ಹಾಸನ ಡಿ.19 (ಹಾಸನ್_ನ್ಯೂಸ್): ಸಣ್ಣ ಕೈಗಾರಿಕೆಗಳ ಪ್ರಾರಂಭಕ್ಕೆ ಬೇಡಿಕೆ ಹೆಚ್ಚುತಿರುವ ಹಿನ್ನಲೆಯಲ್ಲಿ ಜಿಲ್ಲಾ ಸಣ್ಣ ಕೈಗಾರಿಕಗಳ ಸಂಘದಿಂದ ನಗರದ ಹೊರವಲಯದ ಕನಿಷ್ಠ 10 ಎಕರೆ ಜಾಗವನ್ನು ಖರೀದಿಸಿ ಭೂ ಪರಿವರ್ತನೆ ಮಾಡಿ ನೀವೇಶನಗಳ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯಲ್ಲಿ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳು ಸಣ್ಣ ಕೈಗಾರಿಕೆಗಳಿಗೆ ಹೊಸ ಬಡವಾಣೆ ನಿರ್ಮಿಸಿ ನೀವೇಶನಗಳನ್ನು ಒದಗಿಸಲು ಕೊರಿದ ಹಿನ್ನಲೆಯಲ್ಲಿ ಸಂಘದ ವತಿಯಿಂದಲೇ ಈ ಪ್ರಕ್ರಿಯೆ ಕೈಗೊಂಡಲ್ಲಿ ನಿಯಮನುಸಾರ ಭೂ ಪರಿವರ್ತನೆಗೆ ಜಿಲ್ಲಾಡಳಿತದಿಂದ ನೆರವು ನೀಡಲಾಗುವುದು ಎಂದರು
ಸಭೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಕೆ. ಎಸ್. ಎಸ್. ಐ. ಡಿ.ಸಿ. , ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಅಗ್ರಣೀಯ ಬ್ಯಾಂಕ್ ವಿಷಯಗಳು, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ,ಚೆಸ್ಕಾಂ ಕಾಮಗಾರಿ ಪ್ರಗತಿ , ವಾಣಿಜ್ಯ ತೆರಿಗೆ ಇಲಾಖೆ ವಿಷಯಗಳು ಹಾಗೂ ಕೈಗಾರಿಕೆಗಳು ಪ್ರೋತ್ಸಾಹ ನೀಡುವ ವಿಷಯ ಕುರಿತು ಚರ್ಚೆ ನಡೆಸಲಾಯಿತು.
ಕೆ. ಎಸ್. ಎಸ್. ಐ. ಡಿ.ಸಿ. ವತಿಯಿಂದ ಕೈಗಾರಿಕೆಗೆ ನಿಡಿರುವ ಜಾಗಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಿ ನಂತರ ತೆರಿಗೆ ಸಂಗ್ರಹಿಸಿ ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಪ್ರತ್ಯೇಕ ಟ್ರಕ್ ಟರ್ಮಿನಲ್ ಸ್ಥಾಪನೆ ಹೊಸ ಕೈಗಾರಿಕೆಗಳಿಗೆ ಹಣ ಬಿಡುಗಡೆ, ಸಣ್ಣ ಕೈಗಾರಿಕಾ ಲೇಔಟ್ ನಿರ್ಮಾಣ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ಆ.20 ರಂದು ಜರುಗಿದ ಜಿಲ್ಲಾ ಮಟ್ಟದ ಕೈಗಾರಿಕಾ ಸ್ಪಂದನ ಸಭೆಯ ನಡಾವಳಿಯನ್ನು ಅನುಮೋದಿಸಲಾಯಿತು , ಹಾಸನ ಕೈಗಾರಿಕಾ ವಸಾಹತು ವಿನಲ್ಲಿರುವ ಕಾಟೀಹಳ್ಳಿ ಕೆ. ಎಸ್. ಎಸ್ ಐ. ಡಿ. ಸಿ. ನಿಗಮದ ಕಚೇರಿಯಲ್ಲಿ ಕೈಗಾರಿಕಾ ಸಂಘದವರಿಗೆ ಬಾಡಿಗೆ ಆಧಾರದಲ್ಲಿ ನೀಡುವ ಹಾಗೂ ಸರಕು ಸಾಗಾಣಿಕೆ ವಾಹನಗಳ ನಿಲ್ಲಿಸಲು ಅವಕಾಶ ಮಾಡಿಕೊಡಲು ಜಿಲ್ಲಾಧಿಕಾರಿ ಸೂಚಿಸಿದರು.
ನಗರದಲ್ಲಿ ಎ.ಪಿ.ಎಂ.ಸಿ ಯಲ್ಲಿ ತರಕಾರಿ ಮಾರಾಟಕ್ಕೆ ಜಾಗ ಸಾಕಾಗುತ್ತಿದೆ ಹಾಗಾಗಿ ಆಲೂಗೆಡ್ಡೆ ಮಾರಾಟ ಕೇಂದ್ರಕ್ಕೆ ಹೆಚ್ಚಿನ ಜಾಗದ ಅವಶ್ಯಕತೆ ಇದೆ. ಹಾಗೂ ಅಲೂಗೆಡ್ಡೆ ಮಾರಾಟ ಕೇಂದ್ರಕ್ಕೆ ಪ್ರತ್ಯೆಕ ಜಾಗ ಗುರುತಿಸುವುದು ಅಗತ್ಯವಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಭೆಯಲ್ಲಿ ಜಿಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ರಾದ ಟಿ. ದಿನೇಶ್, ಸಣ್ಣ ಕೈಗಾರಿಕ ಸಂಘದ ಅಧ್ಯಕ್ಷರಾದ ಮಹಂತಪ್ಪ, ಕರ್ನಾಟಕ ಸಣ್ಣ ಕೈಗಾರಿಕ ಸಂಘದ ಪ್ರಮುಖರಾದ ಕಿರಣ್ ಕೈಗಾರಿಕೆ ವಾಣಿಜ್ಯ ಮಂಡಳಿಯ ಜಿಲ್ಲಾ ಅಧ್ಯಕ್ಷರಾದ ಧನಪಾಲ್ ಜೈನ್ ಹಾಗೂ ಮತಿತ್ತರ ಅಧಿಕಾರಿಗಳು ಹಾಜರಿದ್ದರು.