ಹಾಸನದ ಖುಬಾ ಮಸೀದಿ ಸೇರಿ ಮೈಸೂರು ಜಿಲ್ಲೆಯ ಈ ಕೆಳಕಂಡ ಮಸೀದಿ‌ ದರ್ಗಾ ಕಳ್ಳ ಅಂದರ್

0

ಹಾಸನ : ದರ್ಗಾ, ಮಸೀದಿಗಳನ್ನೇ ಟಾರ್ಗೆಟ್ ಮಾಡಿ, ಅಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ, ಅಂಪೈಪ್ಲೇಯರ್, ಡಿವಿಆರ್ , ಎಲ್‌ ಇಡಿ ಟಿವಿಗಳನ್ನು ಕಳ್ಳತನ ಮಾಡುತ್ತಿದ್ದ  ಆರೋಪಿಯನ್ನು ಹಾಸನ ಜಿಲ್ಲೆಯ ಅರಸೀಕೆರೆ ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. , ಕೊಡಗು ಜಿಲ್ಲೆ ವಿರಾಜಪೇಟೆ ಸುನ್ನತ್ ಬೀದಿಯ ಮೊಹಮ್ಮದ್ ಸುಹೇಬ್ ಬಂಧಿತ ಆರೋಪಿ,

https://youtu.be/anXMhONU8eQ

ಬಂಧಿತನಿಂದ 5.35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹರಿರಾಂ ಶಂಕ‌ರ್ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ತಿಳಿಸಿದರು. , ಅರಸೀಕೆರೆ ನಗರದಲ್ಲಿ ಇತ್ತೀಚೆಗೆ ದರ್ಗಾ, ಮಸೀದಿ ಗಳಲ್ಲಿ ಕ್ಯಾಮೆರಾ ಮೊದಲಾದ ಬೆಲೆಬಾಳುವ ವಸ್ತುಗಳ ಕಳವು ಹೆಚ್ಚಾಗಿತ್ತು. , ಅರಸೀಕೆರೆ ಮತೀಯ ಸೂಕ್ಷ್ಮ ಪ್ರದೇಶ ಆಗಿರುವುದರಿಂದ ಕಳ್ಳತನ ಜಾಲ ಪತ್ತೆ ಮಾಡಲು ಎಎಸ್ಪಿತಮ್ಮಯ್ಯ, ಅರಸೀಕೆರೆ ಡಿವೈಎಸ್ಪಿ ಲೋಕೇಶ್ ಅವರ ಮಾರ್ಗದರ್ಶನದಲ್ಲಿ, ನಗರಠಾಣೆ ಪಿಐ ಗಂಗಾಧರ್ ಅವರ ನೇತೃತ್ವದಲ್ಲಿ ಪಿಎಸ್ ಐ ಗಳಾದ ಭಾರತಿ ರಾಯನಗೌಡರ್‌, ಲತಾ ಹಾಗೂ ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿ . , ಈ ತಂಡ ಜೂ.4 ರ ಬೆಳಗಿನ ಜಾವ ಅರಸೀಕೆರೆ ರೈಲ್ವೆ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಸಾಮಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗಿ

ಆರೋಪಿ ವಿಚಾರಣೆ ನಂತರ ತಪ್ಪೋಪ್ಪಿಕೊಂಡಿದ್ದಾನೆ ಎಂದರು. ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಈತನನ್ನು ಯಾವುದೋ ಕಾರಣಕ್ಕೆ ಜಮಾತಿನಿಂದ ಉಚ್ಚಾಟನೆ ಮಾಡಲಾಗಿತ್ತು. ಇದರಿಂದ ಮಸೀದಿ, ದರ್ಗಾಗಳನ್ನೇ ಗುರಿಯಾಗಿಸಿ ಆತ ಕಳ್ಳತನ ಮಾಡುತ್ತಿದ್ದ ಎಂದು ಹೇಳಿದರು. , ಹಲವು ಕಡೆ

ಪ್ರಕರಣದ ರುವಾರಿಯಾಗಿದ್ದಾನೆ ಈತ : ಕೇವಲ ಅರಸೀಕೆರೆ ಮಾತ್ರವಲ್ಲದೆ ಮೈಸೂರಿನ ಇಲವಾಲದ ರಬ್ಬಾನಿ ಮಸೀದಿ, ಬಿಳಿಕೆರೆಯ ಈದ್ಗಾ ಮಸೀದಿ, ಪಿರಿಯಾಪಟ್ಟಣದ ಪಿರ್ದೋಸ್ ಮಸೀದಿ, ಹಳೇ ಹುಣಸೂರಿನ ಗೌಸಿಯಾ ಮಸೀದಿ, ಕೆ.ಆರ್ .ನಗರದ ಜಾಮಿಯಾ ಮಸೀದಿ, ಹಾಸನದ ಖುಬಾ ಮಸೀದಿ ಮತ್ತು ಗುಜರಾತಿ ದರ್ಗಾ, ಗಂಡಸಿಯ ಮದಿನಾ ಮಸೀದಿ, ಅರಸೀಕೆರೆಯ ಜಾಮಿಯಾ ಮಸೀದಿ ಮತ್ತು

ಖಾದರ್ ಚಾವಲಿ ದರ್ಗಾಗಳಲ್ಲಿ ಕಳವು ಮಾಡಿರುವುದು ವಿಚಾರಣೆ ವೇಳೆ ಬಯಲಾಗಿದೆ ಎಂದು ಸ್ಪಷ್ಟಪಡಿಸಿದರು .

LEAVE A REPLY

Please enter your comment!
Please enter your name here