ಕೋವಿಡ್‌ನಿಂದ ಮೃತಪಟ್ಟ ಬಡ BPL ಕುಟುಂಬದವರಿಗೆ ತಲಾ 10 ಸಾವಿರ ಪರಿಹಾರ -ಶಾಸಕ HDರೇವಣ್ಣ (ಹಾಸನ ಹಾಲು ಒಕ್ಕೂಟ ಡಿಸಿಸಿ ಬ್ಯಾಂಕ್ ) ನೆರವು

0

ಹಾಸನ : ಹಾಸನ ಹಾಲು ಒಕ್ಕೂಟ (ಹಾಮೂಲ್‌) ಶೇಕಡಾ 60 ಮತ್ತು ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಶೇಕಡಾ 40ರಷ್ಟು ನೆರವಿನಿಂದ ಹಾಸನ ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆಯಲ್ಲಿ ಮೃತಪ ಟ್ಟಿರುವ ಬಿಪಿಎಲ್‌ ಪಡಿತರ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಪರಿಹಾರ ಸಿಗಲಿದೆ ಎಂದು – HD ರೇವಣ್ಣ (ಶಾಸಕರು) ತಿಳಿಸಿದರು

• ಕೋವಿಡ್‌ನಿಂದ ಮೃತಪಟ್ಟ ಕಡು ಬಡ ಕುಟುಂಬದ ಒಬ್ಬ ಸದಸ್ಯರಿಗೆ 1ಲಕ್ಷ ಪರಿಹಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದು ಬೇರೆ

• ಖಾಸಗಿ ಆಸ್ಪತ್ರೆಗಳು ಕೋವಿಡ್‌ ಚಿಕಿತ್ಸೆಗೆ ದುಪಟ್ಟು ಹಣ ವಸೂಲಿಯಿಂದ ರೈತ ವರ್ಗ , ಬಡವ ತಮ್ಮಲ್ಲಿದ್ದ ಸಣ್ಣ ಪುಟ್ಟ ಸೇವಿಂಗ್ಸ್ , ಹಸುಗಳು , ಜಮೀನಿ ಮಾರುತ್ತಿರೋದು ಕೇಳಿ ಈ ನಿರ್ಧಾರ ಮಾಡಿದ್ದೇವೆ , ಬಡವರ ಸುಲಿಗೆ ಮಾಡುವುದನ್ನು ಹಾಸನ ಜಿಲ್ಲಾಧಿಕಾರಿಗಳು ತಡೆಯಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಲಸಿಕೆ ಕೊರತೆ ಉಂಟಾಗಿದೆ.  ಪೂರ್ಣ ಪ್ರಮಾಣದಲ್ಲಿ ಲಸಿಕೆ ಸಿಗುತ್ತಿಲ್ಲ. ಬಿಜೆಪಿ ಕ್ಷೇತ್ರದ ಶಾಸಕರಿಗೆ ಹೆಚ್ಚು ಲಸಿಕೆ ನೀಡಲಾಗಿದೆ. ರಾಜ್ಯದ ಜನರು ಸರ್ಕಾರಕ್ಕೆ ತೆರಿಗೆ ನೀಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು

ಸರ್ಕಾರ ನೀಡಿರುವ ಲಾಕ್‌ ಡೌನ್ ಪ್ಯಾಕೇಜ್‌ ಅರ್ಹರಿಗೆ ತಲುಪೋದು ಅಷ್ಟು ಸುಲಭವಿಲ್ಲ ಆನ್‌ಲೈನ್ ಅರ್ಜಿಗಿಂತ ಫಲಾನುಭವಿಗಳಿಗೆ ಸಡಿಲ ನಿಯಮಗೊಳಿಸಿ ಅರ್ಹರಿಗೆ ಪರಿಹಾರ ಸಿಗಲಿ ಎಂದರು

LEAVE A REPLY

Please enter your comment!
Please enter your name here