ಮಾರುಕಟ್ಟೆಯಲ್ಲಿ ಹಲವಾರು ಹೇರ್ ಆಯಿಲ್ ಗಳು ಸದಾ ಬಿಡುಗಡೆಯಾಗುತ್ತಲೇ ಇರುತ್ತೆ. ಈಗಿನ ಜನರು ಸದಾ ಟ್ರೆಂಡ್ಅನ್ನು ಹಿಂಬಾಲಿಸುವವರು. ಆದರೆ ಪುರಾತನ ಕಾಲದಿಂದಲೂ ಹರಳೆಣ್ಣೆಯನ್ನು ಕೂದಲಿಗೆ ಉಪಯೋಗಿಸುತ್ತಿದ್ದಾರೆ ಆದರೆ ಈಗಿನ ಕಾಲದಲ್ಲಿ ಹರಳೆಣ್ಣೆಯ ಬೆಳಕೆ ಬಹಳ ಕಮ್ಮಿ ಆದರೆ ಇದರ ಉಪಯೋಗಗಳು ತಿಳಿದರೆ ಖಂಡಿತ ಇದನ್ನು ಬಳಸದೆ ಇರುತ್ತೀರಾ? ನೋಡೋಣ..
ಹರಳೆಣ್ಣೆಯ ಪ್ರಯೋಜನಗಳು:
• ಕೂದಲು ಉದುರುವ ಸಮಸ್ಯೆ ಇರುವವರು ಖಂಡಿತ ಬಳಸಲೇಬೇಕು:
ಈಗಿನ ಯುವಕರಿಗೆ ಕೆಲಸಕ್ಕಿಂತ ಟೆನ್ಶನ್ ಜಾಸ್ತಿ. ಹಾಗಾಗಿ ಕೂದಲು ಉದುರುವುದು ಸಾಮಾನ್ಯವಾಗಿ ಎಲ್ಲರ ಸಮಸ್ಯೆ ಹರಳೆಣ್ಣೆಯನ್ನು ಕೂದಲಿಗೆ ಹಚ್ಚಿಕೊಂಡರೆ ಈ ಸಮಸ್ಯೆ ಬಹಳ ಸುಲಭವಾಗಿ ಪಾರಾಗುತ್ತದೆ. ಇದು ಉದುರುವ ಸಮಸ್ಯೆ ಮಾತ್ರವಲ್ಲ ಕೂದಲಿಗೆ ಹೊಳಪನ್ನು ಕೂಡ ಕೊಡುತ್ತದೆ.
• ಉದ್ದ ಮತ್ತು ದಟ್ಟವಾದ ಕೂದಲು ನಿಮ್ಮದಾಗುತ್ತದೆ:
ಹರಳೆಣ್ಣೆಯಲ್ಲಿ ಅದ್ಭುತವಾದ ಅಂಶಗಳಿವೆ ಇದರಲ್ಲಿರುವ ವಿಟಮಿನ್, ಅಮೈನೋ ಆಸಿಡ್ ಮತ್ತು ಒಮೇಗಾ- ೬ ಅಂಶ ಅಧಿಕ ಪ್ರಮಾಣದಲ್ಲಿರುವುದರಿಂದ ಇದು ದಟ್ಟ ಮತ್ತು ಉದ್ದ ಕೂದಲ ಬೆಳವಣಿಗೆಗೆ ಸಹಾಯಕಾರಿ.
• ದೇಹದಲ್ಲಿರುವ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ:
ಹರಳೆಣ್ಣೆ ಕೂದಲಿಗೆ ಮಾತ್ರವಲ್ಲ ದೇಹಕ್ಕೂ ಒಳ್ಳೆಯದು. ಇದರ ಲಾಭಗಳು ಅನೇಕ. ಕೊಬ್ಬಿನಂಶ ನಮ್ಮ ದೇಹಕ್ಕೆ ಬೇಕಾಗಿರುವ ಮುಖ್ಯವಾದ ಅಂಶಗಳಲ್ಲಿ ಒಂದು ಆದರೆ ಇದು ದೇಹಕ್ಕೆ ಆಗುವ ಹಾನಿ ಹೆಚ್ಚು, ಮನೆಯ ಸೇವನೆಯಿಂದ ನಮ್ಮ ಚಯಾಪಚಯ ಕ್ರಿಯೆಗಳು ಒಳ್ಳೆಯ ರೀತಿ ಕೆಲಸ ಮಾಡುತ್ತದೆ ಇದರಲ್ಲಿರುವ ಅಮೈನೊ ಆಸಿಡ್ ಗಳು ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ ಹಾಗಾಗಿ ಇದು ದೇಹದ ತೂಕ ಹಾಗೂ ಕೊಬ್ಬಿನಂಶವನ್ನು ಕರಗಿಸುತ್ತದೆ.
• ತ್ವಚೆಗೆ ಬಹಳ ಒಳ್ಳೆಯದು;
ಹರಣ ಹರಳೆಣ್ಣೆ ಯಲ್ಲಿರುವ ರಿಕಿನೊಲಿಕ್ ಅಂಶ ನಮ್ಮ ನಮ್ಮ ವನ್ನು ಬಹಳ ಸುಲಭವಾಗಿ ಮಾಯಿಶ್ಚರೈಸ್ ಮಾಡುತ್ತದೆ ಒಣ ತ್ವಚೆಯಿಂದ ಸಮಸ್ಯೆ ಅನುಭವಿಸುತ್ತಿರುವವರು ಹರಳೆಣ್ಣೆಯನ್ನು ಮುಖಕ್ಕೆ ಹಚ್ಚಿಕೊಳ್ಳಬಹುದು ಇದು ನೆರೆ ಮತ್ತು ಗೆರೆಗಳ ನಿವಾರಣೆ ಕೂಡ ಮಾಡುತ್ತದೆ.
ನೈಸರ್ಗಿಕವಾಗಿ ನಮಗೆ ಒಳ್ಳೆಯ ಪದಾರ್ಥ ಸಿಗುವಾಗ ಮಾರುಕಟ್ಟೆಯಿಂದ ಏಕೆ ಆಕರ್ಷಿಕ ಪದಾರ್ಥಗಳನ್ನು ಕೊಂಡುಕೊಳ್ಳುವುದು. ಪುರಾತನ ಕಾಲದಿಂದಲೂ ಹರಳೆಣ್ಣೆಗೆ ಬಹಳ ಮಹತ್ವವಿದೆ. ಹರಳೆಣ್ಣೆಯನ್ನು ಬಳಸಿ ನಿಮಗಾದ ಅನುಭವವನ್ನು ಕಮೆಂಟ್ ಮಾಡಲು ಮರೆಯಬೇಡಿ.
– ತನ್ವಿ. ಬಿ