ಲೆಮೆನ್ ಟೀ ಸೇವಿಸಿದ್ದೀರಾ?

0

ನೀವು ಹಲವಾರು ರೀತಿಯ ಟೀಗಳನ್ನು ಕುಡಿದಿರಬಹುದು ಆದರೆ ಉಪಯೋಗಕರವಾದ ‘ಲೆಮನ್ ಟೀ’ ಸೇವಿಸಿದ್ದೀರಾ?

ನಿಂಬೆ ಹಣ್ಣಿನ ಉಪಯೋಗಗಳು ನಮಗೆಲ್ಲರಿಗೂ ತಿಳಿದಿದೆ ಅದೇ ರೀತಿ ನಿಂಬೆ ಹಣ್ಣಿನಿಂದ ತಯಾರಿಸಿದ ಈ ಟೀ ಎಷ್ಟು ರುಚಿಕರವೂ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು.

ಉಪಯೋಗಗಳು

• ದೇಹವನ್ನು ಹೈಡ್ರೇಟ್ ಮಾಡುತ್ತದೆ:
ಬೆಳಗ್ಗೆ ಎದ್ದ ಕೂಡಲೆ ಲೆಮನ್ ಟೀ ಸೇವಿಸಿದರೆ ಬಹಳ ಒಳ್ಳೆಯದು. ಲೆಮನ್ ಟೀ ನಮ್ಮ ದೇಹದಲ್ಲಿರುವ ಟಾಕ್ಸಿನ್ಸ್ ನನ್ನು ತೊಲಗಿಸುತ್ತದೆ.

• ದೇಹದ ತೂಕ ಇಳಿಸಲು ಸಹಾಯಕಾರಿ:
ಲಾಕ್ಡೌನ್ ನಲ್ಲಿ ನಿಮ್ಮ ದೇಹದ ತೂಕ ಹೆಚ್ಚಾಗಿದ್ದರೆ ಲೆಮೆನ್ ಟೀ ಕುಡಿಯುವ ಅಭ್ಯಾಸವನ್ನು ಪ್ರಾರಂಭಿಸಿ. ಈ ಟೀ ನಮ್ಮ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಗಡೆ ತೆಗೆದು ನಮ್ಮ ಕೊಬ್ಬನ್ನು ಕರಗಿಸಿ ದೇಹದ ತೂಕವನ್ನು ನಿಯಂತ್ರಿಸುವ ಹಾಗೆ ನೋಡಿಕೊಳ್ಳುತ್ತದೆ.

• ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ:
ಮಧುಮೇಹ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವವರಿಗೆ ಲೆಮೆನ್ ಟೀ ಬಹಳ ಸೂಕ್ತ.
ರಕ್ತದಲ್ಲಿರುವ ಅಧಿಕ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ. ಟೀ ನಮ್ಮ ರಕ್ತದ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.

• ಹೊಳೆಯುವ ಚರ್ಮವನ್ನು ನೀಡುತ್ತದೆ:
ನಿಂಬೆ ಹಣ್ಣಿನಲ್ಲಿರುವ ವಿಟಮಿನ್ ಸಿ ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು.ಲೆಮನ್ ಟೀ ಕುಡಿಯುವುದರಿಂದ ಚರ್ಮಕ್ಕೆ ಶಕ್ತಿ ಹಾಗೂ ಹೊಳಪು ಸಿಗುತ್ತದೆ.

ದಿನ ಬೆಳಗೆ ಖಾಲಿ ಹೊಟ್ಟೆಯಲ್ಲಿ ಲೆಮೆನ್ ಟೀ ಕುಡಿಯುವ ಅಭ್ಯಾಸವನ್ನು ಪ್ರಾರಂಭಿಸಿ. ನಿಮಗೆ ಕಂಡುಬಂದಿರುವ ಬದಲಾವಣೆಗಳನ್ನು ಕಮೆಂಟ್ ಮಾಡಿ.

– ತನ್ವಿ. ಬಿ

LEAVE A REPLY

Please enter your comment!
Please enter your name here