ಪಿಸ್ತಾ ತಿನ್ನುವುದರಿಂದ ಆಗುವ ಲಾಭಗಳೇನು? ಇದು ನಿಮ್ಮ ಆರೋಗ್ಯಕ್ಕೆ ಹೇಗೆ ಸಹಾಯಕಾರಿ?

0

ಒಣ ಫಲಗಳಲ್ಲಿ ಪಿಸ್ತಾ ಒಳ್ಳೆಯ ಸ್ಥಾನ ಪಡೆದಿದೆ ಪ್ರತಿ ದಿನ ಸುಮಾರು ಒಂದು ಹಿಡಿಯಷ್ಟು ಪಿಸ್ತಾಗಳನ್ನು ಸೇವಿಸುವ ಮೂಲಕ ಇವುಗಳ ಪ್ರಯೋಜನಗಳನ್ನು ಪಡೆಯಬಹುದು.
ಪಿಸ್ತಾದಲ್ಲಿ ಕ್ಯಾಲ್ಸಿಯಂ, ರೈಬೋಫ್ಲೇವಿನ್ ವಿಟಮಿನ್ ಬಿ-6 ಹಾಗೂ ಝಿಂಕ್ ಅಂಶವಿದೆ.ಕಪ್ಪೆ ಚಿಪ್ಪಿನಲ್ಲಿ ಅಡಗಿರುವ ಮುತ್ತು ಎಷ್ಟು ಅಮೂಲ್ಯವೋ, ಈ ಚಿಪ್ಪಿನಲ್ಲಿ ಅಡಗಿರುವ ಪಿಸ್ತಾ ಕೂಡ ಆರೋಗ್ಯಕ್ಕೆ ಬಹಳ ಅಮೂಲ್ಯ.

ಪ್ರಯೋಜನಗಳು

• ರಕ್ತದ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುತ್ತದೆ:
ಪಿಸ್ತಾದಲ್ಲಿ ವಿಟ್ಟಮಿನ್ ಬಿ-6 ಹೆಚ್ಚು ಪ್ರಮಾಣದಲ್ಲಿರುವುದರಿಂದ ರಕ್ತದಲ್ಲಿರುವ ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುತ್ತದೆ ಇದರಿಂದ ರಕ್ತದ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುತ್ತದೆ.

• ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ:
ಈ ಕರೋನ ಸಮಯದಲ್ಲಿ ನಮಗೆ ಬೇಕಾದ ಮುಖ್ಯವಾದ ಅಂಶ ರೋಗ ನಿರೋಧಕ ಶಕ್ತಿ ಇದರಲ್ಲಿ ಇರುವ ವಿಟಮಿನ್ ಬಿ-6 ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನಿಮಗೆ ಆರೋಗ್ಯ ಭಾಗ್ಯವನ್ನು ಲಭಿಸುತ್ತದೆ.

• ಕ್ಯಾನ್ಸರ್ ಹಾಗೂ ಇನ್ಫೆಕ್ಷನ್ ಅನ್ನು ತಡೆಯುತ್ತದೆ:
ಇದರಲ್ಲಿ ಇರುವ ವಿಟಮಿನ್ ಬಿ -6 ರಕ್ತಕಣಗಳನ್ನು ಹೆಚ್ಚು ಮಾಡಿ ವಿವಿಧ ಬಗೆಯ ಕ್ಯಾನ್ಸರ್ನಿಂದ ಹೋರಾಡಲು ಸಹಾಯ ಮಾಡುತ್ತದೆ.

• ಆರೋಗ್ಯಕಾರಿ ತ್ವಚೆ ಪಡೆಯಲು ಉಪಯೋಗಕಾರಿ:
ಹೊಳೆಯುವ ಅಂದವಾದ ತ್ವಚೆ ಪಡೆಯಬೇಕು ಎಂಬುದು ಎಲ್ಲರ ಆಸೆ. ಇದರಲ್ಲಿ ಇರುವ ವಿಟಮಿನ್ ಅತಿ ನೆರಳ ಕಿರಣಗಳು ಚರ್ಮವನ್ನು ಹಾಳು ಮಾಡದಂತೆ ಕಾಪಾಡಿ ಚರ್ಮ ಸಮಸ್ಯೆ ಬರದಂತೆ ಮಾಡುತ್ತದೆ.

• ಕೂದಲು ಉದುರುವುದು ನಿಲ್ಲುತ್ತದೆ:
ಪಿಸ್ತಾದಲ್ಲಿ ಅಡಗಿರುವ ವಿಟಮಿನ್ ಅಂಶ ಬೈಯೊಟಿನ್ ಡಿಫಿಸಿಯನ್ಸಿಯನ್ನು ತಡೆದು ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ.

‘ಪಿಸ್ತಾ’ ಉಪಯೋಗಿಸಿ ಅದರ ಉಪಯೋಗಗಳನ್ನು ಅನುಭವಿಸಿ.

ಬರಹ-ತನ್ವಿ.ಬಿ

LEAVE A REPLY

Please enter your comment!
Please enter your name here