ಕೋವಿಡ್-19 ಲಸಿಕಾಕರಣದ ಕುರಿತು ಸಾರ್ವಜನಿಕರಿಗೆ ಮಾಹಿತಿ

0

ಕೋವಿಡ್-19 ಲಸಿಕಾಕರಣದ ಕುರಿತು ಸಾರ್ವಜನಿಕರಲ್ಲಿ ಕೆಲವೊಂದು ಗೊಂದಲಗಳಿರುವುದು ಕಂಡುಬಂದಿರುತ್ತದೆ. ಈ ಗೊಂದಲ ನಿವಾರಣೆಗಾಗಿ ರಾಜ್ಯದಲ್ಲಿನ ಸಧ್ಯದ ಕೋವಿಡ್-19 ಲಸಿಕಾಕರಣ ಕುರಿತು ಈ ಕೆಳಕಂಡಂತೆ ಸ್ಪಷ್ಟನೆ ನೀಡಲಾಗಿದೆ.

1. 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕಾಕರಣ

ಅ) ಕೋವಿಷೀಲ್ಡ್ ಮೊದಲನೇ ಡೋಸ್

ನಗರ ಪ್ರದೇಶಗಳಲ್ಲಿ ಆನ್ ಲೈನ್ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆನ್ ಸೈಟ್ ನೊಂದಣಿ ಮುಖಾಂತರ ಲಸಿಕಾಕರಣ ನಡೆಸುವುದು

ಆ) ಕೋವಿಷೀಲ್ಡ್ ಎರಡನೇ ಡೋಸ್

ಹತ್ತಿರದ ಕೋವಿಡ್-19 ಲಸಿಕಾಕರಣ ಕೇಂದ್ರಕ್ಕೆ ನೇರವಾಗಿ ತೆರಳಬಹುದು (ವಾಕ್-ಇನ್)

ಇ) ಕೋವ್ಯಾಕ್ಸಿನ್ ಮೊದಲನೇ ಡೋಸ್ – ಸದ್ಯಕ್ಕೆ ಲಭ್ಯವಿರುವುದಿಲ್ಲ

ಈ) ಕೋವ್ಯಾಕ್ಸಿನ್ ಎರಡನೇ ಡೋಸ್

ಎರಡನೇ ಡೋಸ್ ಪಡೆಯಬೇಕಾದ ಫಲಾನುಭವಿಗಳಿಗೆ ಎಸ್.ಎಮ್.ಎಸ್ ಕಳುಹಿಸಲಾಗುವುದು ಎಸ್.ಎಮ್.ಎಸ್‌ನಲ್ಲಿ ತಿಳಿಸಲಾದ ಕೋವಿಡ್-19 ಲಸಿಕಾಕರಣ ಕೇಂದ್ರದಲ್ಲಿ ನಿಗದಿತ ಸಮಯಕ್ಕೆ ಫಲಾನುಭವಿಗಳು ಲಸಿಕೆ ಪಡೆಯಬಹುದು

2. 18-44 ವರ್ಷ ವಯೋಮಾನದವರಿಗೆ ಕೋವಿಡ್-19 ಲಸಿಕಾಕರಣ

• ಸದ್ಯಕ್ಕೆ ಲಭ್ಯವಿರುವುದಿಲ್ಲ.

• ಆದರೆ ರಾಜ್ಯ ಗುರುತಿಸಿರುವ ಕೋವಿಡ್-19 ಮುಂಚೂಣಿ ಕಾರ್ಯಕರ್ತರಿಗೆ ದುರ್ಬಲ ಗುಂಪಿನವರಿಗೆ ಮತ್ತು ಆದ್ಯತೆ ಗುಂಪಿನವರಿಗೆ ಆಯಾ ಗುಂಪಿನ ನಿಯೋಜಿತ ನೋಡಲ್ ಅಧಿಕಾರಿಗಳು ಲಸಿಕಾಕರಣದ ದಿನಾಂಕ ಮತ್ತು ಸಮಯದ ಮಾಹಿತಿಯನ್ನು ನೀಡುವರು

LEAVE A REPLY

Please enter your comment!
Please enter your name here