ಹಾಸನ / ಆಲೂರು: ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಭೈರಾಪುರದಲ್ಲಿ 1.310KG ಗಾಂಜಾ ವಶ • ಇಬ್ಬರು ಆರೋಪಿಗಳ ಬಂಧನ
• ದಿನಾಂಕ 19Aug2021 ಗುರುವಾರ ಬೈರಾಪುರದಲ್ಲಿ ಹೇಮಂತ್ ಕುಮಾರ್(PSI), ಗಣೇಶ್(SI), ಮೋಹನ್(ASI), ಪೊಲೀಸ್ ಸಿಬ್ಬಂದಿಗಳಾದ ರೇವಣ್ಣ, ಸೋಮಶೇಖರ್ ರವರು ಟೌನ್ ರೌಂಡ್ಸ್ ನಲ್ಲಿರುವಾಗ ಮಾದ ಎಂಬ ಪಂಕ್ಚರ್ ಅಂಗಡಿ ಹತ್ತಿರ , ಪ್ಲಾಸ್ಟಿಕ್ ಬ್ಯಾಗ್ ಹಿಡಿದಿಟ್ಟು ಕೊಂಡಿದ್ದರು , ಅದೇನೋ ಗೊತ್ತಿಲ್ಲ ., ಪೊಲೀಸ್ ಜೀಪ್ ನೋಡಿದ ತಕ್ಷಣ ಪ್ಲಾಸ್ಟಿಕ್ ಬ್ಯಾಗ್ ಅಲ್ಲೆ ಎಸೆದು ಓಡಲಾರಂಬಿಸಿದರು ., ತಕ್ಷಣ ಎಚ್ಚೆತ್ತ ಪೊಲೀಸರು ಅವರನ್ನು ಹಿಡಿದು ಸ್ಥಳದಲ್ಲಿ ಬ್ಯಾಗ್ ಪರಿಶೀಲಿಸಿದಾಗ, ಅಂದಾಜು ಒಂದು ಗಾಂಜಾ ಇರಬಹುದು ಎಂದು ಅಂದಾಜಿಸಿದ್ದರು .
ಅವರಲ್ಲೊಬ್ಬ ಅಸ್ಸಾಂ ಮೂಲದ ಬಾಳ್ಳುಪೇಟೆ ಕಾಫಿ ತೋಟದಲ್ಲಿ ಕಾರ್ಮಿಕನಾಗಿದ್ದ ಜೀತು ಬಿನ್ ಉದಾಸಿ ಎಂಬುವನಾದರೆ ಇನ್ನೊಬ್ಬ
ಬಾಳ್ಳುಪೇಟೆ ಗ್ರಾಮ JP ನಗರದ ಆಸಿಸ್ ಬಿನ್ ಅಬ್ದುಲ್ ಎಂಬ ಆರೋಪಿಗಳಾಗಿದ್ದರು ,, ನ್ಯಾಯಾಂಗ ಬಂಧನಕ್ಕೆ ಇವರ ಒಪ್ಪಿಸಲಾಗಿದೆ.
ಸೂಚನೆ : ನಿಮ್ಮ ಸುತ್ತ ಮುತ್ತ ಕಾನೂನು ಬಾಹಿರ ಅಥವಾ ಮಾದಕ ವಸ್ತುಗಳ ವಹಿವಾಟು ನಡೆಯುತ್ತಿದ್ದರೆ 112 ಗೆ ಕರೆಮಾಡಿ . ಒಂದೊಳ್ಳೆಯ ಸಮಾಜ ನಿರ್ಮಿಸಲು ಸಹಾಯ ಮಾಡಿ