ಸಕಲೇಶಪುರ ನಗರ ಠಾಣೆ ಕೆ.ಎನ್.ಸಿಪಿಐ ಬಸವರಾಜ ಚಿಂಚೋಳಿ ಕಾರ್ಯವೈಖರಿ ಮೆಚ್ಚಿ ಶ್ಲಾಘನೆ ವ್ಯಕ್ತಪಡಿಸಿದ ಹಾಸನ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಎಸ್ಪಿ ಶ್ರೀನಿವಾಸ್ ಗೌಡ
ಹಾಸನ: ನಾಲ್ಕು ಚಕ್ರದ ವಾಹನಗಳನ್ನು ಕಳುವು ಮಾಡುತ್ತಿದ್ದ 6 ಜನ ಕಳ್ಳರನ್ನು ಬಂಧಿಸಿ ಅವರಿಂದ 44 ಲಕ್ಷ ಬೆಲೆ ಬಾಳುವ 20 ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಸಕಲೇಶಪುರ ಪೊಲೀಸರು ಯಶಸ್ವಿ ಕರ‍್ಯಚರಣೆ ನಡೆಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕಲೇಶಪುರ ತಾಲ್ಲೂಕು ಹರಳಹಳ್ಳಿ ಗ್ರಾಮದ ಸತೀಶ ರವರು ನೀಡಿದ ದೂರಿನಲ್ಲಿ ಮಾರುತಿ -800 ಕಾರನ್ನು 2018 ಮಾರ್ಚ್ 29 ರಂದು ಪುರಸಭೆ ಬಳಿ ನಿಲ್ಲಿಸಿ ಹಾಸನಕ್ಕೆ ಹೋಗಿ ವಾಪಸ್ಸು ಬಂದು ನೋಡಿದಾಗ ಕಾರು ಕಳುವಾಗಿತ್ತು. ಈ ಬಗ್ಗೆ ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಕಳವು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು.
ಶಬ್ಬೀರ್, ಮೋಯ್ದು ಕುನ್ನಿ, ರಫೀಕ್,
ಖಾದರ್ ಶರೀಫ್, ಸೈಯದ್ ಅಜ್ಮಲ್, ಮಹಮದ್ ಮುಬಾರಕ್, ಆರೋಪಿಗಳಾಗಿದ್ದಾರೆ.
ಪೋಲಿಸರು ಬಾಳ್ಳುಪೇಟೆಯಲ್ಲಿ ವಾಹನವನ್ನು ತಪಾಸಣೆ ಮಾಡುತ್ತಿರುವಾಗ ಹಾಸನದ ಕಡೆಯಿಂದ ಮಂಗಳೂರು ಕಡೆಗೆ ಹೋಗಲು ಮಾರುತಿ ೮೦೦ ಕಾರು ನಂಬರ್ ಪ್ಲೇಟ್ ಇಲ್ಲದೇ ಬರುತ್ತಿರುವುದನ್ನು ಗಮನಿಸಿದ ಅವರು, ತಡೆದು ನಿಲ್ಲಿಸಿದಾಗ ವಾಹನದ ದಾಖಲಾತಿಯನ್ನು ಹಾಜರುಪಡಿಸುವಂತೆ ಸೂಚಿಸಿದ್ದು, ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ವಾಹನದ ದಾಖಲಾತಿಯನ್ನು ಹಾಜರುಪಡಿಸಲು ವಿಫಲವಾಗಿದ್ದು, ಸಕಲೇಶಪುರ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ವಿಚಾರಣೆಗೆ ಒಳಪಡಿಸಲಾಯಿತು.
ಈ ಆರೋಪಿಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಹಾಸನ, ಹೊಳೇನರಸೀಪುರ ಹಾಗೂ ಯಾತ್ರಾಸ್ಥಳವಾದ ಕುಕ್ಕೆಸುಬ್ರಹ್ಮಣ್ಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದಂತಹ ಮಾರುತಿ ವ್ಯಾನ್, ಕಾರು ಹಾಗೂ ಬೋಲೇರೋ ವಾಹನಗಳು ಸೇರಿದ್ದಂತೆ ಇತರೆ ವಾಹನಗಳನ್ನು ನಕಲಿ ಕೀಗಳನ್ನು ಬಳಸಿ ಕಳವು ಮಾಡಿ ಈ ವಾಹನಗಳನ್ನು ಈ ಪ್ರಕರಣದ ಮತ್ತೊಬ್ಬ ಆರೋಪಿ ಮೈಸೂರು ಜಿಲ್ಲೆಯ ಕೆ.ಆರ್. ನಗರ ಚಿಕ್ಕಮಸೀದಿ ರಸ್ತೆ ಬಳಿ ವಾಸವಾಗಿರುವ ವೆಲ್ಡಿಂಗ್ ಕೆಲಸ ಮಾಡುವ ಅಪ್ರೋಚ್ ಖಾನ್ ರವರ ಮುಖೇನ ಇತರೆ ಗುಜರಿ ಅಂಗಡಿಗಳಲ್ಲಿ ಇರುತ್ತಿದ್ದಂತಹ ಅಪಘಾತದಲ್ಲಿ ಸಂಪೂರ್ಣ ಜಖಂಗೊಂಡ ವಾಹನಗಳ ಚಾರ್ಸಿ ನಂಬರ್ ಇಂಜಿನ್ ನಂಬರ್‌ಗಳ ಸಹಿತವಾಗಿ ವಾಹನಗಳನ್ನು ಮಾರಾಟ ವಾಹನಗಳ ಮಾಲೀಕರು ನೀಡುತ್ತಿದ್ದಂತಹ ವಾಹನ ವರ್ಗಾವಣೆಗೆ ಸಂಬಂಧಿಸಿದ ಫಾರಂ ನಂಬರುಗಳನ್ನು ಸಂಗ್ರಹಿಸಿ ಚಾರ್ಸಿ ನಂಬರ್‌ಗಳನ್ನು ಕಳವು ಮಾಡಿದ ವಾಹನಗಳಿಗೆ ಪಂಚಿಂಗ್ ಮಾಡಿ, ವಾಹನಗಳಿಗೆ ವಿಮೆಯನ್ನು ಪಾವತಿಸಿ, ನೋಂದಣಿಗೊಂಡ ಆರ್.ಟಿ.ಓ ಕಛೇರಿಯ ಮೂಲಕ ದಾಖಲೆಗಳನ್ನು ಸಿದ್ದಪಡಿಸಿ ವಾಹನ ಮಾರಾಟ ಮಾಡುತ್ತಿದ್ದರು.
ಪತ್ತೆಯಾದ ಪ್ರಕರಣಗಳು ಸಕಲೇಶಪುರದಲ್ಲಿ 1 ಮಾರುತಿ 800 ಕಾರು, ಹಾಸನ ನಗರದಲ್ಲಿ 7 ಮಾರುತಿ ಓಮಿನಿ, ಹೊಳೆನರಸೀಪುರದಲ್ಲಿ 2 ಬೊಲೋರೊ ಪಿಕಪ್ ವಾಹನ, ಸುಬ್ರಮಣ್ಯದಲ್ಲಿ 2 ಮಾರುತಿ ಓಮಿನಿ, ಪುತ್ತೂರು ನಗರದಲ್ಲಿ 4 ವಾಹನಗಳನ್ನು ಪತ್ತೆ ಮಾಡಿರುವುದಾಗಿ ತಿಳಿದು ಬಂದಿದೆ. ಒಟ್ಟು 20 ವಾಹನಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇವುಗಳ ಮೌಲ್ಯ ಸುಮಾರು 44 ಲಕ್ಷ ರೂಪಾಯಿಗಳು ಆಗಿರುತ್ತದೆ.
ಸಕಲೇಶಪುರ ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಕೆ.ಎನ್. ಬಸವರಾಜ್ ರವರ ಕಾರ್ಯವನ್ನು ಇದೆ ವೇಳೆ ಮೆಚ್ಚಿ ಶ್ಲಾಘನೆ ವ್ಯಕ್ತಪಡಿಸಿದರು.