ಮಾನಸಿಕ ಆರೋಗ್ಯ ಎನ್ನುವುದು ಬಹಳ ಮಹತ್ವವಾದದ್ದು

0

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ವಿಶ್ವ ಮಾನಸಿಕ ಆರೋಗ್ಯ ದಿನವೂ ನಮ್ಮ ಮಾನಸಿಕ ಆರೋಗ್ಯ ಬಹಳ ಮುಖ್ಯ ಎಂದು ಅರಿವು ಮೂಡಿಸಲು ಆಚರಿಸಲಾಗಿದೆ. ಮಾನಸಿಕ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಈ ದಿನವೂ ಮೂಡಿಬಂದಿದೆ.

ಮಾನಸಿಕ ಆರೋಗ್ಯ ಎನ್ನುವುದು ಬಹಳ ಮಹತ್ವವಾದದ್ದು.ನಾವು ಎಷ್ಟೇ ಸಿರಿವಂತರಾದರೂ, ದೈಹಿಕವಾಗಿ ಆರೋಗ್ಯವಾಗಿದ್ದರೂ, ಮಾನಸಿಕವಾಗಿ ಬಲಶಾಲಿ ಆಗದಿದ್ದರೆ ಬಹಳ ಕಷ್ಟ.

ನಾವು ಯಾವಾಗಲೂ ಧನಾತ್ಮಕವಾಗಿ ನಮ್ಮ ಜೀವನವನ್ನು ಕಳೆದರೆ ನಮಗೆ ಯಾವುದೇ ರೀತಿಯ ರೋಗವೂ ಬರುವುದಿಲ್ಲ .ನಾವು ನಮ್ಮ ಭಾವನೆಗಳನ್ನು ಸಮತೋಲನಗೊಳಿಸಲು ಪ್ರಯತ್ನಿಸಿದರೆ ನಮ್ಮ ಮಾನಸಿಕ ಆರೋಗ್ಯವೂ ದೃಢವಾಗಿರುತ್ತದೆ.

ನೀವು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರೆ ಅದರಿಂದ ಹೊರಬರಲು ಹಲವಾರು ರೀತಿಗಳಿವೆ:

• ಮೊದಲನೆಯದಾಗಿ, ನಿಮ್ಮನ್ನು ನೀವು ಪ್ರೀತಿಸಬೇಕು, ನಿಮ್ಮನ್ನು ನೀವು ನಂಬಬೇಕು ಸ್ವಯಂ ವಿಮರ್ಶೆಯನ್ನು ತಪ್ಪಿಸಬೇಕು.
• ದಿನಕ್ಕೆ ಐದು ನಿಮಿಷವಾದರೂ, ಆಳವಾದ ಉಸಿರಾಟವನ್ನು, ಧ್ಯಾನವನ್ನು ಅಭ್ಯಾಸ ಮಾಡಿಕೊಳ್ಳಬೇಕು ಅದು ನಿಮಗೆ ಒಳ್ಳೆಯ ಮನಃಶಾಂತಿ ನೀಡುತ್ತದೆ.
• ನಿಮ್ಮ ಜೀವನದಲ್ಲಿರುವ ವ್ಯಕ್ತಿಗಳಿಗೆ, ವಸ್ತುಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ಅಭ್ಯಾಸವನ್ನು ಪ್ರಾರಂಭಿಸಬೇಕು.
• ಪರಿಸರದೊಂದಿಗೆ ಕಾಲ ಕಳೆಯಲು ಪ್ರಯತ್ನಿಸಬೇಕು. ವಾಕಿಂಗ್ ಅಥವಾ ಬೇರೆ ವ್ಯಾಯಾಮವು ಮಾಡಬಹುದು.
• ನಿಮ್ಮ ಹಿತೈಷಿಗಳೊಂದಿಗೆ ಕಾಲ ಕಳೆದು ನಿಮ್ಮ ಮನಸ್ಸನ್ನು ನಿರಾಳ ಮಾಡಿಕೊಳ್ಳಬೇಕು.

ಇತ್ತೀಚಿನ ದಿನಗಳಲ್ಲಿ ಶಾಲೆ, ಕಾಲೇಜುಗಳು ಕೊಡುವ ಕೆಲಸದಿಂದ ಮಕ್ಕಳು ಉದ್ವಿಗ್ನರಾಗುತ್ತಾರೆ. ಈ ಸಮಸ್ಯೆಯಿಂದ ಹಲವಾರು ಮಕ್ಕಳು ಮಾನಸಿಕ ಖಿನ್ನತೆಗೆ ಒಳಪಡುತ್ತಾರೆ.ಎಲ್ಲಾ ಶಾಲೆ,ಕಾಲೇಜುಗಳು ಅವರಿಗೆ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ದಿನ ೫ ನಿಮಿಷವಾದರೂ ಧ್ಯಾನಕ್ಕೆ ಸಮಯ ನೀಡಿ ಅವರನ್ನು ಮಾನಸಿಕವಾಗಿ ಆರೋಗ್ಯವಂತರಾಗಿ ಮಾಡಲು ಸಹಾಯ ಮಾಡಬೇಕು.

ನೀವು ಮಾನಸಿಕವಾಗಿ ಎಷ್ಟು ಆರೋಗ್ಯವಂತರೊ ಯೋಚಿಸಿ ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಗಮನ ನೀಡಿ. ಮಾನಸಿಕ ಅಸ್ವಸ್ಥೆಯನ್ನು ಅನುಭವಿಸುತ್ತಿರುವವರಿಗೆ ನೀವು
ನೆರವಾಗಿ.

-ತನ್ವಿ. ಬಿ

LEAVE A REPLY

Please enter your comment!
Please enter your name here