ಹಾಸನ / ಹೊಳೆನರಸೀಪುರ: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಹಾಸನದ ಇಬ್ಬರು ಕರ್ನಾಟದಲ್ಲೇ 15ನೇ ಹಾಗೂ 34ನೇ ರ್ಯಾಂಕ್ ಪಡೆಯುವ ಮೂಲಕ ತೇರ್ಗಡೆ ಹೊಂದಿ ಕೀರ್ತಿ ತಂದು ಸೇವೆ ಸಲ್ಲಸಲು ಸನ್ನದ್ದರಾಗಿದ್ದಾರೆ.
ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ದೊಡ್ಡೇನಹಳ್ಳಿ ಗ್ರಾಮದ ಸುಪ್ರಿಯಾ ಎಲ್ ಗೌಡ D/o ಲೊಕೇಶ್ ಹೆಚ್ ಆರ್ 15 ನೇ ರ್ಯಾಂಕ್ ಪಡೆದರೆ
ಹೊಳೆನರಸೀಪುರ ಪಟ್ಟಣದ ದಾಸಗೌಡರ ಬೀದಿಯ ನಿವಾಸಿ ಜಗದೀಶ್ ಮತ್ತು ಕಲ್ಪನಾ ದಂಪತಿ ಪುತ್ರಿ ಎಚ್.ಜೆ. ಮಿಲನಾ ಕೂಡ ಮಹಿಳಾ ವಿಭಾಗದಲ್ಲಿ 34ನೇ ರ್ಯಾಂಕ್ ಗಳಿಸಿದ್ದಾರೆ.
ರ್ಯಾಂಕ್ ಪಡೆದ ಹೆಚ್ ಜೆ ಮಿಲನಾ ಅವರ ಮಾತು ಓದಿ ನಿಜಕ್ಕು ನಿಮಗೂ ಖುಷಿಯಾಗುತ್ತದೆ :
” ನಾನು ನನ್ನ ಹೈಸ್ಕೂಲ್ ದಿನಗಳಿಂದಲೇ ಸರ್ಕಾರದ ಉನ್ನತ ಅಧಿಕಾರಿ ಆಗಬೇಕೆಂದುಕೊಂಡು ಗುರು– ಹಿರಿಯರ ಮರ್ಗದರ್ಶನದಲ್ಲಿ ಚೆನ್ನಾಗಿ ವ್ಯಾಸಂಗ ಮಾಡಿದ್ದೆ. ಅಂತೆಯೇ ನನಗೆ ನನ್ನ ಪೋಷಕರು ಹಾಗೂ ಶಿಕ್ಷಕರು ಸಹಕಾರ ನೀಡಿದ್ದರು. ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ. ಮುಂದೆ ನಾನು ಸೇವೆಯಲ್ಲಿದ್ದು UPSC ಪರೀಕ್ಷೆಗೆ ಸಿದ್ಧತೆ ನಡೆಸುತ್ತೇನೆ” ಎಂದು 34 ನೇ ರ್ಯಾಂಕ್ ಪಡೆದ ಮಿಲನಾ ಹೇಳಿದರೇ
15ನೇ ರ್ಯಾಂಕ್ ಪಡೆದ ಸುಪ್ರಿಯಾ ” ಈ ಫಲಿತಾಂಶವು ಸಾರ್ವಜನಿಕ ವಲಯಗಳಲ್ಲಿ ಉತ್ತಮ ಕಾರ್ಯಕ್ಷಮತೆಯ ಪ್ರಾಮಾಣಿಕ ಕೆಲಸದ ಕಾಯಕ ಮಾಡಲು ಸದುದ್ದೇಶಿಸಿದ್ದೇನೆ ಎಂದರು.
Pooja P D/O Prabu N
ಬೀರನಹಳ್ಳಿ (v) ಹರಿಹರಪುರ (po) ಹೊಳೆನರಸೀಪುರ (tq) ಹಾಸನ ( district ) ಇವರು 20ನೇ RANK ಪಡೆದಿದ್ದಾರೆ
34ನೇ RANK ಗಾಯತ್ರಿ HK D/o ಕೇಶವೇಗೌಡ , ಕೊಣನೂರು ಹೋಬಳಿ , ಹಂಡ್ರಂಗಿ ಗ್ರಾಮ , ಅರಕಲಗೂಡು ತಾ. ಹಾಸನ
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಸ್ಪರ್ಧಿಸಿದ ಹಾಸನದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆಗಳು