ಹಾಸನ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೊಜನೆಯಡಿ ತಾಲ್ಲೂಕು ಪಂಚಾಯಿತಿಗಳಲ್ಲಿ ಖಾಲಿ ಇರುವ ಆಡಳಿತ ಸಹಾಯಕ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಎನ್.ಐ.ಸಿ ಯ ಜಿಲ್ಲಾ ವೆಬ್ ಸೈಟ್ www.hassan.nic.in ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ 8, ವಾಣಿಜ್ಯಶಾಸ್ತ್ರ ವಿಬಾಗದಲ್ಲಿ ಪದವಿ ಪಡೆದಿದ್ದು ಜೊತೆಗೆ ಕಂಪ್ಯೂಟರ್ ಜ್ಞಾನ ಮತ್ತು ಕನ್ನಡ ಇಂಗ್ಲೀಷ್ ಟೈಪಿಂಗ್‍ನ್ನು ಕಲಿತಿರಬೇಕು. ಕನಿಷ್ಠ 21 ರಿಂದ ಗರಿಷ್ಠ 35 ವರ್ಷ ವಯೋಮಿತಿ ಹೊಂದಿರಬೇಕು. ಸೆ.3 ರಿಂದ ಸೆ.19 ಕೊನೆಯ ದಿನವಾಗಿದೆ.
ಮರೆಯದಿರಿ ಮರೆತು ನಿರಾಶರಾಗದಿರಿ ದಿ. ಸೆ.3 ರಿಂದ ಅರ್ಜಿ ಸಲ್ಲಿಸಿಬಿಡಿ