ಹಾಸನ ವಿಮಾನ ನಿಲ್ದಾಣದ ರೂಪುರೇಷೆ ಯಾವ ಹಂತದಲ್ಲಿದೆ

0

H.D.ರೇವಣ್ಣ : – ” ಮಾಸ್ಟರ್‌ ಪ್ಲಾನ್‌ ಪ್ರಕಾರ ಹಾಸನ ವಿಮಾನ ನಿಲ್ದಾಣ ನಿರ್ಮಿಸುವ ವಿಚಾರವಾಗಿ ಮುಂದಿನ ವಾರದೊಳಗೆ ನಿರ್ಣಯಕ್ಕೆ ಬಾರದಿದ್ದರೆ ಜುಲೈ 22 ರಂದು ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ನೇತೃತ್ವದಲ್ಲಿ ಜಿಲ್ಲೆಯ 6 ಜೆಡಿಎಸ್‌ ಶಾಸಕರು ಧರಣಿ ನಡೆಸುವರು “

ಪ್ರೀತಮ್ ಜೆ ಗೌಡ (ಶಾಸಕ) : – ” ಹಾಸನ ವಿಮಾನ ನಿಲ್ದಾಣ ಯಾವ ರೀತಿ ನಿರ್ಮಾಣವಾಗಬೇಕು ಎಂಬುದನ್ನು ತಜ್ಞರ ಸಮಿತಿ ತೀರ್ಮಾನ ಮಾಡಲಿದೆ. ರೇವಣ್ಣ ಒಬ್ಬ ಶಾಸಕ, ತಜ್ಞರಲ್ಲ “

H.D.ರೇವಣ್ಣ : – ” ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ, ಸಂಬಂಧ ಪಟ್ಟ ಸಚಿವರಿಗೆ ಪತ್ರ ಬರೆದಿದ್ದು, ಜುಲೈ 21ರೊಳಗೆ ಉತ್ತರ ಅಲ್ಲಿಂದ ಬಾರದಿದ್ದರೆ ಬೆಂಗಳೂರು / ಹಾಸನದಲ್ಲಿ ಧರಣಿ ನಡೆಸಲಾಗುವುದು “

ಪ್ರೀತಮ್ ಜೆ ಗೌಡ : – ” ಮಾಜಿ ಪ್ರಧಾನಿ HD ದೇವೇಗೌಡರ ಜೀವಿತಾವಧಿಯಲ್ಲಿ  ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗ ಬೇಕೆಂಬ ಮನವಿಗೆ ಮುಖ್ಯಮಂತ್ರಿ B.S.ಯಡ್ಡಿಯೂರಪ್ಪ ಸ್ಪಂದಿಸಿದ್ದಾರೆ “

H.D.ರೇವಣ್ಣ : – ” 2007ರಲ್ಲಿ ಒಟ್ಟು 1,194.15 ಎಕರೆ ಸ್ವಾಧೀನಪಡಿಸಿ 776ಎಕರೆಯಲ್ಲಿ ವಿಮಾನ ನಿಲ್ದಾಣ, 34ಎಕರೆಯಲ್ಲಿ ಸಂಪರ್ಕ ಕಲ್ಪಿಸುವ ರಸ್ತೆ, 178ಎಕರೆಯಲ್ಲಿ ಗಾಲ್ಫ್‌ ಕ್ಲಬ್ ನಿರ್ಮಾಣ ಸೇರಿ ಒಟ್ಟು 1200 ಕೋಟಿ₹ ಉತ್ಕೃಷ್ಟ ಯೋಜನೆ ರೂಪಿಸಲಾಗಿತ್ತು. ಆದರೆ, ಈಗ ಕೇವಲ 560 ಎಕರೆಯಲ್ಲಿ ನಾಮಕವಾಸ್ತೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ , ಇದಕ್ಕೆ ನಮ್ಮ ವಿರೋಧವಿದೆ “

ಪ್ರೀತಮ್ ಜೆ ಗೌಡ : – ” ಹಾಸನದಿಂದ ಬೆಂಗಳೂರಿಗೆ ಎರಡೇ ಗಂಟೆ ಕಾರು ಪ್ರಯಾಣ. ಅಲ್ಲಿ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣವಿದೆ. ಇನ್ನು ಮೈಸೂರಿಗೂ ಎರಡು ಗಂಟೆ ಪ್ರಯಾಣ. ಅಲ್ಲಿಯೂ ವಿಮಾನ ಇದೆ . ಹಾಸನಕ್ಕೂ ‌ವಿಮಾನ‌ ನಿಲ್ದಾಣ ಬೇಕು. ಇಲ್ಲ ಅಂತ ಅಲ್ಲ ಆದರೆ, ಅದು ‌ಹೇಗಿರಬೇಕೆಂದು ತಜ್ಞರು ಸಮಗ್ರವಾಗಿ ನಿರ್ಧರಿಸಿ ಯೋಜನೆ ಮಾಡಲಿದ್ದಾರೆ “

H.D.ರೇವಣ್ಣ : – ” ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶನದಂತೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ 776 ಎಕರೆ ಭೂಮಿ ಅಗತ್ಯವಿದೆ. ಮಾಸ್ಟರ್‌ ಪ್ಲಾನ್‌ ಪ್ರಕಾರ ಅಂತೆಯೇ ನಿರ್ಮಾಣ ಮಾಡಲು ಆಗುವುದಿಲ್ಲ ಎಂದಾದರೆ ಯೋಜನೆಯನ್ನು ಸದ್ಯಕ್ಕೆ ನಿಲ್ಲಿಸಿಬಿಡಿ “

ಪ್ರೀತಮ್ ಜೆ ಗೌಡ : – ” ರೇವಣ್ಣ ಬೂವನಹಳ್ಳಿಗೆ ಬಂದು ಯಡಿಯೂರಪ್ಪ ನಿಮ್ಮ ಭೂಮಿ ವಾಪಸ್ ಕೊಡುತ್ತಿದ್ದಾರೆ. ಇದಕ್ಕೆ ನನ್ನ ವಿರೋಧ ಇದೆ’ ಎಂದು ಹೇಳಲಿ. ನಾವ್ಯಾರು ಜಮೀನು ಬಿಡಿ ಎಂದು ಹೇಳಿಲ್ಲ. ತಜ್ಞರ‌‌ ತೀರ್ಮಾನದಂತೆ ಭೂಮಿ ವಾಪಸ್ ಕೊಡುತ್ತಿದ್ದಾರೆ , ಗೊತ್ತಿರಲಿ “

HD ರೇವಣ್ಣ : – ” ರಾಜಕೀಯ ಕಾರಣಕ್ಕೆ ಯೋಜನೆ ಮುಂದೂಡುತ್ತಿದ್ದು, ಇದರಿಂದ ವೆಚ್ಚವೂ ಹೆಚ್ಚಾಗುತ್ತಿದೆ. ಈ ವಿಷಯವನ್ನು ರಾಜಕೀಯ ಮಾಡುತ್ತಿಲ್ಲ. ನ್ಯಾಯಯುತ ಬೇಡಿಕೆ ಆಗಿರುವುದರಿಂದ JDS ಕಾರ್ಯಕರ್ತರಲ್ಲದೇ, ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮುಂದಿನ ದಿನಗಳಲ್ಲಿ ಬೆಂಬಲ ನೀಡಲಿದ್ದಾರೆ “

ಪ್ರೀತಮ್ ಜೆ ಗೌಡ : – ” ಯಾರನ್ನೋ‌ ಖುಷಿ ಪಡಿಸಲು ಯೋಜನೆ ಮಾಡಿಲ್ಲ. ರೇವಣ್ಣ ಹೇಳಿದಂತೆ ಏರ್‌ಪೋರ್ಟ್‌ ಮಾಡಲು, ಅದು ತಾಲ್ಲೂಕು ಪಂಚಾಯಿತಿ KDP ಸಭೆ ಅಲ್ಲ. 10ವರ್ಷ ಮಂತ್ರಿಯಾಗಿ ಒಂದು ವಿಮಾನ ನಿಲ್ದಾಣ ಮಾಡುವುದಕ್ಕೆ ಇವರಿಂದ ಆಗಿಲ್ಲ. ‘ತಜ್ಞರ ವರದಿ ಬಗ್ಗೆ ಸಂದೇಹ ಇದ್ದರೆ ಅವಾಗ ಕೇಳಲಿ “

HD.ರೇವಣ್ಣ : – ” ವಿಮಾಣ ನಿಲ್ದಾಣಕ್ಕೆ ಬ್ರಿಟಿಷರ ಕಾಲದಿಂದಲೂ ಭೂಮಿ ಕಾಯ್ದಿರಿ ಸಲಾಗಿದೆ. 22ರಂದು ಧರಣಿ ನಡೆಸಿ ಮುಂದೆ ಕಾನೂನು ಹೋರಾಟ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುವುದು “

ಪ್ರೀತಮ್ ಜೆ ಗೌಡ : – ” ಏರ್‌ಪೋರ್ಟ್‌ಗೆ ಬಂದು ಗಾಲ್ಫ್‌ ಆಟವಾಡುವವರು ಯಾರು ಇಲ್ಲ. ನಾವು ರಾಗಿ, ಆಲೂಗಡ್ಡೆ ಬೆಳೆಯೋರು. ರೈತರ ಭೂಮಿ ತೆಗೆದುಕೊಂಡು ಗಾಲ್ಫ್‌ ಕ್ಲಬ್ ಮಾಡಬೇಕಾ ? “

HD.ರೇವಣ್ಣ : – ” ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ತಮ್ಮ ಎರಡೂ ಕಣ್ಣನ್ನು ಶಿವಮೊಗ್ಗದ ಕಡೆ ಬಿಟ್ಟಿದ್ದಾರೆ. ಶಿವ ಮೂರನೇ ಕಣ್ಣು ಬಿಟ್ಟಂತೆ ಯಡಿಯೂರಪ್ಪ ತಮ್ಮ ಮೂರನೇ ಕಣ್ಣನ್ನು ಹಾಸನ ಜಿಲ್ಲೆಯತ್ತ ಬಿಡಲಿ “

ರಾಜಕೀಯ ಜಡಾಪಟಿಗಳ ನಡುವೆ ಅಭಿವೃದ್ಧಿ ಕಾರ್ಯಕ್ರಮ ಗಳು ಹರಿದುಬರಲಿ ಹಾಸನ ಜನತೆಯ ಸಾಕಷ್ಟು ಕನಸುಗಳು ನನಸಾಗಲಿ , ಕಾದು ನೋಡಬೇಕು ಕೊನೆಗೆ ಯಾವ ರೀತಿಯ ವಿಮಾನ ನಿಲ್ದಾಣ ನಮ್ಮ ಹಾಸನದಲ್ಲಿ ನಿರ್ಮಾಣವಾಗುವುದು ಎಂಬುದು .

#airhassana #hassanaorport #hassan #hassannews #hdrevanna #preethamjgowda

LEAVE A REPLY

Please enter your comment!
Please enter your name here