ಹಾಸನ : ಕೋವೀಡ್ ಲಸಿಕೆ ಪಡೆದ ನಂತರ ಮಾತನಾಡಿದ ಅವರು ಸರ್ಕಾರದ ನಿರ್ದೇಶನದಂತೆ ಜನವರಿ 5 ರಂದು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದೇನೆ ಈ ದಿನ ಎರಡನೇ ಬಾರಿ ಕೋವಿಡ್ ಲಸಿಕೆಯನ್ನು ಹಾಕಿಸಿ ಕೊಂಡಿದ್ದೇನೆ ಎಂದರು.
ಎರಡನೇ ಬಾರಿ ಲಸಿಕೆ ಪಡೆದ ನಂತರವೇ ರೋಗನಿರೋಧಕ ಶಕ್ತಿಯು ಉತ್ಪತ್ತಿಯಾಗುತ್ತದೆ. ಕೋವಿಡ್ ಲಸಿಕೆಯು ಸಂಪೂರ್ಣ ಸುರಕ್ಷಿತವಾಗಿದ್ದು. 60 ವರ್ಷದಿಂದ ಮೇಲ್ಪಟ್ಟ ಸಾರ್ವಜನಿಕರಿಗೂ ಹಾಗೂ 40 ವರ್ಷ ಮೇಲ್ಪಟ್ಟ ಅಸ್ವಸ್ತತೆ (ಕೊಂ ಮಾರ್ಬಿಟಿ) ಹೊಂದಿರುವವರು ನೊಂದಣಿ ಮಾಡಿಸಿ ತಾಲ್ಲೂಕು ಆಸ್ಪತ್ರೆಗಳು ಹಾಗೂ ಹಿಮ್ಸ್‍ನಲ್ಲಿ ಲಸಿಕೆಯನ್ನು ಪಡೆಯಬಹುದು ಎಂದು ತಿಳಿಸಿದರು.
ಕೆಲವು ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು. ಎರಡನೇ ಅಲೆ ಬರುವುದನ್ನು ತಡೆಯಲು ಲಸಿಕೆಯನ್ನು ಹಾಕಿಕೊಳ್ಳುವುದು ಉತ್ತ,ಮ ನಿಯಂತ್ರಣ ಕ್ರಮವಹಿಸಬಹುದು ಎಂದು ತಡೆಗಟ್ಟಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು .
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್, ಆರ್ ಸಿ ಎಚ್ ಅಧಿಕಾರಿ ಡಾ|| ಕಾಂತರಾಜ್ , ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ವಿಜಯ್ ಹಾಗೂ ಮತ್ತಿತರು ಹಾಜರಿದ್ದರು. #hassandc #hassandistrictadministration