ಯಾವುದೇ ಕಾಲದಲ್ಲೂ ಸುಲಭವಾಗಿ ಸಿಗುವ ಹಣ್ಣು ಎಂದರೆ ಬಾಳೆಹಣ್ಣು.ಇದರ ಬೆಲೆ ಕೂಡ ಬಹಳ ಸಮಂಜಸವಾಗಿದೆ.
ಬಾಳೆಹಣ್ಣು ಪೋಷಕಾಂಶಗಳು ಮತ್ತು ಖನಿಜಗಳ ವಿದ್ಯುತ್ ಗ್ರಹ .ಈ ಅಂಶಗಳು ನಮ್ಮ ಮುಖದ ಮೇಲೆ ಹಾಗೂ ಕೂದಲ ಮೇಲೆ ವಿಸ್ಮಯವಾದ ಬದಲಾವಣೆ ತರುತ್ತದೆ .ಇದರಲ್ಲಿ ಪೊಟ್ಯಾಸಿಯಮ್,ಮೆಗ್ನೀಸಿಯಂ ಹಾಗೂ ವಿಟಮಿನ್ ಎ ,ಬಿ ಮತ್ತು ಸಿ ಹೆಚ್ಚು ಪ್ರಮಾಣದಲ್ಲಿ ಅಡಗಿವೆ.

ಪ್ರಯೋಜನಗಳು :
*ಮೃದುವಾದ ಚರ್ಮ ನಿಮ್ಮದಾಗುತ್ತದೆ :
ಹೊಳೆಯುವ,ಮೃದುವಾದ ಚರ್ಮ ಸಿಗುವುದು ಎಲ್ಲರ ಆಸೆ. ಬಾಳೆಹಣ್ಣಿನ ಲೇಪನವನ್ನು ಬಳಸಿದರೆ ನಿಮ್ಮ ಚರ್ಮದ ಆರೋಗ್ಯ ಸುಧಾರಿಸುತ್ತದೆ.ಇದರಲ್ಲಿ ಅಡಗಿರುವ ವಿಟಮಿನ್ ನಿಮ್ಮ ಚರ್ಮವನ್ನು ಸದಾ ತೇವಾಂಶದಿಂದ ಕೂಡಿರುವ ಹಾಗೆ ಮಾಡುತ್ತದೆ .
*ತಲೆಹೊಟ್ಟು ನಿವಾರಣೆ :
ಬಾಳೆಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ ಬಾಳೆಹಣ್ಣಿನ ಲೇಪನವನ್ನು ಕೂದಲ ಬುಡಕ್ಕೆ ಅನ್ವಯಿಸುವುದರಿಂದ ಕೇಶರಾಶಿಗಳಿಗೆ ತಲೆಯಲ್ಲಿ ಉಂಟಾಗುವ ಕಿರಿಕಿರಿ, ತಲೆಹೊಟ್ಟು ,ಶಿಲೀಂಧ್ರಗಳ ಸಮಸ್ಯೆಯನ್ನು ಮರೆಮಾಡುತ್ತದೆ.

*ಹೊಳೆಯುವ,ಆರೋಗ್ಯವಾದ ಕೂದಲು:
ಬಾಳೆಹಣ್ಣಿನಲ್ಲಿರುವ ಸಿಲಿಕಾ ಅಂಶ ಕಾಲಜನ್ ಹಾಗೂ ಪ್ರೊಟೀನ್ ಉತ್ಪಾದಿಸುತ್ತದೆ.ಈ ಅಂಶ ಕೂದಲು ಸದಾ ಹೊಳೆಯುವ ಹಾಗೆ ಮಾಡಿ ಮೃದುವಾದ ರೂಪವನ್ನು ಪಡೆಯುವ ಹಾಗೆ ಮಾಡುತ್ತದೆ.ಇದರಲ್ಲಿ ಇರುವ ನೈಸರ್ಗಿಕ ತೈಲ ಕೂದಲಿಗೆ ಪೋಷಣೆ ನೀಡುತ್ತದೆ ಹಾಗೂ ಕೂದಲ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಿದೆ .

ಬಾಳೆಹಣ್ಣಿನ ‘ಹೇರ್ ಮಾಸ್ಕ್’
ಬಾಳೆಹಣ್ಣಿನ ಲೇಪವನ್ನು ವರ್ಜಿನ್ ತೆಂಗಿನ ಎಣ್ಣೆ ಜೊತೆಗೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ ಇಪ್ಪತ್ತು ನಿಮಿಷದ ನಂತರ,ವಾರಕ್ಕೆ ಎರಡು ಬಾರಿ ಹಚ್ಚಿಕೊಂಡರೆ,ರೇಷ್ಮೆ ಎಲೆಯಂತೆ ನಯವಾದ ಕೂದಲು ನಿಮ್ಮದಾಗುತ್ತದೆ.
