ಮಂಗಳೂರು -ಸುಬ್ರಹ್ಮಣ್ಯ: ರೈಲ್ವೇ ಹಳಿ ವಿದ್ಯುದ್ದೀಕರಣ. ನೈಋತ್ಯ ರೈಲ್ವೇ ವಲಯದ ಹಾಗೂ ಪ್ರಯಾಣಿಕರ ಬಹು ನಿರೀಕ್ಷಿತ ಯೋಜನೆ

0

ಹಾಸನ : ಮಂಗಳೂರು -ಹಾಸನ- ಮೈಸೂರು ನಡುವಿನ ಒಟ್ಟು 300KM ಮತ್ತು ಅರಸೀಕರೆ-ಹಾಸನ ನಡುವಿನ 47KM ಉದ್ದದ ರೈಲು ಮಾರ್ಗವನ್ನು ವಿದ್ಯುದ್ದೀಕರಣ ಮಾಡಲು ಉದ್ದೇಶಿಸಲಾಗಿದೆ. ಒಟ್ಟು 461 ಕೋಟಿ₹ ಮೊತ್ತದ ಈ ಯೋಜನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು-ಚಿಕ್ಕಮಗಳೂರು ನಡುವಿನ‌ 45KM ರೈಲ್ವೇ ಹಳಿಯ ವಿದ್ಯುದ್ದೀಕರಣವೂ ಸೇರಿದೆ. ವಿವಿಧ ಹಂತಗಳಲ್ಲಿ ಈ ಕಾಮಗಾರಿ ಕೈಗೊಳ್ಳಲು

ರೈಟ್ಸ್‌ ( RIGHTS )ಸಂಸ್ಥೆ ಉದ್ದೇಶಿಸಿದೆ. , ಮಂಗಳೂರು-ಮೈಸೂರು ನಡುವಿನ ಕಾಮಗಾರಿಯಲ್ಲಿ ಸುಬ್ರಹ್ಮಣ್ಯ ರೋಡ್‌-ಸಕಲೇಶಪುರ ನಡುವಿನ ಪಶ್ಚಿಮ ಘಟ್ಟದ ಒಳಗಿನ 55KM ರೈಲು ಮಾರ್ಗ ಹೆಚ್ಚು ಸವಾಲಿನಿಂದ ಕೂಡಿದ್ದಾಗಿದೆ. ಹಸಿರು ಹಾದಿ ಎಂದು ಕರೆಯಲಾಗುವ ಈ ಮಾರ್ಗದಲ್ಲಿ ಬರೋಬ್ಬರಿ 57 ಸುರಂಗ, 109 ಸಣ್ಣ ಮತ್ತು ದೊಡ್ಡ ಸೇತುವೆಗಳು ಸಿಗುತ್ತವೆ. ಸಕಲೇಶಪುರ ಸಮುದ್ರ ಮಟ್ಟದಿಂದ 906 ಮೀ. ಎತ್ತರದಲ್ಲಿದ್ದರೆ,

ಸುಬ್ರಹ್ಮಣ್ಯ 120 ಮೀ. ಎತ್ತರದಲ್ಲಿದೆ. ಘಟ್ಟದ ಕಿರಿದಾದ ಹಾದಿಯಲ್ಲಿ ವಿದ್ಯುತ್‌ ಕಂಬಗಳು, ಕೇಬಲ್‌ಗ‌ಳನ್ನು ಅಳವಡಿಸುವುದು ಸಹಿತ ಎಂಜಿನಿಯರಿಂಗ್‌ ಕಾಮಗಾರಿ ಬಹು ಸವಾಲಿನಿಂದ ಕೂಡಿದ್ದಾಗಿದೆ., ಮಂಗಳೂರು-ಮೈಸೂರು ರೈಲ್ವೇ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಈಗಾಗಲೇ ಆರಂಭವಾಗಿದೆ. ರೈಟ್ಸ್‌ ಸಂಸ್ಥೆಯವರು ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ

ವಿವಿಧ ಹಂತಗಳಲ್ಲಿ ಕಾಮಗಾರಿ ನಡೆಯುತ್ತಿದೆ. ವಿವಿಧೆಡೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ್ದೇನೆ.
– ರಾಹುಲ್‌ ಅಗರ್ವಾಲ್‌ ಮೈಸೂರು ವಿಭಾಗೀಯ ರೈಲ್ವೇ ಪ್ರಬಂಧಕ

ನೈಋತ್ಯ ರೈಲ್ವೇ ವಲಯದ ಮೈಸೂರು ವಿಭಾಗದ ಬಹುನಿರೀಕ್ಷಿತ ಹಳಿ ವಿದ್ಯುದ್ದೀಕರಣ ಯೋಜನೆಯ ಭಾಗವಾಗಿ ಮಂಗಳೂರಿನಿಂದ ಸುಬ್ರಹ್ಮಣ್ಯದ ವರೆಗಿನ ಕಾಮಗಾರಿಗೆ ಚಾಲನೆ ದೊರೆತಿದೆ. , ಮಂಗಳೂರಿನಲ್ಲಿ ಈಗಾಗಲೇ

ದಕ್ಷಿಣ ರೈಲ್ವೇ ಹಾಗೂ ಕೊಂಕಣ ರೈಲ್ವೇಗೆ ಸಂಬಂಧಿಸಿದ ವಿದ್ಯುದ್ದೀಕರಣ ಕಾಮಗಾರಿಗಳು ಪೂರ್ಣಗೊಂಡಿದ್ದು, ವಿದ್ಯುತ್‌ ಚಾಲಿತ ರೈಲುಗಳು ಸಂಚರಿಸುತ್ತಿವೆ. , ಇದೀಗ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗವೂ ರೈಲು ಹಳಿ ವಿದ್ಯುದ್ದೀಕರಣಕ್ಕೆ ಒಳಗಾಗುತ್ತಿದೆ.

ಸುದ್ದಿ ಇಷ್ಟವಾದರೆ ಶೇರ್ ಮಾಡಿ , ಒಳ್ಳೆಯ ಸುದ್ದಿ ಹಂಚಿರಿ

LEAVE A REPLY

Please enter your comment!
Please enter your name here