ಹಾಸನ ಜಿಲ್ಲೆಯಲ್ಲೆ ಮೊದಲ ಬಾರಿಗೆ ಬಿಳಿ ರಾಗಿ(“ಕೆ.ಎಂ.ಆರ್-340”)ಬೆಳೆದು ಯಶಸ್ವಿಯಾಗಿದ್ದಾರೆ. ಜಿಕೆವಿಕೆಯ ಕೃಷಿ ವಿಜ್ಞಾನಿಗಳ ತಂಡ ಬಿಳಿ ರಾಗಿಯನ್ನು ಸಂಶೋಧಿಸುವ ಮೂಲಕ ಕೃಷಿ ವಲಯದಲ್ಲಿ ಹೊಸ ಕ್ರಾಂತಿಗೆ ನಾಂದಿಯಾಡಿದೆ.
ಭಾರತದಲ್ಲಿ ಪ್ರಸ್ತುತ ಈಗಾಗಲೇ ಸುಮಾರು 2500 ರಾಗಿ ತಳಿಗಳಿದ್ದು, ಆದರೆ ಈ ಬಿಳಿರಾಗಿ ತನ್ನ ಬಣ್ಣದಿಂದ ಹಿಡಿದು ಪೌಷ್ಟಿಕಾಂಶಗಳ ಸಮೇತ ಇತರ ತಳಿಗಳಿಗಿಂತ ವಿಭಿನ್ನವಾಗಿದೆ.
ಈ ಒಂದು ಬಿಳಿ ರಾಗಿಯಲ್ಲಿ ನಾರಿನಂಶ, ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಅಂಶಗಳು ಹೇರಳವಾಗಿವೆ. ಅನೇಕರಾಗಿ ತಳಿಗಳಿಗೆ ಹೋಲಿಸಿದರೆ ಇದರಲ್ಲಿ ಶೇಕಡಾ ಎರಡರಷ್ಟು ಅಧಿಕ ಪೋಷಕಾಂಶಗಳಿವೆ. 70 ಗ್ರಾಂ ಕ್ಯಾಲ್ಸಿಯಂ ಅಕ್ಕಿಯಲ್ಲಿದ್ದರೆ, ಬಿಳಿ ರಾಗಿಯಲ್ಲಿ 380 ರಿಂದ 390 ಗ್ರಾಂ ಕ್ಯಾಲ್ಸಿಯಂ ಇದೆ. ಇತರ ಆಹಾರದಲ್ಲಿ 0.5 ಗ್ರಾಂ ನಾರಿನಂಶ ಇದ್ದರೆ, ಬಿಳಿರಾಗಿಯಲ್ಲಿ 4-10 ಗ್ರಾಂ ನಾರಿನಂಶವಿದೆ.
ಮುದ್ದೆಯ ಜೊತೆಯಲ್ಲಿ ಬಿಳಿರಾಗಿ ಹಿಟ್ಟಿನಿಂದ ಮಿಕ್ಸ್ಚರ್, ಸೇವ್, ಹುರಿಹಿಟ್ಟು, ಮಾಲ್ಟ್, ಸಂಡಿಗೆ, ಶಾವಿಗೆ, ಬಿಳಿ ರಾಗಿರೊಟ್ಟಿ, ಬಿಸ್ಕೆಟ್, ರಾಗಿಹಲ್ವಾ, ಇಡ್ಲಿ, ದೋಸೆ,ರಾಗಿಲಡ್ಡು, ರಾಗಿಹಲ್ವಾ, ರಾಗಿಪಾಯಸ, ರಾಗಿನಿಪ್ಪಟ್ಟು, ಚಕ್ಕುಲಿ, ರಾಗಿ ಶಾವಿಗೆ ಉಪ್ಪಿಟ್ಟು, ಕೇಕ್, ಬರ್ಫಿ, ರಾಗಿಗಂಜಿ, ರಾಗಿ ಪಡ್ಡು ಹೀಗೆ ಹಲವಾರು ತಿನಿಸುಗಳನ್ನು ಮಾಡಬಹುದು.
ಇದು ಅಲ್ಪಾವಧಿ ತಳಿಯಾಗಿದ್ದು 95ರಿಂದ 100 ದಿನಗಳಲ್ಲಿ ಕಟಾವಿಗೆ ಬರುತ್ತದೆ. ತಡವಾದ ಮುಂಗಾರಿಗೆ (ಬೇಸಿಗೆ ಬೆಳೆಗೆ) ಸೂಕ್ತವಾದ ತಳಿಯಾಗಿದೆ.
ಬೆಳೆದವರು
ಲೋಕೇಶ್ ಮತ್ತು ಮಗ ದರ್ಶನ್
ದೊಡ್ಡಗೇಣಿಗೆರೆ ಗ್ರಾಮ
ಶಾಂತಿಗ್ರಾಮ ಹೋಬಳಿ
ಹಾಸನ್(ತ&ಡಿ)
ನಂಬರ್ 9739220344