ಹಾಸನ / ಆಲೂರು : ದಿನಾಂಕ: 22.09.2022 ರಂದು ಸಂಜೆ 5.00 ಗಂಟೆಗೆ ಕಿತ್ತಗೆರೆ ಗ್ರಾಮ ಆಲುರೂ ತಾಲ್ಲೂಕು ರಮೇಶ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅನ್ವಯ ದಿನಾಂಕ:21.09.2022 ರಂದು ಬೆಳಗ್ಗೆ 05.30 ಗಂಟೆಯಲ್ಲಿ ತಮ್ಮ ಸಂಸಾರ ಸಮೇತ ಮನೆಗೆ ಬೀಗ ಹಾಕಿಕೊಂಡು ದೇವಸ್ಥಾನಕ್ಕೆ ಹೋಗಿ ವಾಪಸ್ಸು ಅದೇ ರಾತ್ರಿ 9.30 ಗಂಟೆಗೆ ಬಂದು ನೋಡಿದಾಗ
ಮನೆಯ ಹಿಂಭಾಗದ ಬಾಗಿಲಿನ ಒಳಭಾಗದ ಚಿಲಕವನ್ನು ಪಕ್ಕದಲ್ಲಿದ್ದ ಕಿಟಕಿಯಿಂದ ಕೈ ಹಾಕಿ ತೆಗೆದು ಮನೆಯ ಒಳಕ್ಕೆ ಪ್ರವೇಶಿಸಿ ಮನೆಯ ಬೀರುವಿನಲ್ಲಟ್ಟಿದ್ದ ಒಟ್ಟು 144 ಗ್ರಾಂ ತೂಕದ 1) ಲಾಂಗ್ ಚೈನ್ 2) ನಾಲ್ಕು ಜೊತೆ ಚಿನ್ನದ ಬಳೆಗಳು 3) ಒಂದು ಚಿನ್ನದ ನೆಕ್ಲಿಸ್ 4 ಐದು ಚಿನ್ನದ ಉಂಗುರಗಳು 5)ಒಂದು ಚಿನ್ನದ ಮಾಟ ಒಟ್ಟು 180 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಇವುಗಳ ಅಂದಾಜು ಬೆಲೆ 9 ಲಕ್ಷ ಆಗಿರುವುದಾಗಿ ನೀಡಿದ ದೂರಿನ ಮೇರೆಗೆ, ಆಲೂರು ಪೊಲೀಸ್ ಕಲಂ: 454, 380 ಐ.ಪಿ.ಸಿ. ಪ್ರಕರಣ ದಾಖಲಾಗಿ
ಪ್ರಕರಣದ ತನಿಖೆಯನ್ನು ಮುಂದುವರೆಸಿ ಆರೋಪಿಯಾದ ಭರತ್ ಕೆ.ಎಂ. ಎನ್ ಮಲ್ಲೇಶ್ ಕೆ.ಸಿ. ( 22 ವರ್ಷ, ಕೂಲಿ ಹಾಗೂ ವ್ಯವಸಾಯ) ಕಿತ್ತಗೆರೆ ಗ್ರಾಮ, ಕೆ.ಹೊಸಕೋಟೆ ಹೋಬಳಿ, ಆಲೂರು ತಾಲ್ಲೂಕು ಈತನನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಲಾಗಿ ಈತನು ಈ ಕೇಸಿಗೆ ಸಂಬಂಧಿಸಿದಂತೆ ವಿಚಾರಣೆ ಮಾಡಿದ್ದು, ಈತನು ದಿ: 21.09.2022 ರಂದು ಮಧ್ಯಾಹ್ನ ತಾನು ಒಬ್ಬನೇ ರಮೇಶ್ ರವರ ಮನೆಯ ಹಿಂಬಾಗಿಲಿನ ಚಿಲಕವನ್ನು ಕಿಟಕಿಯಿಂದ ಕೈ ಹಾಕಿ ತೆಗೆದು ಮನೆಯ ಒಳಕ್ಕೆ ಹೋಗಿ ಮನೆಯ ಬೀರುವಿನಲ್ಲಿದ್ದ
ಒಟ್ಟು 180 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿರುವುದಾಗಿ ತನಿಖೆಯ ಕಾಲದಲ್ಲಿ ಸ್ವ-ಇಚ್ಚಾ ಹೇಳಿಕೆ ನೀಡಿರುತ್ತಾನೆ. ಈ ಪ್ರಕರಣದಲ್ಲಿ ಸುಮಾರು 9 ಲಕ್ಷ ಮೌಲ್ಯದ ಒಟ್ಟು 180g ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಹರಿರಾಂ ಶಂಕರ್ ಐಪಿಎಸ್ ಪೊಲೀಸ್ ಅಧೀಕ್ಷಕರು ಹಾಸನ ಜಿಲ್ಲೆ ಹಾಸನ: ತಮ್ಮಯ್ಯ, ಕೆ.ಎಸ್.ಪಿ.ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ ಮತ್ತು ಶ್ರೀ ಮಿಥುನ್ ಐ.ಪಿ.ಎಸ್. ಸಹಾಯಕ ಪೊಲೀಸ್ ಅಧೀಕ್ಷಕರು ಸಕಲೇಶಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಮನೆಕಳ್ಳತನ ಪ್ರಕರಣದ ಪತ್ತೆಗಾಗಿ ಶ್ರಮಿಸಿದ ಹೇಮಂತ್ ಕುಮಾರ್.ಎಸ್, ಪಿ.ಐ ಆಲೂರು ಪೊಲೀಸ್ ಠಾಣಿ, ಗಣೇಶ್.ಪಿಎಸ್ಐ. ಚನ್ನೇಗೌಡ, ಪಿಎಸ್ಐ, ನಾಗೇಶ್, ಪಿಎಸ್ಐ, ಅನಂತ ಎ.ಎಸ್ಐ, ಕಾಳೇಗೌಡ ಪ್ರೋ.ಪಿ.ಎಸ್.ಐ. ರವಿ ಟಿ.ಪಿ. ಹೆಚ್.ಸಿ, ಸೋಮಶೇಖರ್, ರಾಕೇಶ್ ಪಿ.ಸಿ. , ಹರೀಶ್.ಎಂ, ಪಿಸಿ ರೇವಣ್ಣ ಪಿ.ಸಿ., ಶ್ರೀಮತಿ ತೀರ್ಥಕುಮಾರಿ ಮಹೆಚ್ ಮಮಿತಾ ಮಹಿಳಾ ಪಿ.ಸಿ. ಜೀಪ್ ಚಾಲಕರುಗಳಾದ ಶ್ರೀ ಯೋಗೇಶ್, ಎಹೆಚ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಗಣಕಯಂತ್ರ ವಿಭಾಗದ ಸಿ.ಡಿ.ಆರ್. ತಾಂತ್ರಿಕ ಸಹಾಯಕರಾದ ಶ್ರೀ ಪೀಖಾನ್ ಎಹೆಚ್ಸಿ ರವರುಗಳ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಹಾಸನ ಜಿಲ್ಲೆ ಹಾಸನ ರವರು ಶ್ಲಾಘಿಸಿರುತ್ತಾರೆ.
ಪೊಲೀಸ್ ಅಧೀಕ್ಷಕರು ಹಾಸನ ಜಿಲ್ಲೆ ಹಾಸನ,