ಯೋಗಭಂಗಿಗಳಲ್ಲಿ ಅತ್ಯಂತ ಮಹತ್ವಪೂರ್ಣ ಮತ್ತು ಪ್ರಮುಖ ವ್ಯಾಯಾಮ.ಇದು ಬಹಳ ಪ್ರಾಚೀನವಾದ ವ್ಯಾಯಾಮ. ನಮಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಅತ್ಯಂತ ನೆಮ್ಮದಿಯನ್ನು ಕೊಡುವ ವ್ಯಾಯಾಮ.
ನಮ್ಮ ದೇಹದಲ್ಲಿರುವ ಕೆಟ್ಟ ಕ್ಯಾಲೋರಿಗಳನ್ನು ಕರಗಿಸುವುದಕ್ಕೆ ಇದು ಅತ್ಯಂತ ಉತ್ತಮವಾದ ಅಭ್ಯಾಸ.ಇದನ್ನು ಹಲವಾರು ಜನರು ಅಭ್ಯಾಸ ಮಾಡುತ್ತಿರಬಹುದು ಆದರೆ ಹಲವರು ಪ್ರಯೋಜನ ತಿಳಿಯದೆ ಸೂರ್ಯ ನಮಸ್ಕಾರವನ್ನು ಮಾಡುತ್ತಾರೆ ಹಾಗಾಗಿ ಇದರ ಪ್ರಯೋಜನ ತಿಳಿದುಕೊಳ್ಳೋಣ
• ಮಾನಸಿಕ ಒತ್ತಡವನ್ನು ತಡೆಯುತ್ತದೆ:
ನಿಮ್ಮ ಕೆಲಸದ ಸಮಸ್ಯೆದಿಂದ ಅಥವಾ ನಿಮ್ಮ ಸಂಬಂಧಗಳ ಸಮಸ್ಯೆಗಳಿಂದ ಮಾನಸಿಕ ಒತ್ತಡವನ್ನು ಅನುಭವಿಸುತ್ತಿರುವವರು ಸೂರ್ಯ ನಮಸ್ಕಾರವನ್ನು ಮಾಡಿದರೆ ನಿಮ್ಮ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ದೊರಕುತ್ತದೆ.
• ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ:
ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ಸೂರ್ಯನಮಸ್ಕಾರ ಇದಕ್ಕೆ ಒಳ್ಳೆಯ ಪರಿಹಾರ. ಇದು ನಿಮ್ಮ ದೇಹದ ಪ್ರತಿಯೊಂದು ಭಾಗಕ್ಕೂ ವ್ಯಾಯಾಮ ನೀಡುತ್ತದೆ ಹಾಗೂ ನಿಮ್ಮ ಥೈರಾಯಿಡ್ ಗ್ರಂಥಿಗೆ ಆರೋಗ್ಯವನ್ನು ನೀಡುತ್ತದೆ. ಹಾಗಾಗಿ ನೀವು ತೂಕವನ್ನು ಸುಲಭವಾಗಿ ಇಳಿಸಬಹುದು.
• ಹೊಳೆಯುವ ಕಾಂತಿಯುಕ್ತವಾದ ತ್ವಚೆ ನಿಮ್ಮದಾಗುತ್ತದೆ:
ನಾವು ಮಾಡುವ ವ್ಯಾಯಾಮವು ನಮ್ಮ ಮುಖದ ಮೇಲೆ ಕೂಡ ಪ್ರಭಾವ ಬೀರಿತು.ಸೂರ್ಯ ನಮಸ್ಕಾರ ಮಾಡುವುದರಿಂದ ನಮ್ಮ ಮುಖದಲ್ಲಿರುವ ಸುಕ್ಕುಗಳೂ, ಕಲೆಗಳು ಎಲ್ಲಾ ಮಾಯವಾಗುತ್ತದೆ ಹಾಗಾಗಿ ನಮ್ಮ ತ್ವಚೆ ಇನ್ನಷ್ಟು ಕಾಂತಿಪೂರ್ಣವಾಗುತ್ತದೆ.
• ಜೀರ್ಣಕ್ರಿಯೆಗೆ ಉಪಯೋಗಕಾರಿ:
ಹಲವಾರು ಕಾಯಿಲೆಗಳು ಬರುವುದು ಅಜೀರ್ಣ ಸಮಸ್ಯೆಗಳಿಂದ ಹಾಗಾಗಿ ಸೂರ್ಯ ನಮಸ್ಕಾರವನ್ನು ನಿತ್ಯವೂ ಮಾಡುವುದರಿಂದ ನಮ್ಮ ಅಜೀರ್ಣ ಸಮಸ್ಯೆ ಅವುಗಳನ್ನು ತಡೆಗಟ್ಟಿ ನಮ್ಮ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಹಾಗಾಗಿ ಪ್ರತಿದಿನ ಸೂರ್ಯ ನಮಸ್ಕಾರವನ್ನು ಮಾಡುವ ಅಭ್ಯಾಸವನ್ನು ಅಳವಡಿಸಿಕೊಂಡು ನಿಮಗೆ ಆಗುವ ಬಹಳಷ್ಟು ಸಮಸ್ಯೆಗಳನ್ನು ತಡೆಯಿರಿ.
-ತನ್ವಿ. ಬಿ