮದೊಂದಿಗೆ ಮಾತನಾಡಿ, ಗಲಾಟಿ ನಡೆದು ನಂತರ ಕೊಲೆ ಆಗಿರುವ ಮಾಹಿತಿ ಬಂದಿದ್ದು, ನನಗೆ ಪೂರ್ಣ ಮಾಹಿತಿ ತಿಳಿದಿರುವುದಿಲ್ಲ.

ಮೂಲತಃ ಅರಲಕಗೂಡು ನಿವಾಸಿ ಹಾಸನದಲ್ಲಿ ಗೋಬಿಮಂಚೂರಿ ಕೆಲಸ ಮಾಡುತ್ತಿದ್ದು, ಕೊಲೆಯಾದ ವ್ಯಕ್ತಿಯ ಬಟ್ಟೆ ಎಲ್ಲಾ ಎಸೆದು ಬೆತ್ತಲೆಗೊಳಿಸಿದ್ದಾರೆ. ಇದು ಮಾತ್ರ ಕೊಡಿದ ಅಮಾಲಿನ ಗಲಾಟಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು. ಬಿ. ಕಾಟೀಹಳ್ಳಿಯಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ಹೋಟೆಲ್ ಮಾಲೀಕರು ಮಾತನಾಡಿ, ಕೊಲೆಯಾಗಿರುವ ವ್ಯಕ್ತಿ ನಮ್ಮ ಹೋಟೆಲ್ ನಲ್ಲಿ ಗೋಬಿ ಮಂಚೂರಿ ಕೆಲಸ ಮಾಡುತ್ತಿದ್ದು, ಒಂದು ತಿಂಗಳಾಗಿದ್ದು, ಕೆಲಸ ಬಿಟ್ಟು ಹೋಗಿ. ಈಗ ಡಾಬದಲ್ಲಿ ಕೆಲಸ ಮಾಡುತ್ತಿರುವುದಾಗಿ ಮಾಹಿತಿ ಇದೆ. ಪ್ರತಿನಿತ್ಯ ಹೆಚ್ಚು ಮದ್ಯಪಾನ ಮಾಡುತ್ತಿದ್ದು, ಹೋಟೆಲ್ ನಲ್ಲಿ ಸರಿಯಾಗಿ ಕೆಲಸವೇ ಮಾಡುತ್ತಿರಲಿಲ್ಲ. ಇವರ ಮೂಲ ಸ್ಥಳ ಅರಕಲಗೂಡಿನ ಕೋಟೆ ಸ್ಥಳ ಎಂದು ತಿಳಿದು ಬಂದಿದೆ. ಅವನ ಹೆಸರು ಕಾಂತರಾಜು ಎಂದು ಗೊತ್ತಿದೆ. ಮೊದಲ ೬ ತಿಂಗಳು ಕೆಲಸ ಮಾಡಿ ಆಂದ್ರಕ್ಕೆ ಹೋಗಿ ವಾಪಸ್ ಬಂದು ಎರಡು ತಿಂಗಳಿದ್ದರು. ಮದುವೆ ಆಗಿ ಹೆಂಡತಿ ಬಿಟ್ಟು ಮತ್ತೊಂದು ಮದುವೆ ಆಗಿ ಆಕೆಯಿಂದಲೂ ಕೂಡ ದೂರ ಇರುವುದಾಗಿ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು

LEAVE A REPLY

Please enter your comment!
Please enter your name here