ಕೊಬ್ಬರಿಗೆ ಬೆಂಬಲ ಬೆಲೆ ಒತ್ತಾಯಿಸಿ ಸಪ್ಟಂಬರ್ 26ರಿಂದ ಅಕ್ಟೋಬರ್ 4 ವರೆಗೆ ಬೃಹತ್ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಕಾರ್ಯಕ್ರಮ

0

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇವರ ವತಿಯಿಂದ. ಅರಸೀಕೆರೆ ನಗರದ ಎ.ಪಿ.ಎಂ.ಸಿ. ಆವರಣದಿಂದ ಬಿ ಹೆಚ್ ರಸ್ತೆ ಮಾರ್ಗವಾಗಿ ರಾಜ್ಯ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್, ಶಾಂತಕುಮಾರ್ ತಿಪಟೂರ್ ಇವರ ನೇತೃತ್ವದಲ್ಲಿ ನೂರಾರು ರೈತರೊಂದಿಗೆ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಾ ಪಿಪಿ ವೃತ್ತದಲ್ಲಿ ಕೊಬ್ಬರಿ ರಸ್ತೆಗೆ ಸುರಿದು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ. ತಾಸಿಲ್ದಾರ್ ಗ್ರೇಟ್ 2 ಪಾಲಕ್ಷ ಅವರಿಗೆ ಮನವಿ ಪತ್ರ ನೀಡಿ ರಾಜ್ಯ ಸರ್ಕಾರಕ್ಕೆ ಗಮನಕ್ಕೆ ತರುವಂತೆ ತಿಳಿಸಿದರು.

ನಂತರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕ್ ತೆಂಗು ಬೆಳೆಯುವ ಪ್ರದೇಶ ಹೊಂದಿದ್ದು ಮಾರುಕಟ್ಟೆ ಏಷ್ಯಾ ಖಂಡದಲ್ಲಿಯೇ ಆತೀ ದೊಡ್ಡ ಕೊಬ್ಬರಿ ಮಾರುಕಟ್ಟೆಯಾಗಿದೆ. 18 ಸಾವಿರ ರೂ.ಗಳಿಗೆ ಮಾರಾಟವಾಗತ್ತಿದ್ದ ಕ್ವಿಂಟಾಲ್ ಕೊಬ್ಬರಿ ಕಳೆದ 8 ತಿಂಗಳಿಂದ ಬೆಲೆ ಕುಸಿಯುತ್ತಾ 7500/- ರೂ.ಗಳಿಗೆ ತಲುಪಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆಗಿಂತ ಸುಮಾರು 4000/- ಕಡಿಮೆ ದರದಲ್ಲಿ ಕೊಬ್ಬರಿ ಖರೀದಿಯಾಗುತ್ತಿದೆ.

ಕೇಂದ್ರ ಸರ್ಕಾರದ ಆದೇಶದಂತೆ ಕಳೆದ ಎರಡು ತಿಂಗಳಿಂದ ನಪೆಡ್ ರೈತರಿಂದ ಕೊಬ್ಬರಿ ಖರೀದಿಸುತ್ತಿದ್ದು ಖರೀದಿ ಪ್ರಕ್ರಿಯೆ 20 ದಿನಗಳಿಂದ ಸ್ಥಗಿತಗೊಂಡಿದೆ. ಕೂಡಲೇ ಇದನ್ನು ಪ್ರಾರಂಭಿಸಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಕ್ವಿಂಟಾಲ್‌ಗೆ 11750/- ರೂ.ಗಳು ವೈಜ್ಞಾನಿಕ ನ್ಯಾಯ ಸಮ್ಮತ ಬೆಲೆಯಲ್ಲಿ ರಾಜ್ಯದ ಇಂದಿನ ಕೃಷಿ ಬೆಲೆ ಆಯೋಗ ಕ್ವಿಂಟಾಲ್‌ಗೆ 17000/- ರೂ. ಬೆಂಬಲ ಬೆಲೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ನುಸಿ ಪೀಡೆ ರೋಗ ಕಾಂಡ ಕೊರೆತ, ಅತಿವೃಷ್ಟಿ, ಅನಾವೃಷ್ಟಿ, ಇಳುವರಿಯಿಂದ ಕುಂಠಿತ ಬೆಲೆ ಕುಸಿತದಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ.

ರಾಜ್ಯ ಸರ್ಕಾರ ಬೆಂಬಲ ಬೆಲೆಯನ್ನು 25 ಸಾವಿರಗಳಿಗೆ ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದರು ಹಾಗೂ ಇತರ ಬೇಡಿಕೆಗಳಾದ – 1. ಕೃಷಿ ಕಾಯ್ದೆ ವಾಪಾಸಿಗೆ ಒತ್ತಾಯಿಸಿ 2. ಎಂ.ಎಸ್.ಪಿ. ಶಾಸನಬದ್ಧಗೊಳಿಸಬೇಕೆಂದು 3. ಶೀಘ್ರವೇ ಬರಗಾಲ ಘೋಷಣೆ ಮಾಡಬೇಕು. 4. ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಕಡಿತವನ್ನು ನಿಲ್ಲಿಸಬೇಕು. 5. ಕಬ್ಬಿಗೆ ಎಫ್.ಆರ್.ಪಿ. ಜೊತೆಗೆ ಸರ್ಕಾರವು ಎಸ್‌.ಎ.ಪಿಯನ್ನು ಘೋಷಣೆ ಮಾಡಬೇಕು ಹಾಗೂ ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಜಾಸ್ತಿಯಾಗಿದ್ದು ದಿನದಿಂದ ದಿನಕ್ಕೆ ಜನ ಜಾನುವಾರುಗಳ ಮರಣಗಳು ಹೊಂದುತ್ತಿದ್ದು ಸರ್ಕಾರ ಮತ್ತು ಜಿಲ್ಲಾಡಳಿತ ಶಾಶ್ವತ ಪರಿಹಾರವನ್ನು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರೆ ಸೇನೆಯ ಹಲವು ಮುಖಂಡರು ಕಾರ್ಯಕರ್ತರು ಉಪಸಿತ್ತಿದ್ದರು. ಈ ಸಂದರ್ಭದಲ್ಲಿ ಡಿ ವೈ ಎಸ್ ಪಿ ಲೋಕೇಶ್ ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ್ ಇವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ ಮಾಡಲಾಗಿತ್ತು.

LEAVE A REPLY

Please enter your comment!
Please enter your name here