
ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವ ಮಲೆನಾಡ ಮಡಿಲು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಾಗಿನಹರೆ ಗ್ರಾಮದ ಪ್ರವಾಸಿ ತಾಣಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಜೆ ಸಿ ಬಿ ಮೂಲಕ ಆಳವಾದ ಗುಂಡಿಗಳನ್ನು ತೆಗೆದಿದ್ದು ಪ್ರವಾಸಿಗರು ಬರದಂತೆ ತೆಡೆದಿದ್ದಾರೆ..

ಇದೇ ರೀತಿಯಲ್ಲಿ ಪಾಟ್ಲಾ, ಹೊಸಳ್ಳಿ ಗುಡ್ಡ, ಬೆಟ್ಟದ ಭೈರವೇಶ್ವರ, ಯಡಕುಮರಿ ಟ್ರಕ್ಕಿಂಗ್ ಏರಿಯಾ, ಈ ಜಾಗದಲ್ಲಿ ಈ ತರಹ ಕೆಲಸ ಮಾಡಿ ನಮ್ಮ ಮೀಸಲು ಅರಣ್ಯ ಪ್ರದೇಶ ಉಳಿಯಲಿ ನಿಮ್ಮಿಂದ ಯಸಳೂರು ಅರಣ್ಯ ಇಲಾಖೆ, ಸಕಲೇಶಪುರ ಅರಣ್ಯ ಇಲಾಖೆ, ಹಾಸನ ಜಿಲ್ಲಾ ಅರಣ್ಯ ಇಲಾಖೆ,, ಕಾಲ್ನಡಿಗೆ ಯಲ್ಲಿ ನಮ್ಮ ಪ್ರವಾಸ ಕೈಗೊಳ್ಳಲಿ ನಮ್ಮ ಅರಣ್ಯ ನಮ್ಮ ಹಕ್ಕು ಅರಣ್ಯವಿದ್ದರೆ ನಮ್ಮೆಲ್ಲರ ಬದುಕು ” – ಎಂದು ವನ್ಯಜೀವಿ ಪ್ರಿಯ ‘ ಸುದರ್ಶನ್ ಗೌಡ ಪಾಳ್ಯ ‘ ಆಗ್ರಹಿಸಿದರು

