ಹಾಸನ ಜಿಲ್ಲೆಯ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ 12ವರ್ಷದ ಬಾಲಕಿ ಸಾವು: 

0

ಹಾಸನ ಜಿಲ್ಲೆಯ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಬಾಲಕಿ ಸಾವನ್ನಪ್ಪಿದ ದುರ್ಘಟನೆ ಭಾನುವಾರ (;28May2023 );ಬೆಳಗ್ಗೆ ನಡೆದಿದೆ. ಖುಷಿ (12) ಸಾವನ್ನಪ್ಪಿದ ಬಾಲಕಿಯಾಗಿದ್ದು . ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ,

ಬಿಕ್ಕೋಡು ಬಳಿ ಘಟಿಸಿದೆ . ಧನರಾಜ್-ವೀಣಾ ದಂಪತಿ ಪುತ್ರಿ ಖುಷಿ. ಪ್ರವಾಸ ವೇಳೆ ಗ್ರೀನ್ ಪಾಸ್ಟೋ ರೆಸಾರ್ಟ್‌ಗೆ ಕುಟುಂಬ ಸದಸ್ಯರು ಆಗಮಿಸಿದ್ದು . ಊಟ ಮಾಡುವ ವೇಳೆ ಪೋಷಕರಿಗೆ ತಿಳಿಯದಂತೆ ಬಾಲಕಿ ಖುಷಿ ಈಜಲು ತೆರಳಿದ್ದಳು. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಮಗಳನ್ನು ಹುಡುಕಿದಾಗ ಈಜುಕೊಳದಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು .

ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಅರೇಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

LEAVE A REPLY

Please enter your comment!
Please enter your name here