ಹಾಸನ-ಸೊಲ್ಹಾಪುರ ರೈಲು ಆರಂಭ; ವೇಳಾಪಟ್ಟಿ

0

ಹಾಸನ ಮತ್ತು ಸೊಲ್ಹಾಪುರ ನಡುವೆ ಪ್ರತಿದಿನದ ರೈಲು ಸೇವೆ ಡಿಸೆಂಬರ್ 14ರಿಂದ ಆರಂಭವಾಗಲಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಈ ರೈಲು ಸಂಪರ್ಕ ಕಲ್ಪಿಸಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ರೈಲು ನಂಬರ್ 01311/01312 ಹಾಸನ ಮತ್ತು ಸೊಲ್ಹಾಪುರ ನಡುವೆ ಸಂಚಾರ ನಡೆಸಲಿದೆ. ಸೊಲ್ಹಾಪುರ-ಯಶವಂತಪುರ ನಡುವೆ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಆಗಿ, ಯಶವಂತಪುರ-ಹಾಸನ ನಡುವೆ ಎಕ್ಸ್‌ಪ್ರೆಸ್ ಆಗಿ ಈ ವಿಶೇಷ ರೈಲು ಸಂಚಾರ ನಡೆಸಲಿದೆ.

ಈ ವಿಶೇಷ ರೈಲುಗಳಲ್ಲಿ ಸೀಟು ಕಾಯ್ದಿರಿಸಲು ಭಾನುವಾರದಿಂದ ಟಿಕೆಟ್ ಬುಕ್ ಮಾಡಬಹುದಾಗಿದೆ. ಡಿಸೆಂಬರ್ 14ರಿಂದ ಸೊಲ್ಹಾಪುರದಿಂದ ಮತ್ತು ಡಿಸೆಂಬರ್ 15ರಿಂದ ಪ್ರತಿದಿನ ಹಾಸನದಿಂದ ಈ ವಿಶೇಷ ರೈಲು ಸಂಚಾರ ನಡೆಸಲಿದೆ.

ವೇಳಾಪಟ್ಟಿ; ರೈಲು ನಂಬರ್ 01311 ಸೊಲ್ಹಾಪುರದಿಂದ 19.20ಕ್ಕೆ ಹೊರಡಲಿದೆ. ಮರುದಿನ ಬೆಳಗ್ಗೆ 11.35ಕ್ಕೆ ಹಾಸನಕ್ಕೆ ತಲುಪಲಿದೆ. 01312 ಸಂಖ್ಯೆಯ ರೈಲು 16.00 ಗಂಟೆಗೆ ಹಾಸನದಿಂದ ಹೊರಡಲಿದ್ದು, ಮರುದಿನ 8.15ಕ್ಕೆ ಸೊಲ್ಹಾಪುರ ತಲುಪಲಿದೆ.

ನಿಲ್ದಾಣಗಳು; ಈ ರೈಲು ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ ರೋಡ್, ಗುಂತಕಲ್, ಅನಂತಪುರ, ಯಲಹಂಕ, ಯಶವಂತಪುರ, ಚಿಕ್ಕಬಣಾವರ (01311ಮಾತ್ರ), ಕುಣಿಗಲ್, ಬಿ.
ಜಿ. ನಗರ ಮತ್ತು ಶ್ರವಣಬೆಳಗೊಳದಲ್ಲಿ ನಿಲುಗಡೆಗೊಳ್ಳಲಿದೆ

LEAVE A REPLY

Please enter your comment!
Please enter your name here