ನಾಳೆ ಫೆ.19 ರಿಂದ ಮಾ.8 ರ ವರೆಗೂ , ಹೊಳೆನರಸೀಪುರ ತಾಲೂಕಿನ ಅತ್ತಿಚೌಡೇನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ 20 ದಿನ ಬೆಳಿಗ್ಗೆ ಯಿಂದ ಸಂಜೆ ವರೆಗೂ ವಿದ್ಯುತ್ 💡 ವ್ಯತ್ಯಯವಾಗಲಿದೆ : ಗಮನಿಸಿ 🕯

0

ವಿದ್ಯುತ್ ವ್ಯತ್ಯಯ !
ಹಾಸನ ಫೆ.18 (ಹಾಸನ್_ನ್ಯೂಸ್ !, ಹೊಳೆನರಸೀಪುರ ತಾಲ್ಲೂಕಿನಲ್ಲಿರುವ ಅತ್ತಿಚೌಡೇನಹಳ್ಳಿ ವಿದ್ಯುತ್ ಉಪಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ವಿದ್ಯುತ್ ಮಾರ್ಗವನ್ನು ಲಿಲೋ ಮಾಡುವ ಕಾಮಗಾರಿಗೆ ಸಂಬಂಧಿಸಿದಂತೆ  ಚನ್ನರಾಯಪಟ್ಟಣ-ಮಳಲಿ ವಿದ್ಯುತ್ ಮಾರ್ಗದ ಲೈನ್‍ಕ್ಲಿಯರ್ ತೆಗೆದುಕೊಳ್ಳುವುದರಿಂದ ಅತ್ತಿಚೌಡೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ಫೆ.19 ರಿಂದ ಮಾ.8 ರವರೆಗೆ ಬೆಳಿಗ್ಗೆ 9  ಗಂಟೆಯಿಂದ ಸಂಜೆ 5  ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದು ಎಂದು ಬೃಹತ್ ಕಾಮಗಾರಿ ವಿಭಾಗ, ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

#cescomupdatesholenarasipura #cescom #powersheduleupdatesholenarasipura

LEAVE A REPLY

Please enter your comment!
Please enter your name here