ಎಣ್ಣೆ ಪದಾರ್ಥಗಳನ್ನು ಆದಷ್ಟು ಕಡಿಮೆ ಸೇವಿಸಬೇಕು ಎಂದು ಎಲ್ಲರಿಗೂ ತಿಳಿದಿದೆ.ಆದರೆ ಕೊಬ್ಬರಿ ಎಣ್ಣೆ ಇಂದ ಮಾಡುವ ಪದಾರ್ಥಗಳು ಯಾವುದೇ ರೀತಿಯ ತೊಂದರೆ ಉಂಟು ಮಾಡುವುದಿಲ್ಲ.
ತಮಿಳುನಾಡು ಮತ್ತು ಕೇರಳ ಪ್ರದೇಶಗಳಲ್ಲಿ ಕೊಬ್ಬರಿ ಎಣ್ಣೆಯನ್ನು ಬಹಳಷ್ಟು ಮಟ್ಟಿಗೆ ಉಪಯೋಗಿಸುತ್ತಾರೆ.ಹಾಗೂ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕೊಬ್ಬರಿ ಎಣ್ಣೆ ಸುಲಭವಾಗಿ ಲಭ್ಯವಾಗುತ್ತದೆ ಆದರೆ ನಮ್ಮ ದಿನನಿತ್ಯ ಉಪಯೋಗಗಳಿಗೆ ಕೊಬ್ಬರಿ ಎಣ್ಣೆಯನ್ನು ಉಪಯೋಗಿಸುವುದರಲ್ಲಿ ಯಾವುದೇ ಕಷ್ಟವಿಲ್ಲ.
ಕೊಬ್ಬರಿ ಎಣ್ಣೆ ಉಪಯೋಗಗಳು:
• ದೇಹದ ತೂಕ ಇಳಿಸಲು ಸಹಾಯಕಾರಿ:
ನಾವು ಸೇವಿಸುವ ಆಹಾರ ಪದಾರ್ಥಗಳಿಂದ ಹಾಗೂ ನಮ್ಮ ಜೀವನ ಶೈಲಿಯಿಂದ ನಮ್ಮ ತೂಕ ಹೆಚ್ಚಾಗಿರಬಹುದು. ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ಕೊಬ್ಬರಿ ಎಣ್ಣೆ ಬಳಸುವುದು ಬಹಳ ಸಹಾಯಕರ ವಾಗಿರುತ್ತದೆ ಏಕೆಂದರೆ ಕೊಬ್ಬರಿ ಎಣ್ಣೆ ದೇಹ ಸೇರಿದ ತಕ್ಷಣ ನಮಗೆ ಹೊಟ್ಟೆ ಹಸಿವನ್ನು ಕಡಿಮೆ ಮಾಡಿ ನಾವು ದಿನದಲ್ಲಿ ತೆಗೆದುಕೊಳ್ಳುವ ಕ್ಯಾಲರಿಗಳ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ನಾವು ತಿನ್ನುವುದನ್ನು ಕಮ್ಮಿ ಮಾಡಿ ಅಗತ್ಯವಾದಷ್ಟು ಮಾತ್ರ ತಿನ್ನುತ್ತೇವೆ ಆಗ ನಮ್ಮ ದೇಹದ ತೂಕ ಸುಲಭವಾಗಿ ಇಳಿಯುತ್ತದೆ.
• ಬ್ಯಾಕ್ಟೀರಿಯ ಮತ್ತು ಫಂಗಸ್ ಸೋಂಕಿನಿಂದ ನಮ್ಮನ್ನು ತಡೆಯುತ್ತದೆ:
ಕೊಬ್ಬರಿ ಎಣ್ಣೆಯಲ್ಲಿರುವ ಆಂಟಿ- ಬ್ಯಾಕ್ಟೀರಿಯಲ್ ಮತ್ತು ಆಂಟಿ-ಫಂಗಲ್ ಗುಣ ನಮ್ಮ ದೇಹದಲ್ಲಿರುವ ಸೂಕ್ಷ್ಮ ಜೀವಿಗಳ ಜೊತೆ ಹೋರಾಡಿ ಸೋಂಕಿನಿಂದ ನಮ್ಮನ್ನು ತಡೆಯುತ್ತದೆ.ಹಾಗಾಗಿ ನಮ್ಮ ಆಹಾರದಲ್ಲಿ ಹಾಗೂ ನಮ್ಮ ಚರ್ಮದ ಆರೋಗ್ಯಕ್ಕೆ ಕೊಬ್ಬರಿ ಎಣ್ಣೆ ಉಪಯೋಗಿಸುವುದು ಒಳ್ಳೆಯದು.
• ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಕೊಬ್ಬರಿ ಎಣ್ಣೆ ಬಹಳ ಒಳ್ಳೆಯದು:
ಈ ಚಳಿಗಾಲದಲ್ಲಿ ನಮ್ಮ ಚರ್ಮಕ್ಕೆ ಬಹಳ ಸಮಸ್ಯೆಗಳು ಉಂಟಾಗುತ್ತದೆ.ಕೊಬ್ಬರಿ ಎಣ್ಣೆ ನಮ್ಮ ಚರ್ಮಕ್ಕೆ ಬಹಳ ಒಳ್ಳೆಯದು ಒಣ ಚರ್ಮವನ್ನು ಕೊಬ್ಬರಿಎಣ್ಣೆ ಮಾಯಿಶ್ಚರೈಸ್ ಮಾಡುತ್ತದೆ. ನಮ್ಮ ಕೂದಲಿಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡರೆ ನಮ್ಮ ಕೂದಲು ದೃಢವಾಗುತ್ತದೆ.
– ತನ್ವಿ. ಬಿ