ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು , ಕತ್ತು ಹಿಸುಕಿ
ಸಾಯಿಸಿರುವುದಾಗಿ ವರದಿ ಬಂದಿದೆ ಎಂದು ಎಸ್ಪಿ ತಿಳಿಸಿದರು. ಅರಕಲಗೂಡು ತಾಲ್ಲೂಕಿನ ರಾಮನ ಕೊಪ್ಪಲು ಗ್ರಾಮದ ಕುಮಾರ್ ಎಂಬುವವರ ಮಗಳು ಹಾಗೂ ಕಡಲೂರು ಗ್ರಾಮದ ದಿನೇಶ್‌ನೊಂದಿಗೆ ಮದುವೆಯ ನಿಶ್ಚಿತಾರ್ಥ ಮಾಡಿದ್ದು, ಯಾರೂ ಇಲ್ಲದ ಸಮಯದಲ್ಲಿ
ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದು ಬಂದಿದ್ದು, ನಂತರ ಆಕೆ ತಮ್ಮ ಅತ್ತೆ ಮಾವನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಇದರಿಂದ ಮನನೊಂದು ಆರೋಪಿ ದಿನೇಶ್ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತನೂ ಕುಡ ಸಾವನ್ನಪ್ಪಿದ್ದಾನೆ. ತನಿಖೆ ನಡೆಯುತ್ತಿದ್ದು,
ಪ್ರಾಥಮಿಕ ತನಿಖೆಯಿಂದ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಸಾಯಿಸಿರುವುದಾಗಿ ತಿಳಿದು ಬಂದಿದೆ. ಬಾಲಕಿಯ ತಾಯಿಯ ತಮ್ಮನ ಮಗನಿಗೆ ಮದುವೆ ಮಾಡಿಕೊಡಲು ನಿಶ್ಚಿತಾರ್ಥಕ್ಕಾಗಿ ದೇವಸ್ಥಾನ ಹತ್ತಿರ ನೆರವೇರಿಸಿದ್ದಾರೆ. ಮದುವೆಗೂ ಮುಂಚೆ
ಲೈಂಗಿಕ ದೌರ್ಜನ್ಯಕ್ಕೆ ಸಹಕರಿಸಿಲ್ಲ ಎಂಬುದಕ್ಕಾಗಿ ಈ ಕೃತ್ಯ ಎಸಗಲಾಗಿದೆ ಎಂದರು. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಹೇಳಿದರು.